ವೇಮುಲಾ ಪ್ರಕರಣದಲ್ಲಿ ಬಿಜೆಪಿ ಸುಳ್ಳಿನ ಹೊಲದಲ್ಲಿ ಉಳುಮೆ ನಡೆಸುತ್ತಿದೆ: ನಿತೀಶ್‌ಕುಮಾರ್
Update: 2016-02-28 19:17 IST
ಪಾಟ್ನಾ: ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಕುರಿತು ಮಾನವಸಂಪನ್ಮೂಲ ಅಭಿವೃಧ್ಧಿ ಸಚಿವೆ ಸ್ಮತಿ ಇರಾನಿ ಸಂಸತ್‌ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಆರೋಪಿಸಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ರೋಹಿತ್ ವೇಮುಲಾರ ತಾಯಿ ರಾಧಿಕಾ ಸ್ಮತಿ ಇರಾನಿ ಸಂಸತ್‌ನಲ್ಲಿ ಸತ್ಯವನ್ನು ತಿರುಚಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.ಇದರಿಂದ ಕೇಂದ್ರ ಸರಕಾರ ಸುಳ್ಳಿನ ಹೊಲದಲಿ ಉಳುಮೆ ಮಾಡುತ್ತಿದೆ ಎಂದು ಸ್ಪಷ್ಟವಾಗುತ್ತಿದೆ ಹಾಗೂ ಸಮಾಜವನ್ನು ವಿಭಜಿಸುವ ವದಂತಿಗಳನ್ನು ಹರಡುವ ಕೆಲಸಮಾಡುತ್ತಿದೆ ಎಂದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಅವರು ವೇಮುಲಾರತಾಯಿಯ ಹೇಳಿಕೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ರೋಹಿತ್ ವೇಮುಲಾರ ತಾಯಿ ಸ್ಮತಿ ಇರಾನಿ ಸಂಸತ್‌ನಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದರು.