×
Ad

ಚುನಾವಣಾ ಕಾನೂನು ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2016-02-24 23:52 IST

ಹೊಸದಿಲ್ಲಿ, ಫೆ 24: ಬಾಂಗ್ಲಾದೇಶದ ಪರಾವೃತ ಪ್ರದೇಶಗಳಿಂದ ಬಂದ ನಾಗರಿಕರಿಗೆ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಅನುಸಾರವಾಗಿ ಮತದಾನ ಹಕ್ಕು ನೀಡುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಇಂದು ಚುನಾವಣಾ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ.
   ಗಡಿ ನಿರ್ಣಯ ಕಾಯ್ದೆ(2002) 11 ರ ಸೆಕ್ಷನ್ ಮತ್ತು ಜನಪ್ರತಿನಿಧಿ ಕಾಯ್ದೆ (1950) ರ 9 ಸೆಕ್ಷನ್ ತಿದ್ದುಪಡಿಗೆ ಅವಕಾಶ ಕೋರಿ ಚುನಾವಣಾ ಕಾನೂನು ತಿದ್ದುಪಡಿ ಮಸೂದೆ 2016ಯನ್ನು ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಲೋಕಸಭೆಯಲ್ಲಿ ಪ್ರಸ್ತಾಪಿಸಿದರು.
294 ಸದಸ್ಯ ಬಲವುಳ್ಳ ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 29 ರಂದು ಮುಕ್ತಾಯಗೊಳ್ಳಲಿದೆ ಆದರೆ ಅವಧಿಗೆ ಮುಂಚಿತವಾಗಿ ಚುನಾವಣೆ ನಡೆಯುವುದರಿಂದ ಬೇಗನೆ ವಿಧೇಯಕಗೊಳ್ಳುವ ಅಗತ್ಯವಿದೆ ಎರಡು ದಿನದಲ್ಲಿ ಉಭಯ ಸದನಗಳಲ್ಲಿ ಯಾವುದೇ ಚರ್ಚೆಗಳಿಲ್ಲದೆ ಮಸೂದೆ ಅಂಗೀಕಾರ ದೊರಕುವ ಭರವಸೆ ಸರಕಾರಕ್ಕಿದೆ ಎಂದು ತಿಳಿದುಬಂದಿದೆ.
  ಬಾಂಗ್ಲಾದೇಶದ ಪರಾವೃತ ನಾಗರಿಕರಿಗೆ ಮುಂಬರುವ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆ ನಡೆಯಲಿರುವುದರಿಂದ ಮತದಾನದ ಹಕ್ಕು ನೀಡುವ ಆವಶ್ಯಕತೆಯ ಕುರಿತು ಇತ್ತೀಚೆಗೆ ಕಾನೂನು ಸಚಿವಾಲಯದ ಅಧಿಕಾರಿಗಳೊಂದಿಗೆ ಚುನಾವಣಾ ಆಯೋಗ ಚರ್ಚಿಸಿದೆ.
 51 ಬಾಂಗ್ಲಾದೇಶ ಹಾಗೂ 111 ಭಾರತೀಯ ಪರಾವೃತ ನಾಗರಿಕರನ್ನು ಕಳೆದ ವರ್ಷದ ಜುಲೈ ವಿನಿಮಯ ಮಾಡಲಾಗಿತ್ತು.ಈ ವಿನಿಮಯದ ಅನ್ವಯ, ಪ್ರಸ್ತಾವಿತ ಮಸೂದೆ ಅಂಗೀಕಾರಗೊಂಡರೆ ಪಶ್ಚಿಮ ಬಂಗಾಳ ಕೂಚ್‌ಬೆಹರ್ ಜಿಲ್ಲೆಯ ವಿಧಾನಸಭೆ ಮತ್ತು ಸಂಸತ್ತು ಕ್ಷೇತ್ರಗಳ ಪುನರ್ ವಿಂಗಡಣೆಗೆ ಚುನಾವಣಾ ಆಯೋಗ ಕ್ರಮಕೈಗೊಳ್ಳಲಿವೆ ಎಂದು ತಿಳಿದುಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವರ್ಷ ಜೂನ್‌ನಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ 1974ರ ಭೂ ಗಡಿ ಒಪ್ಪಂದ ಮತ್ತು 2011ರ ಶಿಷ್ಟಾಚಾರ ಅನ್ವಯ ಪರಾವೃತ ನಾಗರಿಕರ ವಿನಿಮಯಯಕ್ಕೆ ಅಂಗೀಕಾರ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News