ಕೇವಲ G Ram G ಅಲ್ಲ...G TATA G, G ADANI G ಯೂ ಹೌದು...
ಮೋದಿ ಸರಕಾರ ನರೇಗಾ ಯೋಜನೆಯಿಂದ ಕೇವಲ ಗಾಂಧಿ ಹೆಸರನ್ನು ಮಾತ್ರವಲ್ಲ. ಗ್ರಾಮ ಭಾರತವನ್ನು ಮತ್ತು ದಲಿತ ದಮನಿತ ಭಾರತವನ್ನೇ ಕಿತ್ತು ಹಾಕಿದೆ. ಗಾಂಧೀ ಹೆಸರು ಕಿತ್ತು ರಾಮನ ಹೆಸರಿನ ಶೀರ್ಷಿಕೆ ಕೊಟ್ಟಿರುವುದು ಆ ಆರ್ಥದಲ್ಲಿ ಮೋದಿ ಸರಕಾರದ ಸಂವಿಧಾನ ವಿರೋಧಿ ರಾಜಕಾರಣಕ್ಕೆ ರೂಪಕವೂ ಆಗಿದೆ..
ಆದರೆ ಈ ಯೋಜನೆ ಕೇವಲ G RAM G ಅಲ್ಲ.. ಅದು G TATA G, G ADANI G ಯೂ ಹೌದು...
ಏಕೆಂದರೆ ಬದಲಾದ G RAM G ಯೋಜನೆಯತೆ ಮೋದಿ ಸರಕಾರ ಹಂತ ಹಂತವಾಗಿ ತನ್ನ ಪಾಲಿನ ಹಣವನ್ನು ಹಿಂತೆಗೆದುಕೊಳ್ಳುತ್ತಾ ನರೇಗಾ ಯೋಜನೆಯನ್ನೇ ರದ್ದು ಮಾಡಲಿದೆ.....ಮತ್ತು ಅಳಿದುಳಿಯುವ ಗ್ರಾಮೀಣ ಉದ್ಯೋಗ ಯೋಜನೆಯ ಹಣಕಾಸು ಹೊಣೆಗಾರಿಕೆಯನ್ನು ರಾಜ್ಯ ಸರಕಾರದ ಮೇಲೆ ವರ್ಗಾಯಿಸುತ್ತಿದೆ ರಾಜ್ಯ ಸರಕಾರಗಳನ್ನು ವಿತ್ತೀಯವಾಗಿ ಕೊಲ್ಲುತ್ತಿದೆ.
ಈ ರೀತಿ ಗ್ರಾಮೀಣ ಬಡವರಿಗೆ ವಂಚಿಸಿದ ಹಣವನ್ನು ತನ್ನ ಕಾರ್ಪೋರೆಟ್ ಮಿತ್ರರಿಗೆ ಹಂಚುತ್ತಿದೆ...
ಉದಾಹರಣೆಗೆ...
ಹಳೆಯ MGNREGA ಯೋಜನೆಯಂತೆ ಈ ವರ್ಷ 95000 ಕೋಟಿ ರೂ. ವೆಚ್ಚವಾಗಬೇಕಿತ್ತು. ಅದರಲ್ಲಿ 86000 ಕೋಟಿ ರೂ.ವನ್ನು ಕೇಂದ್ರವು ವೆಚ್ಚ ಮಾಡಬೇಕಿತ್ತು...ರಾಜ್ಯಗಳ ಭಾರ ಇದ್ದದ್ದು ಕೇವಲ 9667 ಕೋಟಿ ರೂ. ಮಾತ್ರ..
ಈಗ G RAM G ಜಾರಿಯಾದ ಮೇಲೆ ಕೇಂದ್ರವು ಕೇವಲ 57,333 ಕೋಟಿ ರೂ. ವೆಚ್ಚ ಮಾಡಿ 28,667 ಕೋಟಿ ರೂ. ಉಳಿಸಿಕೊಳ್ಳುತ್ತದೆ. ಈಗಾಗಲೇ ಹಣಕಾಸು ಆದಾಯ ಕೊರತೆ, ಮತ್ತು ಹೆಚ್ಚಿನ ಹೊಣೆಗಾರಿಕೆಗಳಿಂದ ತತ್ತರಿಸುತ್ತಿರುವ ರಾಜ್ಯಗಳು ಈಗ 38,222 ಕೋಟಿ ರೂ. ಹೊರಬೇಕಾಗುತ್ತದೆ.
ಕೇಂದ್ರದ ಮೋದಿ ಜನರಿಗೆ ವಂಚಿಸಿ ಉಳಿಸಿದ 28,667 ಕೋಟಿ ರೂ. ವನ್ನು ಏನು ಮಾಡುತ್ತದೆ..?
ಚಿಪ್ ಫ್ಯಾಕ್ಟರಿ ಸಬ್ಸಿಡಿ ಹೆಸರಲ್ಲಿ TATA ಗೆ 44,000 ಕೋಟಿ ರೂ. ಕೊಟ್ಟು ಬಿಜೆಪಿ ಪಕ್ಷಕ್ಕೆ 750 ಕೋಟಿ ರೂ. ಫಂಡ್ ಪಡೆದುಕೊಳ್ಳುತ್ತದೆ...
ಅಥವಾ ಆಧಾನಿಗಳ ಬ್ಯಾಂಕ್ ಸಾಲ ಮನ್ನಾ ಮಾಡಲು ಬಳಸಿಕೊಳ್ಳುತ್ತವೆ...
ಹೀಗಾಗಿ ಆ ಕಾಲದ ದಲಿತ ದಮನಿತಾ ಶಂಭುಕರ ಜನಕಲ್ಯಾಣ ಯೋಜನೆಗಳನ್ನು ರದ್ದು ಮಾಡಿ ಖಾಸಗಿ ಕಾರ್ಪೋರೆಟ್ ಗಳಿಗೆ ಧಾರೆ ಎರೆಯುವುದೇ ರಾಮರಾಜ್ಯ.. ಅದಕ್ಕೆಂದೇ Fiscal Responsibility and Budget Management Act ಎಂಬ ರಾಮಬಾಣ ವನ್ನು ಪಾಸು ಮಾಡಲಾಗಿದೆ..
ಆದ್ದರಿಂದಲೇ G RAM G ಎಂದರೆ ... G TATA G, G ADANI ಗ್ ಯೇ ಆಗಿದೆ.. ರಾಮರಾಜ್ಯವೆಂದರೆ ಇದೆ ಅಲ್ಲವೇ.....
ಜಸ್ಟ್ ಆಸ್ಕಿಂಗ್
-ಶಿವಸುಂದರ್