×
Ad

ಒಳ ಉಡುಪನ್ನು ತೊಳೆಯಲು ನಿರಾಕರಿಸಿದ ದಲಿತ ಕಚೇರಿ ಸಹಾಯಕಿಗೆ ಮೆಮೊ ಕಳಹಿಸಿದ ಜಡ್ಜ್‌..!

Update: 2016-03-04 15:40 IST

ಚೆನ್ನೈ, ಮಾ4: ತನ್ನ ಒಳ ಉಡುಪನ್ನು ತೊಳೆಯಲು ನಿರಾಕರಿಸಿದ ಕಚೇರಿ ಸಹಾಯಕಿಗೆ ನ್ಯಾಯಾಧೀಶರೊಬ್ಬರು ಜ್ಞಾಪಕ ಪತ್ರ(ಮೆಮೊ ) ಕಳುಹಿಸಿದ  ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ನ್ಯಾಯಾಲಯ  ಒಂದರಲ್ಲಿ  ಕಚೇರಿ ಸಹಾಯಕಿಯಾಗಿರುವ 47 ರ ಹರೆಯದ ದಲಿತ ಮಹಿಳೆಗೆ ನ್ಯಾಯಾಧೀಶರ ಒಳ ಉಡುಪನ್ನು ತೊಳೆಯಲು   ನ್ಯಾಯಾಧೀಶರ ಪತ್ನಿ ನೀಡಿದಾಗ ಆಕೆ ನಿರಾಕರಿಸಿದರೆನ್ನಲಾಗಿದೆ. ಇದರಿಂದ  ಕೋಪಗೊಂಡ ನ್ಯಾಯಾಧೀಶರು  ಜ್ಞಾಪಕ ಪತ್ರ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.
ಫೆಬ್ರವರಿ 1 ರಂದು ಕಚೇರಿ ಸಹಾಯಕಿ ಮಹಿಳೆಗೆ ಕಳುಹಿಸಿರುವ ಜ್ಞಾಪಕ ಪತ್ರದಲ್ಲಿ " ತೊಳೆಯಲು ಹಾಕಿದ್ದ  ಒಳ ಉಡುಪನ್ನು ತೊಳೆಯಲು ನಿರಾಕರಿಸಿ, ನ್ಯಾಯಾಧೀಶರ ಪತ್ನಿಯೊಡನೆ ಉದ್ದಟತನದಿಂದ ನಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಏಳು ದಿನಗಳ ಒಳಗಾಗಿ ಉತ್ತರಿಸಬೇಕು ” ಎಂದು ಸತ್ಯ ಮಂಗಳಂ ಕೋರ್ಟ್‌‌ನ ಜಡ್ಜ್‌ ಡಿ ಸೆಲ್ವಮ್  ನೋಟಿಸ್‌ ಜಾರಿ ಮಾಡಿದ್ದರು.
ನ್ಯಾಯಾಧೀಶರು ಕಳುಹಿಸಿರುವ ನೋಟಿಸ್‌ಗೆ ಫೆ.4ರಂದು ಮಹಿಳೆ ಉತ್ತರಿಸಿ" ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ನನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತೇನೆ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದನ್ನು ಕೈ ಬಿಡಬೇಕು ” ಎಂದು ಮನವಿ ಮಾಡಿದ್ದರು.
ನ್ಯಾಯಾಧೀಶರ ಈ ಕ್ರಮವನ್ನು ಪ್ರಶ್ನಿಸಿರುವ ರಾಜ್ಯ ನ್ಯಾಯಾಂಗ ಇಲಾಖೆಯ  ನೌಕರರ ಸಂಘ  ಮದ್ರಾಸ್‌ ಹೈಕೋರ್ಟ್‌ ನ  ಮೊರೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News