×
Ad

ಮುಝಪ್ಫರ್ ನಗರ: ಕತ್ತು ಹಿಸುಕಿ ವಿದ್ಯಾರ್ಥಿಯ ಕೊಲೆ

Update: 2016-03-04 15:20 IST

ಮುಝಪ್ಫರ್ ನಗರ/ಬುಡಾನಾ, ಮಾ.4: ಮುಝಫ್ಪರ್‌ನಗರದ ಬುಡಾನಾಗ್ರಾಮ ಇಟಾವಾದಲ್ಲಿ ವಿದ್ಯಾರ್ಥಿಯೊಬ್ಬನನ್ನು ಕತ್ತು ಹಿಸುಕಿ ಕೊಂದು ಕಾಡಿಗೆಸೆದಿರುವ ಘಟನೆ ವರದಿಯಾಗಿದೆ.

ತನಿಖೆ ನಡೆಸಿ ಮುಂದಿನ ಎರಡು ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಪೊಲೀಸಧಿಕಾರಿಗಳು ಭರವಸೆ ನೀಡಿದ ಮೇಲೆ ಗ್ರಾಮ ನಿವಾಸಿಗಳು ಶಾಂತರಾಗಿದ್ದಾರೆ. ವಿದ್ಯಾರ್ಥಿಯ ಶವವನ್ನು ಪೊಲೀಸರು ವಶಪಡಿಸಿಕೊಂಡು ಪೋಸ್ಟ್‌ಮಾರ್ಟಂಗೆ ರವಾನಿಸಿದ್ದಾರೆ.

ಇಟಾವಾ ಗ್ರಾಮದ ದಿನೇಶ್ ರಾಠಿ ಎಂಬವರ ಪುತ್ರ ಬಿಎ ವಿದ್ಯಾರ್ಥಿಯಾದ ಸಚಿನ್‌ ಯಾನೆ ಬೂರಾ ಎಂಬಾತನಿಗೆ ಮಾರ್ಚ್ ಒಂದರಂದು ಸಂಜೆ ಸುಮಾರು ಐದು ಗಂಟೆ ಹೊತ್ತಿಗೆ ಫೋನ್‌ ಕರೆ ಬಂದಿತ್ತು. ಆ ಪ್ರಕಾರ ಆತ ಮನೆಯಿಂದ ಹೊರಟಿದ್ದು ಮರಳಿ ಬಂದಿರಲಿಲ್ಲ. ಅವನನ್ನು ಹುಡುಕಾಡಿದ ತಂದೆ ದಿನೇಶ್ ಮಗನನ್ನು ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಮಾರ್ಚ್‌ ಎರಡರಂದು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಪೊಲೀಸರ ಪ್ರಕಾರ ಸಚಿನ್‌ನ ಸಹೋದರ ಕಪಿಲ್‌ರಾಠಿ ಅವನಿಗೆ ಫೋನ್ ಕರೆ ಮಾಡಿದ್ದ.

 ಕುರ್ತದ ರೈತನೊಬ್ಬನಿಗೆ ಸಚಿನ್‌ನ ಫೋನ್ ಕಾಡಿನಲ್ಲಿ ಬಿದ್ದು ಸಿಕ್ಕಿತ್ತು. ಆತ ಫೋನ್ ಮಾಡಿ ಫೋನ್‌ನ್ನು ತೆಗೆದುಕೊಂಡು ಹೋಗಿರಿಎಂದು ವಿನಂತಿಸಿದ್ದ. ಇದೇ ವೇಳೆ ಇಟಾವಾದ ಇನ್ನೊಬ್ಬ ರೈತ ವೀರ್‌ಸೇನನಿಗೆ ನಾಪತ್ತೆಯಾದ ವಿದ್ಯಾರ್ಥಿಯ ಶವ ದೊರಕಿತ್ತು. ಶವ ಇದೆ ಗೊತ್ತಾದಂತೆ ನೂರಾರು ರೈತರು ಅಲ್ಲಿ ನೆರೆದಿದ್ದರು. ವಿಷಯ ತಿಳಿದುಗ್ರಾಮೀಣ ಎಸ್ಪಿ ಅಲೋಕ್ ಪ್ರಿಯದರ್ಶಿ, ಎಸ್‌ಡಿಎಮ್, ಜ್ಞಾನಪ್ರಕಾಶ್ ತ್ರಿಪಾಠಿ, ಸಿಓಎಸ್ಪಿ ಶರ್ಮ ಮತ್ತು ಕೊತವಾಲಿಯ ಉಸ್ತುವಾರಿ ಅರುಣ್ ತ್ಯಾಗಿಯವರಿದ್ದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಶವವನ್ನು ಎತ್ತಲು ಪ್ರಯತ್ನಿಸಿದ್ದರು.

ಆದರೆ ಶವವೆತ್ತದಂತೆ ಗ್ರಾಮೀಣರು ವಿರೋಧಿಸಿದ್ದರು. ಮೃತ ವಿದ್ಯಾರ್ಥಿಯ ಮೊಬೈಲ್ ಕಾಲ್ ಡಾಟ ಪರಿಶೀಲಿಸಬೇಕೆಂದು ಅವರು ಅಲ್ಲಿ ಪ್ರತಿಭಟಿಸಿದರು. ಗ್ರಾಮೀಣ ಎಸ್ಪಿ ಪೊಲೀಸ್ ನಾಯಿ ಹಾಗೂ ಫಿಂಗರ್ ಪ್ರಿಂಟ್ ತಜ್ಞರನ್ನು ಕರೆಯಿಸಿ ಶವದ ಪರೀಶೀಲನೆ ನಡೆಸಿದರು. ಇದರಲ್ಲಿ ಕೊಲೆಗಾರರ ಕುರುಹು ಲಭಿಸಿದೆಯೆನ್ನಲಾಗುತ್ತಿದೆ.

ಮೃತ ವಿದ್ಯಾರ್ಥಿಯ ಹತ್ಯೆ ಕುರಿತು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News