ಫೋಕ್ಸ್‌ವ್ಯಾಗನ್ ಅಮೆರಿಕನ್ ಮುಖ್ಯಸ್ಥ ರಾಜೀನಾಮೆ

Update: 2016-03-10 17:28 GMT

ವಾಶಿಂಗ್ಟನ್, ಮಾ. 10: ಅಮೆರಿಕದಲ್ಲಿರುವ ಸುಮಾರು 5.8 ಲಕ್ಷ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ತಪಾಸಣೆ ವಂಚನೆಯ ಸಾಫ್ಟ್‌ವೇರನ್ನು ಅಳವಡಿಸಿರುವುದಕ್ಕೆ ಸಂಬಂಧಿಸಿ ಜರ್ಮನಿಯ ಕಾರು ತಯರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ ವಿರುದ್ಧ ತನಿಖೆ ಜಾರಿಯಲ್ಲಿರುವಂತೆಯೇ, ಅದರ ಅಮೆರಿಕ ಮುಖ್ಯಸ್ಥ ರಾಜೀನಾಮೆ ನೀಡಿದ್ದಾರೆ.

2014ರಿಂದ ಅಮೆರಿಕದ ಫೋಕ್ಸ್‌ವ್ಯಾಗನ್ ಗುಂಪಿನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮೈಕಲ್ ಹಾರ್ನ್ ಅಧಿಕಾರದಿಂದ ಕೆಳಗಿಳಿದಿದ್ದಾರೆ ಎಂದು ಕಂಪೆನಿ ಬುಧವಾರ ಹೇಳಿದೆ. ಮಾಲಿನ್ಯ ತಪಾಸಣೆ ವಂಚನೆ ಬೆಳಕಿಗೆ ಬಂದ ಸುಮಾರು ಆರು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News