ತನಿಖಾ ಸಂಸ್ಥೆಗಳ ವೈಫಲ್ಯ
ಕನ್ನಡದ ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಮತ್ತು ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಸಿಪಿಐ ನಾಯಕ ಗೋವಿಂದ ಪನ್ಸಾರೆ ಅವರ ಹತ್ಯೆಯ ತನಿಖೆಯಲ್ಲಿ ಯಾವುದೇ ಪ್ರಗತಿ ಆಗದಿರುವ ಬಗ್ಗೆ ದಾಭೋಲ್ಕರ್ ಅವರ ಪುತ್ರ ಡಾ.ಹಮೀದ್ ದಾಭೋಲ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈನ ಸಭೆಯೊಂದರಲ್ಲಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.
ನರೇಂದ್ರ ದಾಭೋಲ್ಕರ್ ಹತ್ಯೆ ನಡೆದು ಎರಡು ವರ್ಷಗಳಾದವು. ಗೋವಿಂದ ಪನ್ಸಾರೆ ಹಂತಕರ ಗುಂಡಿಗೆ ಬಲಿಯಾಗಿ ಒಂದು ವರ್ಷ ದಾಟಿತು. ಕಲಬುರ್ಗಿ ಅವರು ಕೊಲೆಗೀಡಾಗಿ ಏಳು ತಿಂಗಳು ಗತಿಸಿದವು. ಈ ಮೂವರು ಸಾಮಾನ್ಯ ವ್ಯಕ್ತಿಗಳಲ್ಲ. ಇಂತಹವರ ಹತ್ಯೆ ಬಗ್ಗೆ ತಕ್ಷಣ ತನಿಖೆ ನಡೆದು ಆರೋಪಿಗಳನ್ನು ಪತ್ತೆಹಚ್ಚಬೇಕಾಗಿತ್ತು. ಸಂಚಿನ ಜಾಲವನ್ನು ಬಯಲುಗೊಳಿಸಬೇಕಾಗಿತ್ತು. ಆದರೆ ಈವರೆಗೆ ಈ ಮೂರು ಹತ್ಯೆಗಳ ಬಗ್ಗೆ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪವಾದಾಗ ಕೇಂದ್ರ ಗೃಹ ಸಹಾಯಕ ಸಚಿವರು ಅತ್ಯಂತ ಬೇಜವಾಬ್ದಾರಿಯಾಗಿ ಮಾತನಾಡಿದರು. ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿಯವರನ್ನು ಒಂದೇ ಮಾದರಿಯ ಆಯುಧದಿಂದ ಹತ್ಯೆ ಮಾಡಲಾಗಿದೆ. ಮೂವರನ್ನು ಬೆಳಗಿನ ಜಾವವೇ ಕೊಂದು ಹಾಕಲಾಗಿದೆ. ಇವರ ಕೊಲೆಯಲ್ಲಿ ಯಾವುದೇ ವೈಯಕ್ತಿಕ ಕಾರಣಗಳಿಲ್ಲ ಎಂದು ಕರ್ನಾಟಕದ ಗುಪ್ತಚರ ಸಂಸ್ಥೆ ತಿಳಿಸಿದೆ. ಆದರೂ ಕೂಡಾ ತನಿಖೆಯ ಪ್ರಗತಿಯಲ್ಲಿ ಯಾವುದೇ ಮುನ್ನಡೆಯನ್ನು ಸಾಸಲು ಆಗಲಿಲ್ಲ. ಮೂವರನ್ನೂ ಹತ್ಯೆ ಮಾಡಿದ ಗುಂಪು ಒಂದೇ ಆಗಿರಬಹುದೆಂದು ಕೆಲ ಗುಪ್ತಚರ ಸಂಸ್ಥೆಗಳು ತಿಳಿಸಿದ್ದರೂ ಕೂಡಾ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ತನಿಖಾ ಸಂಸ್ಥೆಗಳ ಮೇಲೆ ಪ್ರಭಾವಿ ಶಕ್ತಿಗಳು ಒತ್ತಡ ಹೇರುತ್ತಿವೆ ಎಂಬ ಸಂದೇಹವು ಉಂಟಾಗಿದೆ. ಮೂವರು ವಿಚಾರವಾದಿಗಳ ವಿರುದ್ಧ ಯಾರು ವಿಷಕಾರುತ್ತಿದ್ದರು, ಯಾರು ಅವರನ್ನು ದ್ವೇಷಿಸುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಈ ಮೂರು ಹತ್ಯೆ ನಡೆದಾಗ ಕೆಲವರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳನ್ನು ಜಾಲಾಡಿದರೆ ಆರೋಪಿಗಳು ಸಿಕ್ಕ್ಕಿಬೀಳುತ್ತಾರೆ. ್ರಗಾಮಿಗಳೆಂದು ಯಾರ್ಯಾರನ್ನೋ ಬಂಸುವ ಸರಕಾರ, ಅಮಾಯಕರನ್ನು ಎನ್‌ಕೌಂಟರ್ ಮಾಡಿ ಸಾಯಿಸುವ ಪೊಲೀಸರು ಈ ಮೂವರು ವಿಚಾರವಾದಿಗಳ ಹಂತಕರ ಬಂಧನಕ್ಕೆ ಯಾಕೆ ವಿಳಂಬ ಮಾಡುತ್ತಿದ್ದಾರೆ ಎಂಬ ಸತ್ಯ ಬಯಲಿಗೆ ಬರಬೇಕಾಗಿದೆ. ಜೆಎನ್‌ಯು ಆವರಣದಲ್ಲಿ ಕೆಲ ಮುಸುಕುಧಾರಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದರೆಂದು ಕನ್ಹಯ್ಯಾ ಕುಮಾರ್ ಅವರಂತಹ ವಿದ್ಯಾರ್ಥಿ ನಾಯಕರ ಮೇಲೆ ದೇಶದ್ರೋಹದ ಆರೋಪ ಮಾಡುವ ಕೇಂದ್ರ ಸರಕಾರ ದಾಭೋಲ್ಕರ್, ಪನ್ಸಾರೆ ಹಂತಕರನ್ನು ಸೆರೆ ಹಿಡಿಯುವಲ್ಲಿ ವಿಲಗೊಂಡಿದೆ. ಯಾಕೆ ಅದು ಮೃಧುಧೋರಣೆ ಅನುಸರಿಸುತ್ತಿದೆ ಎಂಬ ಸತ್ಯ ಬಯಲಿಗೆ ಬರಬೇಕಾಗಿದೆ.ಹತ್ಯೆಗಳ ತನಿಖಾ ಕಾರ್ಯದಲ್ಲಿ ಪ್ರಗತಿ ಆಗಿಲ್ಲವೆಂದರೆ ತನಿಖಾ ಕಾರ್ಯ ಮುಕ್ತವಾಗಿ ನಡೆಯಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಕರಣಗಳ ತನಿಖೆ ನಡೆಸಿ ನಿಜವಾದ ಹಂತಕರನ್ನು ಬಂಸದಿದ್ದರೆ ಸರಕಾರ ಅಪರಾಗಳಿಗೆ ರಕ್ಷಣೆ ನೀಡುತ್ತಿದೆ ಎಂಬ ಸಂದೇಹ ಬರುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು.ುಜರಾತ್‌ನಲ್ಲಿ ಇಂತಹ ಸಾವಿರಾರು ಪ್ರಕರಣಗಳನ್ನು ನುಂಗಿ ನೀರು ಕುಡಿದು ದಕ್ಕಿಸಿಕೊಂಡ ಇತಿಹಾಸ ನಮ್ಮ ಕಣ್ಣ ಮುಂದಿದೆ. ಅಲ್ಲಿ ಇಂತಹ ಪರಾಕ್ರಮ ಮಾಡಿದವರೇ ಈಗ ಕೇಂದ್ರದ ಅಕಾರ ಸೂತ್ರ ಹಿಡಿದಿದ್ದಾರೆ. ಭಾರತವನ್ನು ಗುಜರಾತ್ ಮಾಡಲು ಹೋಗಿ ಜೆಎನ್‌ಯುವಿನಲ್ಲಿ ಎಡವಿ ಬಿದ್ದಿದ್ದಾರೆ.
ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಅವರ ತಲೆ ಕಡಿಯು ವುದಾಗಿ, ನಾಲಗೆ ಕತ್ತರಿಸುವುದಾಗಿ ಬಹಿರಂಗವಾಗಿ ಹೇಳಿಕೊಂಡು ಓಡಾಡುತ್ತಿರುವವರನ್ನು, ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್ ಅವರಂತಹ ಅಗ್ನಿಭಕ್ಷ್ಷಕರನ್ನು ಹಾಲೆರೆದು ಪೋಷಿಸುತ್ತಿದೆ. ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವವರು ಈಗ ಸಂಸತ್ತಿನಲ್ಲಿದ್ದಾರೆ. ನಾಹುತಗಳಿಂದಲೂ ಪಾಠ ಕಲಿಯದ ತನಿಖಾ ಸಂಸ್ಥೆಗಳು ಜನರಲ್ಲಿ ಉಂಟಾಗಿರುವ ಭೀತಿಯನ್ನು ನಿವಾರಿಸುವಲ್ಲಿ ವಿಲಗೊಂಡಿವೆ. ಅಂತಲೇ ಛತ್ತೀಸ್‌ಗಡದ ರಾಯ್‌ಪುರದಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಚರ್ಚ್ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಈ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತಾ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟೆಲ್ಲ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ದಿವ್ಯ ವೌನ ತಾಳಿದ್ದಾರೆ. ಪ್ರಜೆಗಳಿಗೆ ರಕ್ಷಣೆಯ ಭರವಸೆಯನ್ನು ನೀಡುತ್ತಿಲ್ಲ. ಹೀಗಾಗಿ ದಂಗೆೆಕೋರರಿಗೆ ಕಡಿವಾಣ ಇಲ್ಲದಂತಾಗಿದೆ. ದಾಭೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಕೇಂದ್ರ ಸರಕಾರ ಹಂತಕರನ್ನು ರಕ್ಷಿಸುತ್ತಿದೆ ಎಂಬ ಭಾವನೆ ಮಹಾರಾಷ್ಟ್ರದ ಜನ ಸಾಮಾನ್ಯರಲ್ಲಿ ಉಂಟಾಗಿದೆ. ಇಂತಹ ಆತಂಕ ನಿವಾರಿಸಬೇಕಾದರೆ ಸರಕಾರ ತಕ್ಷಣ ಕಾರ್ಯೋನ್ಮುಖವಾಗಿ ಆರೋಪಿಗಳನ್ನು ಬಂಸಿ ಶಿಕ್ಷೆಗೆ ಗುರಿಪಡಿಸಬೇಕು.