×
Ad

ವೇಮುಲಾ ಆತ್ಮಹತ್ಯೆ ಪ್ರಕರಣ: ಬಿಎಸ್ಪಿ ಸದಸ್ಯರಿಂದ ಚರ್ಚೆಗೆ ಒತ್ತಾಯ

Update: 2016-02-24 23:55 IST

ಹೊಸದಿಲ್ಲಿ, ಫೆ.24: ಹೈದರಾಬಾದ್ ಕೇಂದ್ರೀಯ ವಿ.ವಿ. ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಕೇಂದ್ರಸಚಿವರ ರಾಜೀನಾಮೆಗೆ ಆಗ್ರಹಿಸಿ ಬುಧವಾರ ರಾಜ್ಯಸಭೆಯಲ್ಲಿ ಬಿಎಸ್ಪಿ ಸದಸ್ಯರ ಗದ್ದಲದಿಂದ ಮಧ್ಯಾಹ್ನದ ಮೊದಲು ಎರಡು ಬಾರಿ ಕಲಾಪ ಮುಂದೂಡಿದ ಪ್ರಸಂಗ ರಾಜ್ಯಸಭೆಯಲ್ಲಿ ನಡೆಯಿತು.
 
ಬಿಎಸ್ಪಿ ನಾಯಕಿ ಮಾಯಾವತಿಯವರು ಮಾತನಾಡಿ, ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಸರಕಾರದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು. ಹೈದರಾಬಾದ್ ವಿ.ವಿ. ಉಪಕುಲಪತಿಯನ್ನು ವಜಾಗೊಳಿಸಬೇಕು. ವೇಮುಲಾ ಆತ್ಮಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆ ಸಮಿತಿಯಲ್ಲಿ ದಲಿತ ಸದಸ್ಯರನ್ನು ನೇಮಕಗೊಳಿಸಬೇಕೆಂದು ಬೇಡಿಕೆಯಿಟ್ಟರು. ಈ ಘಟನೆಯ ಬಗ್ಗೆ ತಕ್ಷಣವೇ ಚರ್ಚೆಮಾಡಲು ಸರಕಾರ ಸಿದ್ಧವಿದೆ ಮತ್ತು ಸಂಬಂಧಪಟ್ಟ ಸಚಿವರು ಉತ್ತರಿಸಲಿರುವರು ಎಂದು ಸರಕಾರ ತಿಳಿಸಿತು.
ಆದರೆ ಸರಕಾರದ ಉತ್ತರದಿಂದ ತೃಪ್ತಿಗೊಳ್ಳದ ಬಿಎಸ್ಪಿ ಸದಸ್ಯರು ಮೇಲ್ಮನೆಯ ಬಾವಿಗಿಳಿದು ಸರಕಾರದ ವಿರುದ್ಧ ಧರಣಿ ನಡೆಸಿದರು.ಗದ್ದಲ ತೀವ್ರಗೊಂಡಾಗ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ 10 ನಿಮಿಷಗಳ ಕಾಲ ಕಲಾಪ ಮುಂದೂಡಿದರು. ನಂತರ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
  ಈ ವಿಚಾರದ ಕುರಿತು ಮಾತನಾಡಿದ ಬಿಎಸ್ಪಿ ನಾಯಕಿ ಮಾಯಾವತಿ, ಹೈದರಾಬಾದ್ ವಿ.ವಿ. ಯ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯೂ ತೀವ್ರ ಆತಂಕಕ್ಕೊಳಪಡಿಸಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಇಂದಿನವರೆಗೂ ಅರ್‌ಸ್ಸೆಸ್ ಸಿದ್ದಾಂತವನ್ನು ಹೇರಲಾಗುತ್ತಿದೆ. ಪ್ರತಿಷ್ಠಿತ ವಿಶ್ವಾವಿದ್ಯಾನಿಲಯಗಳಾದ ಹೈದರಾಬಾದ್ ವಿ.ವಿ, ಅಲಿಗಡ್ ಮುಸ್ಲಿಮ್ ವಿ.ವಿ, ಜಾಮಿಅ ಮಿಲ್ಲಿಯಾ ವಿ.ವಿ ಹಾಗೂ ಜೆಎನ್‌ಯು ಕಾರ್ಯನಿರ್ವಹಣೆಯಲ್ಲಿ ಅಡ್ಡಿ ಪಡಿಸುತ್ತಿದೆ ಎಂದು ಮಾಯಾವತಿ ಆರೋಪಿಸಿದರು.
 ರೋಹಿತ್ ಆತ್ಮಹತ್ಯೆ ಇದು ಪ್ರಥಮ ಪ್ರಕರಣವಲ,್ಲ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿಯೂ ಹಲವು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News