25 ಸಾವಿರ ಸಿರಿಯನ್ ನಿರಾಶ್ರಿತರನ್ನು ಸ್ವೀಕರಿಸುವ ಕೆನಡದ ವಾಗ್ದಾನ ಪೂರ್ಣ
Update: 2016-02-29 22:58 IST
ಮಾಂಟ್ರಿಯಲ್, ಫೆ.29: ಸಿರಿಯದ ನಾಗರಿಕ ಯುದ್ಧದಿಂದ ನಿರಾಶ್ರಿತರಾಗಿರುವ 25 ಸಾವಿರ ಸಿರಿಯನ್ನರನ್ನು ಸ್ವೀಕರಿಸುವ ಸ್ವತಃ ಹೇರಿಕೊಂಡಿದ್ದ ಗಡುವನ್ನು ಕೆನಡ ಸಾಧಿಸಿದೆ. ಈ ಮೂಲಕ ಅದು ಪ್ರಧಾನಿ ಜಸ್ಟಿನ್ ಟ್ರೊಡೊರ ವಾಗ್ಧಾನವನ್ನು ಪೂರೈಸಿದೆ. ಇಂದು ಕೆನಡಿಯನ್ನರು ಹೆಮ್ಮೆಪಡುವುದಕ್ಕೆ 25 ಸಾವಿರ ಕಾರಣಗಳು. ನಿರಾಶ್ರಿತರಿಗೆ ಸ್ವಾಗತ ಎಂದು ನಿರಾಶ್ರಿತರನ್ನು ಹೊತ್ತ ವಿಮಾನವೊಂದು ನಿನ್ನೆ ಮಾಂಟ್ರಿಯಲ್‌ನ ವಿಮಾನ ನಿಲ್ಧಾಣದಲ್ಲಿಳಿದೊಡನೆಯೇ ವಲಸೆ, ನಿರಾಶ್ರಿತರು ಹಾಗೂ ನಾಗರಿಕತ್ವ ಸಚಿವ ಜಾನ್ ಮೆಕ್ಲಂ ಟ್ವೀಟಿಸಿದ್ದಾರೆ.