ಐಸಿಸ್ ಉಗ್ರರಿಂದ ಕನಿಷ್ಠ 73 ಮಂದಿಯ ಹತ್ಯೆ: 100 ಮಂದಿಗೆ ಗಾಯ
Update: 2016-02-29 22:59 IST
ಬಗ್ದಾದ್, ಫೆ.29: ಪೂರ್ವ ಬಗ್ದಾದ್‌ನ ಹೊರಾಂಗಣ ಮಾರುಕಟ್ಟೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಯೊಂದರಲ್ಲಿ ಕನಿಷ್ಠ 70 ಮಂದಿ ಬಲಿಯಾಗಿದ್ದು, ಸುಮಾರು 100 ಮಂದಿಗೆ ಗಾಯಗಳಾಗಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ರ್ ನಗರದ ಶೀಟ್ ಜಿಲ್ಲೆಯ ಜನನಿಬಿಡ ಮ್ರೆಡಿ ಮಾರುಕಟ್ಟೆಯಲ್ಲಿ ಈ ಸ್ಫೋಟ ಸಂಭವಿಸಿದೆ. ನಿಮಿಷದ ಬಳಿಕ, ಮೊದಲ ಬಾಂಬ್ ದಾಳಿ ನಡೆದ ಸ್ಥಳದಲ್ಲಿ ಗುಂಪು ಸೇರಿದ್ದ ಜನರ ನಡುವೆ ಆತ್ಮಹತ್ಯಾ ಬಾಂಬರ್ ತನ್ನನ್ನೇ ಸ್ಫೋಟಿಸಿಕೊಂಡನೆಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.