ಹ್ಯಾಕ್ ಅವಕಾಶವಿಲ್ಲದ ಐಫೋನ್: ಆ್ಯಪಲ್ ಸಂಶೋಧನೆ
ವಾಷಿಂಗ್ಟನ್,ಫೆ.25: ಎಂಥದ್ದೇ ಸಂದರ್ಭದಲ್ಲೂ ಸರಕಾರ ಕೂಡಾ ಭೇದಿಸಲು ಸಾಧ್ಯವಾಗದ ಐ-ಫೋನ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಆ್ಯಪಲ್ ಸಂಸ್ಥೆ ಇಂಜಿನಿಯರ್‌ಗಳು ಸಂಶೋಧನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಕೋರ್ಟ್‌ನಲ್ಲಿ ಈ ಸಂಬಂಧ ಈಗಾಗಲೇ ಸಮರ ನಡೆಯುತ್ತಿದ್ದು, ಅಂಥ ಕ್ರಮಗಳಿಂದಲೂ ಈ ಮೊಬೈಲ್ ಭೇದಿಸಲು ಸಾಧ್ಯವಿಲ್ಲ ಎಂದು ಕಂಪೆನಿಗೆ ನಿಕಟವಾಗಿರುವ ಸೈಬರ್ ಸೆಕ್ಯುರಿಟಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಯತ್ನದಲ್ಲಿ ಆ್ಯಪಲ್ ಯಶಸ್ವಿಯಾಗಿ, ತನ್ನ ಭದ್ರತಾ ಕ್ರಮಗಳನ್ನು ಮೇಲ್ದರ್ಜೆಗೆ ಏರಿಸಲು ಸಫಲವಾದರೆ, ಕಂಪೆನಿ ಕಾನೂನು ಜಾರಿ ಸಂಸ್ಥೆಗಳಿಗೆ ದೊಡ್ಡ ಸವಾಲನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಲಾಗಿದೆ. ಐಫೋನ್‌ನಲ್ಲಿ ಸಂಗ್ರಹವಿರುವ ಮಾಹಿತಿಗಳನ್ನು ಪಡೆಯಲು ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿರುವ ಒಬಾಮಾ ಸರಕಾರ ಇದರಲ್ಲಿ ಯಶಸ್ವಿಯಾದರೂ ಹೊಸ ವಿಧಾನ ಮತ್ತು ಸವಾಲಿನ ಕೆಲಸವಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಕಳೆದ ವರ್ಷ ಕ್ಯಾಲಿಫೋರ್ನಿಯಾದಲ್ಲಿ ಸ್ಯಾನ್ ಬೆನಾರ್ಡಿನೊದಲ್ಲಿ ಸಾಮೂಹಿಕ ಹತ್ಯೆ ನಡೆಸಿದ ಪೈಕಿ ಆರೋಪಿ ಹೊಂದಿರುವ ಮೊಬೈಲ್‌ನಲ್ಲಿ ಇರುವ ಮಾಹಿತಿಯನ್ನು ಪಡೆಯಲು ಒಬಾಮಾ ಸರಕಾರ ಕಾನೂನು ಹೋರಾಟ ನಡೆಸುತ್ತಿದೆ.