ಕಚ್ಚಾ ತೈಲಕ್ಕೆ ಬೆಲೆಯೇರಿಕೆ: ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ

Update: 2016-03-11 05:50 GMT

ಮುಂಬೈ, ಮಾರ್ಚ್.11:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಎರಡು ತಿಂಗಳಲ್ಲಿ ಅತ್ಯಧಿಕ 40 ಡಾಲರ್‌ಗೆ ತಲುಪಿದೆ. ಮುಂದಿನ ಎರಡು ತಿಂಗಳಲ್ಲಿ ಐವತ್ತು ಡಾಲರ್‌ಗೇರುವ ಸಾಧ್ಯತೆ ಇದೆಯೆಂದು ವರದಿಯಾಗಿದೆ. ಅಮೆರಿಕ ತೈಲೋತ್ಪಾದನೆ ಕಡಿತಗೊಳಿಸಿದ ಪರಿಣಾಮದಲ್ಲಿ ಅಪೆಕ್ಸ್ ರಾಷ್ಟ್ರಗಳು ಪೆಟ್ರೋಲ್ ಉತ್ಪಾದನೆ ಕಡಿಮೆ ಗೊಳಿಸಿದ ಹಿನ್ನೆಲೆಯಲ್ಲಿ ತೈಲಬೆಲೆಯೇರಿಕೆಯಾಗಿದೆ ಎನ್ನಲಾಗಿದೆ.

ಬ್ರೊಕರೇಜ್ ಹೌಸ್ ಕ್ರೆಡಿಟ್ ಸುಇಸ್ ಕಚ್ಚಾ ತೈಲ ಕುರಿತು ಹೊಸ ವರದಿ ಜಾರಿಗೊಳಿಸಿದ್ದು ಇದರ ಪ್ರಕಾರ ಫೆಬ್ರವರಿ ಕೊನೆಯಲ್ಲಿ ಕಚ್ಚಾ ಮೂಲದಲ್ಲೇ ತೀವ್ರ ಬದಲಾವಣೆ ಆರಂಭವಾಗಿದೆ. ವಿಶ್ವ ಅರ್ಥವ್ಯವಸ್ಥೆಯಲ್ಲಿ ಆರ್ಥಿಕ ಮಾಂದ್ಯದ ಯಾವುದೇ ಬೆದರಿಕೆಗಳಿಲ್ಲ. ಆದ್ದರಿಂದ ಕಚ್ಚಾ ತೈಲದಲ್ಲಿ ಬೆಲೆಹೆಚ್ಚಳವಾಗಿದೆ. ಆದ್ದರಿಂದ ಮಾರ್ಚ್‌ಕೊನೆಗೆ ಕಚ್ಚಾ ತೈಲದ ಬೆಲೆ ಐವತ್ತು ಡಾಲರ್‌ಗೆ ತಲುಪುವ ಸಾಧ್ಯತೆ ವ್ಯಕ್ತವಾಗಿದೆ. ಫೆಬ್ರವರಿಯಲ್ಲಿ ಕಚ್ಚಾತೈಲ ಬ್ಯಾರಲ್‌ವೊಂದಕ್ಕೆ 26.21 ಡಾಲರ್ ಆಗಿತ್ತು. ಈಗ ನಲ್ವತ್ತು ಡಾಲರ್ ಆಗಿದೆ. ಯುವಿಎಸ್ ವೆಲ್ತ್ ಮ್ಯಾನೇಜ್‌ಮೆಂಟ್ ವರದಿಯಲ್ಲಿ ಸಣ್ಣ ಅವಧಿಯಲ್ಲಿ ಕಚ್ಚಾ ತೈಲದ ದರ ಬ್ಯಾರಲೊಂದಕ್ಕೆ 25 ಡಾಲರ್‌ಗೆ ಕುಸಿಯಲಿದೆ. ಆದರೆ ದೀರ್ಘ ಅವಧಿಯಲ್ಲಿ ಬೆಲೆಯಲ್ಲಿ ಸುಧಾರಣೆಗಳಾಗಲಿವೆ. 2016ರ ಕೊನೆಯಲ್ಲಿ ತೈಲ ಮಾರುಕಟ್ಟೆಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. 55 ಡಾಲರ್‌ಗೆ ತಲುಪುವ ಸಂಭಾವ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News