ದವಡೆಯ ಶಕ್ತಿಯಿಂದ ಕಚ್ಚುವ 9 ಭಯಾನಕ ಪ್ರಾಣಿಗಳು!
Photo Credit ; Wikipedia
ಕಾಡಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕೆಂದರೆ ಕೆಲವೊಮ್ಮೆ ಹಲ್ಲೇ ಬಹಳ ಮುಖ್ಯವಾಗುತ್ತದೆ. ದವಡೆಯ ಶಕ್ತಿಯಿಂದಲೇ ರಕ್ಷಣೆ, ಉಣಿಸುವುದು ಅಥವಾ ಬೇಟೆಯನ್ನು ಹಿಡಿದಿಟ್ಟುಕೊಳ್ಳುವುದು ಮಾಡಬೇಕಾಗುತ್ತದೆ. ಹಲ್ಲಿನ ಕಚ್ಚುವ ಬಲವು ಜೀವನ ಮತ್ತು ಮರಣದ ನಡುವೆ ವ್ಯತ್ಯಾಸ ತರಬಹುದು. ಹಾಗಿದ್ದರೆ ಜಗತ್ತಿನಲ್ಲೇ ಅತಿ ಭಯಾನಕ ಹಲ್ಲು ಇರುವ ಪ್ರಾಣಿಗಳು ಯಾವುವು?
Photo Credit ; Saltwater crocodile - Wikipedia
ಉಪ್ಪುನೀರಿನ ಮೊಸಳೆ
ಉಪ್ಪು ನೀರಿನ ಮೊಸಳೆ ಇಂದು ಬದುಕಿರುವ ಅತಿದೊಡ್ಡ ಸರೀಸೃಪಗಳಲ್ಲಿ ಒಂದು ಮಾತ್ರವಲ್ಲ, ಇದಕ್ಕೆ ಅತಿ ಶಕ್ತಿಯುತ ಹಲ್ಲುಗಳಿವೆ. ಅದರ ದವಡೆಯ ಕಚ್ಚುವ ಬಲವು ಪ್ರತಿ ಚದರ ಇಂಚಿಗೆ (ಪಿಎಸ್ಐ) ಬಾಯಲ್ಲಿ ನೀರೂರಿಸುವ 3700 ಪೌಂಡ್ಸ್ ಅಥವಾ 16,414 ನ್ಯೂಟನ್ಗಳು!
ಉಪ್ಪುನೀರಿನ ಮೊಸಳೆಯು ಯಾವುದೇ ಜೀವಂತ ಪ್ರಾಣಿಗಳಿಗಿಂತ ಪ್ರಬಲವಾಗಿ ಕಚ್ಚುತ್ತದೆ. ದೈಹಿಕವಾಗಿ ಅಳೆಯಲಾದ ಶಕ್ತಿಯುತ ಕಚ್ಚುವಿಕೆ! ಕಚ್ಚಿದ ನಂತರ ಭೇಟೆಯನ್ನು ನೀರೊಳಗೆ ಎಳೆದುಕೊಂಡರೆ ಬದುಕಿ ಉಳಿಯಲು ಸಾಧ್ಯವೇ ಇಲ್ಲ.
(Photo Credit : Great white shark - Wikipedia)
ದೊಡ್ಡ ಬಿಳಿ ಶಾರ್ಕ್
ದೊಡ್ಡ ಬಿಳಿ ಶಾರ್ಕ್ ಅಥವಾ ದೊಡ್ಡ ಕಡಲ ಮೀನು ಗಾತ್ರ ಮತ್ತು ವೇಗವನ್ನು ಮಾತ್ರ ಅವಲಂಬಿಸಿಲ್ಲ, ಅದರ ಕಚ್ಚುವ ಬಲವು 4000 ಪಿಎಸ್ಐನಷ್ಟಿರುತ್ತದೆ. ವಿವರವಾದ ಕಂಪ್ಯೂಟರ್ ಮಾಡೆಲಿಂಗ್ನಲ್ಲಿ ಕಂಡುಬಂದಿರುವ ಪ್ರಕಾರ ಇದು 18,000 ನ್ಯೂಟನ್ಗಳಷ್ಟು ಬಲವಾಗಿ ಕಚ್ಚುತ್ತದೆ! ಸಾಗರದಲ್ಲಿ ವೇಗವಾಗಿ ಈಜುಗಾರರನ್ನು ಮಣಿಸಬೇಕೆಂದರೆ ಶಾರ್ಕ್ಗಳಿಗೆ ಇಂತಹ ಶಕ್ತಿಯ ಅಗತ್ಯವಿರುತ್ತದೆ.
(Photo Credit : Hippopotamus - Wikipedia)
ನೀರ್ಗುದುರೆ
ʼಹಿಪ್ಪೊಪೊಟಮಸ್ʼ ಎಂದೇ ಕರೆಯಲಾಗಿರುವ ನೀರ್ಗುದುರೆ ಕಂಡು ಬಹಳ ಸಾಧು ಪ್ರಾಣಿ ಎಂದುಕೊಳ್ಳಬೇಡಿ. ನೀರ್ಗುದುರೆಗಳು ಹುಲ್ಲು ತಿನ್ನುತ್ತವೆ ಎಂದು ಮೋಸ ಹೋಗಬೇಡಿ. ಆಫ್ರಿಕಾದಲ್ಲಿ ಸಿಂಹಗಳಿಗಿಂತಲೂ ಮೀರಿ ಮಾನವರನ್ನು ಕೊಂದಿರುವ ಪ್ರಾಣಿಯೆಂದರೆ ನೀರ್ಗುದುರೆ. ಇದರ ಕಚ್ಚುವ ಬಲ 1800 ಪಿಎಸ್ಐನಷ್ಟಿದೆ. ಮೊಸಳೆಯನ್ನು ಅರ್ಧಕ್ಕೆ ಕಚ್ಚಿ ತುಂಡರಿಸಬಲ್ಲವು.
(Photo Credit : Jaguar - Wikipedia)
ಜಾಗ್ವರ್
ಹುಲಿ ಜಾತಿಯ (ಬಿಗ್ ಕ್ಯಾಟ್ಸ್) ಪ್ರಾಣಿಗಳು ಸಾಮಾನ್ಯವಾಗಿ ಗಂಟಲು ಹಿಡಿದು ಭೇಟೆಯಾಡಿದರೆ, ಜಾಗ್ವರ್ ನೇರವಾಗಿ ಭೇಟೆಯ ಬುರುಡೆಯನ್ನೇ ಕಚ್ಚುತ್ತದೆ. ಈ ಕಚ್ಚುವ ಬಲವು 1500 ಪಿಎಸ್ಐನಷ್ಟಿರುತ್ತದೆ. ಜಾಗ್ವರ್ಗಳಿಗೆ ಸಣ್ಣದಾದ, ಸ್ಥೂಲವಾದ ದವಡೆಗಳನ್ನು ಹೊಂದಿವೆ. ಅವುಗಳ ದವಡೆಯ ಸ್ನಾಯುಗಳಲ್ಲಿ ಅತ್ಯದ್ಭುತ ಶಕ್ತಿ ಇರುತ್ತದೆ. ಆಮೆ ಚಿಪ್ಪುಗಳು ಮತ್ತು ಕ್ಯಾಪಿಬರಾಗಳ ಗಟ್ಟಿಯಾದ ತಲೆಬುರುಡೆಗಳನ್ನು ಭೇದಿಸಲು ಸೂಕ್ತವಾಗಿವೆ.
(Photo Credit : Gorilla - Wikipedia)
ಗೊರಿಲ್ಲಾ
ಗೊರಿಲ್ಲಾಗಳ ದವಡೆಗಳು ಸಣ್ಣದೇನಲ್ಲ. ಅವುಗಳ ಕಚ್ಚುವ ಬಲ 1300 ಪಿಎಸ್ಐಗಳಷ್ಟಿದೆ. ಮುಖ್ಯವಾಗಿ ಗಟ್ಟಿಯಾದ ಬೇರುಗಳು ಮತ್ತು ಕೊಂಬೆಗಳನ್ನು ಕಚ್ಚಿಯೇ ತಿನ್ನುತ್ತವೆ. ಆದರೆ ದವಡೆಯ ಶಕ್ತಿ ಸಾಕಷ್ಟು ಹಾನಿ ತರುವಷ್ಟಿದೆ. ಶಕ್ತಿಯುತ ದವಡೆಯ ಸ್ನಾಯುಗಳಿಂದ ಮತ್ತು ದಪ್ಪನೆಯ ದವಡೆ ಹಲ್ಲುಗಳು ಕಚ್ಚಲು ನೆರವಾಗುತ್ತವೆ.
(Photo Credit : Polar bear - Wikipedia)
ಹಿಮಕರಡಿ ಮತ್ತು ನೆರೆಗೂದಲಿನ ಕರಡಿ
ಹಿಮ ಕರಡಿಗಳು ಆರ್ಕ್ಟಿಕ್ ಜೀವನಕ್ಕೆ ಹೊಂದಿಕೊಂಡಿರುತ್ತವೆ. ಅವುಗಳ ಕಚ್ಚುವ ಬಲವು 1,200 ಪಿಎಸ್ಐಗಳಷ್ಟಿರುತ್ತದೆ. ಹಿಮವನ್ನು ಕಚ್ಚಿ ಒಳ ನುಗ್ಗಲು ಮತ್ತು ನೀರುನಾಯಿಯ ಕೊಬ್ಬನ್ನು ಕಚ್ಚಲು ಸಾಕಾಗುತ್ತದೆ.
ನೆರೆಗೂದಲಿನ ಕರಡಿಗಳು ಉತ್ತರ ಅಮೆರಿಕದಲ್ಲಿ ಕಂಡುಬರುತ್ತವೆ. ಇವುಗಳ ಕಚ್ಚುವ ಬಲವು 1,160 ಪಿಎಸ್ಐನಷ್ಟಿರುತ್ತವೆ. ಹೆಗ್ಗಡವೆಯಿಂದ ಮೀನುಗಳವರೆಗೆ ಕಚ್ಚಿ ತಿನ್ನಲು ಸಾಕಾಗುತ್ತದೆ. ಈ ಕರಡಿಗಳು ಬೃಹತ್ ಉಗುರುಗಳೊಂದಿಗೆ ಹಲ್ಲುಗಳನ್ನು ಬಳಸುತ್ತವೆ. ಹೀಗಾಗಿ ಜಗತ್ತಿನ ಭೀಕರ ಪರಭಕ್ಷಕಗಳಲ್ಲಿ ಒಂದಾಗಿವೆ.
(Photo Credit : Spotted hyena - Wikipedia)
ಚುಕ್ಕೆಗಳಿರುವ ಕತ್ತೆಕಿರುಬ
ಕತ್ತೆಕಿರುಬಗಳು ಬಹಳ ಭೀಕರವಾಗಿ ಕಚ್ಚುತ್ತವೆ. ಅವುಗಳ ದವಡೆಯ ಬಲ 1,100 ಪಿಎಸ್ಐಗಳಷ್ಟಿರುತ್ತವೆ. ಮುಖ್ಯವಾಗಿ ಮೂಳೆಗಳನ್ನು ಕಚ್ಚಲು ಮತ್ತು ಎಲುಬಿನ ನೆಣ ತೆಗೆಯಲೆಂದೇ ಬಳಸುತ್ತವೆ.
(Photo Credit : Tasmanian devil - Wikipedia)
ತಾಸ್ಮಾನಿಯನ್ ಡೆವಿಲ್
ತಾಸ್ಮಾನಿಯನ್ ಡೆವಿಲ್ ಎಂದರೆ ಕಪ್ಪುಕರಡಿಯನ್ನು ಹೋಲುವ, ಕಪ್ಪುಚರ್ಮದ ಮೇಲೆ ಬಿಳಿಮಚ್ಚೆಗಳುಳ್ಳ, ರಾತ್ರಿಯಲ್ಲಿ ಸಂಚರಿಸುವ, ಮಾಂಸಾಹಾರಿ ಪ್ರಾಣಿ. ನೋಡಲು ಪುಟ್ಟದಾಗಿದ್ದರೂ ಹಲ್ಲುಗಳ ಬಲ ಅತ್ಯಧಿಕವಾಗಿವೆ. ದೇಹದ ಗಾತ್ರಕ್ಕೆ ಹೋಲಿಸಿದಲ್ಲಿ ಕಚ್ಚುವಿಕೆ ಜೋರಾಗೇ ಇದೆ. ದವಡೆಯ ಬಲವನ್ನು ಗಮನಿಸಿದರೆ ತನ್ನ ದೇಹದ ತೂಕವನ್ನು ಮೀರಿ ಏಟು ಕೊಡುತ್ತದೆ. ಮೂಳೆಗಳನ್ನು ಮುರಿಯಲು ದವಡೆಯನ್ನು ಬಳಸುತ್ತದೆ.
ಕೃಪೆ: indianexpress.com