ಅತ್ಯಾಚಾರ ಆರೋಪಿ ತಂದೆಗೂ.. ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಪುತ್ರಿಗೂ ಶಿಕ್ಷೆ ವಿಧಿಸಿದ ಜಾತಿ ಪಂಚಾಯತ್
ಸತಾರ,ಮಾರ್ಚ್.4: ಪಂಚಾಯತ್‌ಗಳ ಹಾಸ್ಯಾಸ್ಪದ ತೀರ್ಪುಗಳು ಹೊರಬರುವುದು ಹೊಸದೇನಲ್ಲ. ಆದರೆ ಇಲ್ಲಿ ಜಾತಿ ಪಂಚಾಯತೊಂದು ಅತ್ಯಾಚಾರ ಆರೋಪಿಗೆ ಹತ್ತು ಕೊರಡೆಯೇಟಿನ ಆಶ್ಚರ್ಯಕಾರಕ ಶಿಕ್ಷೆವಿಧಿಸಿ ಕೋಲಾಹಲ ಹುಟ್ಟು ಹಾಕದೆ. ಮಹರಾಷ್ಟ್ರದ ಸತಾರದಲ್ಲಿ ಜಾತಿ ಪಂಚಾಯತ್‌ವೊಂದು ತನ್ನ ಅಪ್ರಾಪ್ತ ಪುತ್ರಿಯನ್ನು ಅತ್ಯಾಚಾರಗೈದಿದ್ದ ಆರೋಪಿ ತಂದೆಗೆ ಶಿಕ್ಷೆ ಹತ್ತು ಕೊರಡೆಯೇಟು ಶಿಕ್ಷೆ ವಿಧಿಸಿದ್ದಲ್ಲದೆ ಜೊತೆಗೆ ಅತ್ಯಾಚಾರಕ್ಕೊಳಗಾದ ಬಾಲಕಿಗೂ ಅದೇ ಪ್ರಮಾಣದ ಶಿಕ್ಷೆ ನೀಡಿದೆ.
ಇದೆಂತಹಾ ನ್ಯಾಯ ವೆಂದು ಯಾರೂಮೂಗಿಗೆ ಬೆರಳೇರಿಸಬಹುದು. ಕಳೆದ ನಾಲ್ಕು ತಿಂಗಳಿಂದ ಪಾಪಿ ತಂದೆಯೊಬ್ಬ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ನಡೆಸುತ್ತ ಬಂದಿದ್ದ. ಬಾಲಕಿ ಗರ್ಭಿಣಿಯಾದಾಗ ಊರವರಿಗೆ ಈ ವಿಷಯ ತಿಳಿದು ಬಂದಿತ್ತು. ಜಾತಿ ಪಂಚಾಯತ್ ಆರೋಪಿ ತಂದೆ ಮತ್ತು ಸಂತ್ರಸ್ತೆ ಪುತ್ರಿಯನ್ನು ಕರೆಯಸಿ ಪಂಚಾಯತ್ ನಡೆಸಿ ಎಲ್ಲರ ಮುಂದೆ ಹತ್ತತ್ತು ಕೊರಡೆಯೇಟು ಶಿಕ್ಷೆ ವಿಧಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ. ಪಂಚಾಯತ್ ಅತ್ಯಾಚಾರ ಆರೋಪಿಗೆ ದುಷ್ಕೃತ್ಯ ವೆಸಗಿದ್ದಕ್ಕೆ ಶಿಕ್ಷೆ ನೀಡಿದ್ದರೆ, ಪುತ್ರಿ ಇಷ್ಟು ಕಾಲ ಅತ್ಯಾಚಾರಕ್ಕೊಳಗಾಗಿಯೂ ಸುಮ್ಮನಿದ್ದುದಕ್ಕೆ ಅವಳನ್ನೂ ಪಂಚಾಯತ್ ಶಿಕ್ಷಿಸಿದೆ.
ಕಳೆದ ನಾಲ್ಕು ತಿಂಗಳಲ್ಲಿ ಬಾಲಕಿ ಒಮ್ಮೆಯೂ ಏಕೆ ವಿರೋಧಿಸಿಲ್ಲ ಅದಕ್ಕಾಗಿ ಅವಳೂ ತಪ್ಪಿತಸ್ಥಳೆಂದು ಪಂಚಾಯತ್ ಹೇಳಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪುರಾವೆಯಾಗಿ ಪಂಚಾಯತ್ ನಡೆಸಿದಾಗ ತೆಗೆದ ಫೋಟೊವನ್ನೂ ಅವರು ಪೊಲೀಸರ ಮುಂದೆ ಹಾಜರು ಪಡಿಸಿದ್ದಾರೆ. ಆನಂತರ ಪ್ರಕರಣದ ಕುರಿತು ಕೋಲಾಹಲ ಸೃಷ್ಟಿಯಾಗಿದ್ದು ಪೊಲೀಸರು ಪ್ರಕರಣ ಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.