ಬೋರ್‌ವೆಲ್‌ಗೆ ಬಿದ್ದ ನಾಲ್ಕುವರ್ಷದ ಮಗು: ರಕ್ಷಣಾ ಕಾರ್ಯ ಜಾರಿ
ಝಾನ್ಸಿ, ಮಾ. 4: ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಲಹಚೂರಾದ ಇಮ್‌ಲೌಟಾ ಗ್ರಾಮದಲ್ಲಿ ನಾಲ್ಕು ವರ್ಷದ ಮಗು ನಿಖಿಲ್ ಹೊಲದಲ್ಲಿದ್ದ ನಲ್ವತ್ತು ಅಡಿ ಆಳದ ಬೋರ್‌ವೆಲ್ ಹೊಂಡಕ್ಕೆ ಬಿದ್ದಿದ್ದಾನೆ. ದುರ್ಘಟನೆ ಸಂಭವಿಸಿ ಹದಿನಾರು ಗಂಟೆಗಳು ಕಳೆದಿದ್ದರೂ ಮಗುವನ್ನು ಮೇಲೆತ್ತಲು ಸಾಧ್ಯವಾಗಿಲ್ಲ.
ಕೆಲವು ಸಮಯದವರೆಗೆ ಮಗು ಅಳುವ ಸದ್ದು ಕೇಳಿಸುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತ ನಿರತರಾಗಿದ್ದಾರೆ.
ಝಾನ್ಸಿಯಿಂದ ನೂರು ಕಿ.ಮೀ. ದೂರದ ಲಹಚೂರಾ ಠಾಣೆ ವ್ಯಾಪ್ತಿಯ ಇಮ್ಲೌಟಾ ಗ್ರಾಮದಲ್ಲಿ ಘಟನೆ ಸಂಭವಿಸದೆ.
ಇಲ್ಲಿನ ನಿವಾಸಿ ಪ್ರೀತಮ್ ಎಂಬವರ ನಾಲ್ಕು ವರ್ಷದ ಪುತ್ರ ನಿಖಿಲ್ ಗುರುವಾರ ಹೊಲದಲ್ಲಿ ಆಡುತ್ತಾ ಆಡುತ್ತಾ ನೀರಿಗಾಗಿ ತೋಡಿದ್ದ ಬೋರ್‌ವೆಲ್ ಗುಂಡಿಗೆ ಬಿದ್ದಿದ್ದಾನೆ. ಕೂಡಲೇ ಗ್ರಾಮ ನಿವಾಸಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಪೊಲೀಸರು ಮತ್ತು ಜಿಲ್ಲಾಡಳಿತ ತಕ್ಷಣ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಜೆಸಿಬಿ, ಪೊಕ್ಲೈಂಡ್‌ಮೆಶಿನ್‌ಗಳನ್ನು ಘಟನಾ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಆಕ್ಸಿಜನ್ ಕಿಟ್‌ನ ಜೊತೆ ವೈದರ ತಂಡ ಹಾಗೂ ಪೊಲೀಸಧಿಕಾರಿಗಳು ಅಲ್ಲಿ ನೆರೆದಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಮಗುವಿನ ರಕ್ಷಣೆ ಸಕಲ ಪ್ರಯತ್ನದಲ್ಲಿ ತೊಡಗಿದ್ದೇವೆ. ಸೇನೆಯ ನೆರವನ್ನೂ ಕೇಳಲಾಗಿದೆ ಎಂದು ತಿಳಿಸಿದ್ದಾರೆ.