×
Ad

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಭೂಗತ ಸುರಂಗ ಮಾರ್ಗ ಪತ್ತೆ..!

Update: 2016-03-04 10:12 IST

ಶ್ರೀನಗರ, ಮಾ.4: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಕೊರೆದಿರುವುದು ಆರ್‌ಎಸ್ ಪುರದಲ್ಲಿ ಗುರುವಾರ ಪತ್ತೆಯಾಗಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಬರಲು ಅನುಕೂಲವಾಗುವಂತೆ ಭಯೊತ್ಪಾದಕರು ಸುರಂಗ ಮಾರ್ಗ  ಕೊರೆದಿದ್ದಾರೆಂದು ಗಡಿ ಭದ್ರತಾ ಪಡೆ ತಿಳಿಸಿದೆ.
30 ಅಡಿ ಉದ್ದ ಮತ್ತು 10 ಅಡಿ ಅಗಲದ ಸುರಂಗ ಮಾಗðವನ್ನು ಪಾಕಿಸ್ತಾನ ಭಾಗದಿಂದ ಕೊರೆಯಲಾಗಿದ್ದು, ಪಾಕಿಸ್ತಾನದಿಂದ ಜಮ್ಮು ನಗರಕ್ಕೆ ಶಸ್ತ್ರಾಸ್ತ್ರ ತರಲು ಮತ್ತು ಭಯೊತ್ಪಾದಕರಿಗೆ ಭಾರತದೊಳಕ್ಕೆ ಸುಲಭವಾಗಿ ನುಸುಳಿಕೊಂಡು ಬರಲು ಅನುಕೂಲವಾಗುವಂತೆ ಈ ಸುರಂಗ  ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ಬಿಎಸ್‌ಎಫ್‌ನ ಜಮ್ಮು ವಲಯದ ಐಜಿ ರಾಕೇಶ್‌ ಶರ್ಮ ತಿಳಿಸಿದ್ದಾರೆ.
ಇಂತಹ ಸುರಂಗ ಮಾರ್ಗ ಗಡಿ ನಿಯಂತ್ರಣಾ ರೇಖೆಯ ಬಳಿ ಪತ್ತೆಯಾಗಿರುವುದು ಇದು ಮೊದಲನೇ ಬಾರಿ ಅಲ್ಲ. 2012 ರಲ್ಲಿ 400 ಮೀಟರ್ ಉದ್ದದ ಸುರಂಗ ಸಾಂಬಾ ವಲಯದಲ್ಲಿ  ಮತ್ತು 2009 ರಲ್ಲಿ  ಗಡಿ ನಿಯಂತ್ರಣಾ ರೇಖೆಯ ಅಕ್ನೋರ್‌ನಲ್ಲಿ ಪತ್ತೆಯಾಗಿತ್ತು.
ಭಾರತವು ಸುರಂಗ ಮಾರ್ಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪಾಕ್‌ಗೆ ಮಾಹಿತಿ ನೀಡಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದು ಐಜಿ ಶರ್ಮಾ ಹೇಳಿದ್ದಾರೆ. ತಜ್ಞ ಎಂಜಿನಿಯರ‍್ ಗಳು  ಈ ಸುರಂಗ ಮಾರ್ಗ ಕೊರೆಯುವಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕಂಡು ಬಂದ ಪಾಕ್‌ನ ಉಗ್ರರು  ಈ ಭೂಗತ ಸುರಂಗ ಮಾರ್ಗ ಮೂಲಕವೇ ಬಂದಿರುವ ಸಾಧ್ಯತೆ ಇದೆ. ಗಡಿರಕ್ಷಣಾ ಪಡೆಯ ಕಣ್ಣು ತಪ್ಪಿಸಿ ಬರಲು ಸಾಂಪ್ರದಾಯಿಕ ಮಾರ್ಗಗಳ ಮೂಲಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಭಯೊತ್ಪಾದಕರು ಭಾರತಕ್ಕೆ ಸುಲಭವಾಗಿ ಬರಲು ಅನುಕೂಲವಾಗುವಂತೆ ಸುರಂಗ ಮಾರ್ಗ ಕೊರೆದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News