×
Ad

ರಾಜಸ್ಥಾನ: ಮತದಾರ ಪಟ್ಟಿಯಿಂದ 42 ಲಕ್ಷ ಮಂದಿ ಹೊರಗೆ

Update: 2025-12-16 23:56 IST

 ಸಾಂದರ್ಭಿಕ ಚಿತ್ರ (PTI)

ಜೈಪುರ, ಡಿ. 16: ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವೇಳೆ, ರಾಜಸ್ಥಾನದ ಮತದಾರರ ಪಟ್ಟಿಯಿಂದ ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ನವೀನ್ ಮಹಾಜನ್ ತಿಳಿಸಿದ್ದಾರೆ.

5.46 ಕೋಟಿ ಮತದಾರರ ಪೈಕಿ 41.79 ಲಕ್ಷ ಮತದಾರರಿಂದ ನೋಂದಣಿ ಅರ್ಜಿಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಮಹಾಜನ್ ಹೇಳಿದರು. ಅಳಿಸಿ ಹಾಕಲಾಗಿರುವ ಮತದಾರರಲ್ಲಿ 8.75 ಲಕ್ಷ ಮೃತಪಟ್ಟಿದ್ದಾರೆ, 29.6 ಲಕ್ಷ ಮನೆ ಬದಲಾಯಿಸಿದ್ದಾರೆ ಅಥವಾ ಮನೆಯಲ್ಲಿ ಇಲ್ಲ ಮತ್ತು 3.44 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ.

ಇದಲ್ಲದೆ, 11 ಲಕ್ಷ ಮತದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News