×
Ad

ನಕಲಿ ಕಾನೂನು ಪದವಿಗಳ ಕುರಿತು 160 FIRಗಳು ದಾಖಲು: ನ್ಯಾಯಾಲಯಕ್ಕೆ ಬಿಸಿಡಿ ಮಾಹಿತಿ

Update: 2025-12-16 22:56 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.16: ದಿಲ್ಲಿಯಲ್ಲಿ ನಕಲಿ ವಕೀಲರ ಗುಂಪೊಂದು ಕಾರ್ಯಾಚರಿಸುತ್ತಿದೆ ಎಂದು ಸೋಮವಾರ ಇಲ್ಲಿಯ ಸಾಕೇತ್ ನ್ಯಾಯಾಲಯಕ್ಕೆ ತಿಳಿಸಿರುವ ದಿಲ್ಲಿ ವಕೀಲರ ಸಂಘವು (ಬಿಸಿಡಿ),ಇಂತಹ ವಕೀಲರು ಬಿಸಿಡಿಯಲ್ಲಿ ನೋಂದಾಯಿಸಿಕೊಳ್ಳಲು ನಕಲಿ ಪದವಿ ಪ್ರಮಾಣಪತ್ರಗಳನ್ನು ಬಳಸುತ್ತಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.

ದಿಲ್ಲಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ವಕೀಲರ ನಕಲಿ ಪದವಿಗಳಿಗೆ ಸಂಬಂಧಿಸಿದಂತೆ ಬಿಸಿಡಿ 160 ಎಫ್‌ಐಆರ್‌ಗಳನ್ನು ದಾಖಲಿಸಿದೆ. ದಿಲ್ಲಿಯಲ್ಲಿ ನಕಲಿ ವಕೀಲರ ಗ್ಯಾಂಗ್‌ವೊಂದು ಕಾರ್ಯಾಚರಿಸುತ್ತಿದ್ದು, ಇದೊಂದು ಬೃಹತ್ ಜಾಲವಾಗಿದೆ. ನಕಲಿ ಪದವಿಗಳ ಆಧಾರದಲ್ಲಿ ನೋಂದಣಿಗಳನ್ನು ಅವರು ಕೋರುತ್ತಾರೆ ಎಂದು ಬಿಸಿಡಿ ಪರ ವಕೀಲರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶುನಾಲಿ ಗುಪ್ತಾ ಅವರಿಗೆ ತಿಳಿಸಿದರು.

ಸುಮಾರು ಎರಡು ಲಕ್ಷ ವಕೀಲರು ಬಿಸಿಡಿಯಲ್ಲಿ ನೋಂದಣಿ ಹೊಂದಿದ್ದು, ಕೇವಲ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚಿನ ವಕೀಲರ ದಾಖಲೆಗಳನ್ನು ದೃಢಪಡಿಸಿಕೊಳ್ಳಲಾಗಿದೆ. ವಿವಿಗಳು ಬಿಸಿಡಿಗೆ ಉತ್ತರಿಸದ್ದರಿಂದ 90,000ಕ್ಕೂ ಅಧಿಕ ಪರಿಶೀಲನೆಗಳು ಬಾಕಿಯುಳಿದಿವೆ ಎಂದು ಸುದ್ದಿಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಬಿಸಿಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ಸುಮಾರು 1.5 ಲಕ್ಷ ರೂ.ಗಳ ಲಂಚವನ್ನು ನೀಡಿರುವ ಆರೋಪವನ್ನು ಎದುರಿಸುತ್ತಿರುವ ತಮಿಳುನಾಡು ಮೂಲದ ಜೆ.ವಸಂತನ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭ ಬಿಸಿಡಿ ನ್ಯಾ.ಗುಪ್ತಾ ಅವರಿಗೆ ಈ ಮಾಹಿತಿಗಳನ್ನು ನೀಡಿದೆ.

► 2023ರಲ್ಲಿ ಬಿಸಿಡಿಯಲ್ಲಿ ನೋಂದಾಯಿಸಿಕೊಂಡಿದ್ದ ವಸಂತನ್ ಅವರನ್ನು ನಕಲಿ ಕಾನೂನು ಪದವಿ ಮತ್ತು ಫೋರ್ಜರಿ ಮಾಡಲಾದ ಅಂಕಪಟ್ಟಿಗಳನ್ನು ಸಲ್ಲಿಸಿದ್ದಕ್ಕಾಗಿ ಸೆ.18ರಂದು ಅಮಾನತುಗೊಳಿಸಲಾಗಿತ್ತು. ನವಂಬರ್‌ನಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಾಜ್ಯ ವಕೀಲರ ಸಂಘಕ್ಕೆ ಪತ್ರ ಬರೆದು ವಸಂತನ್‌ರನ್ನು ವಜಾಗೊಳಿಸುವಂತೆ ನಿರ್ದೇಶನ ನೀಡಿದ ಬಳಿಕ ಅವರ ಪರವಾನಿಗೆಯನ್ನು ಸ್ಥಗಿತಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News