×
Ad

ದೆಹಲಿ ಪೊಲೀಸ್ ಕಮಿಷನರ್ ಆಗಿ ಅಲೋಕ್ ವರ್ಮಾ ಅಧಿಕಾರ ಸ್ವೀಕಾರ

Update: 2016-02-29 21:23 IST

ಹೊಸದಿಲ್ಲಿ, ಫೆ. 29: ದೆಹಲಿಯ ನೂತನ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ವರ್ಮಾ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಜೆ ಎನ್ ಯು ಪ್ರಕರಣ ನಿಭಾಯಿಸಿದ ರೀತಿ  ಹಾಗು ಎಎಪಿ ಸರಕಾರದ ವಿರುದ್ಧದ ಕ್ರಮಗಳಿಂದಾಗಿ ಭಾರೀ ವಿವಾದಕ್ಕೆ ತುತ್ತಾಗಿದ್ದ ನಿರ್ಗಮನ ಕಮಿಷನರ್ ಬಿ ಎಸ್ ಬಸ್ಸಿ ಅವರು ವರ್ಮಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈವರೆಗೆ ತಿಹಾರ್ ಜೈಲಿನ ಮಹಾ ನಿರ್ದೇಶಕರಾಗಿದ್ದ ೧೯೭೯ ರ ಬ್ಯಾಚ್ ನ ಐ ಪಿ ಎಸ್ ಅಧಿಕಾರಿ ವರ್ಮಾ ಅವರಿಗೆ ದೆಹಲಿ ಪೋಲಿಸ್ ಕಮಿಷನರ್ ಹುದ್ದೆ ಅತ್ಯಂತ ಸವಾಲಿನ ಸಂದರ್ಭದಲ್ಲಿ ಸಿಕ್ಕಿದೆ.  ಬಸ್ಸಿ ಅವರಿಗೆ ಸೋಮವಾರ ದೆಹಲಿ ಪೊಲೀಸ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News