×
Ad

ಜೆಎನ್‌ಯು ವಿವಾದ: ವಿದ್ಯಾರ್ಥಿಗಳಿಬ್ಬರ ಶರಣಾಗತಿ

Update: 2016-02-24 23:53 IST

ಹೊಸದಿಲ್ಲಿ, ಫೆ.24: ದೇಶದ್ರೋಹದ ಆರೋಪ ಹೊತ್ತಿರುವ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ವಾಣ್ ಭಟ್ಟಾಚಾರ್ಯ ನಿನ್ನೆ ರಾತ್ರಿ ಪೊಲೀಸರಿಗೆ ಶರಣಾಗಿದ್ದು, ಮಾಧ್ಯಮಗಳ ಕಣ್ಣು ತಪ್ಪಿಸುವುದಕ್ಕಾಗಿ ಪೊಲೀಸರು ಅವರನ್ನು ಸುಮಾರು 2 ತಾಸುಗಳ ಕಾಲ ಸುತ್ತಾಡಿಸಿದ್ದಾರೆ. ಗುಪ್ತ ತಾಣವೊಂದರಲ್ಲಿ ಶರಣಾಗುವ ವಿದ್ಯಾರ್ಥಿಗಳ ಮನವಿಯನ್ನು ಹೈಕೋರ್ಟ್ ನಿನ್ನೆ ತಳ್ಳಿ ಹಾಕಿತ್ತು.

ನಿನ್ನೆ ರಾತ್ರಿ 11:40ರ ಸುಮಾರಿಗೆ, ಖಾಲಿದ್ ಹಾಗೂ ಭಟ್ಟಾಚಾರ್ಯ ವಿವಿಯ ಭದ್ರತಾ ವ್ಯಾನೊಂದರಲ್ಲಿ ಜೆಎನ್‌ಯು ಕ್ಯಾಂಪಸ್‌ನ ಪ್ರವೇಶ ದ್ವಾರಕ್ಕೆ ಬಂದರು. ಅವರು ಹೊರಡುತ್ತಿದಂತೆಯೇ ಹಲವು ವಿದ್ಯಾರ್ಥಿಗಳು ಅವರ ಸುತ್ತ ಮಾನವ ಸರಪಳಿಯೊಂದನ್ನು ರಚಿಸಿದರು. ವಿವಿಯಿಂದ ಒಂದು ಕಿ.ಮೀ.ಗಳಷ್ಟು ಸುತ್ತಾಡಿಸಿದರು. ನಡು ರಾತ್ರಿಯ ಬಳಿಕದ 2 ಗಂಟೆಯ ವೇಳೆ ಖಾಲಿದ್ ಹಾಗೂ ಭಟ್ಟಾಚಾರ್ಯ ಪೊಲೀಸ್ ಠಾಣೆ ತಲುಪಿದರು.

ಬಂಧನಕ್ಕೆ ಮುನ್ನ ಅವರನ್ನು 5 ತಾಸುಗಳ ಕಾಲ ವಿಚಾರಣೆ ನಡೆಸಲಾಗಿತ್ತೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News