×
Ad

ಪ್ರವಾದಿ ಅವಹೇಳನ ವಿವಾದ: ಮಾತೃಭೂಮಿ ಪತ್ರಿಕೆಯ ಮೂವರು ಪತ್ರಕರ್ತರ ಅಮಾನತು

Update: 2016-03-11 12:10 IST

ತಿರುವನಂತಪುರಂ, ಮಾರ್ಚ್.11: ಪ್ರವಾದಿ(ಸ)ವರನ್ನು ಕೆಟ್ಟದಾಗಿ ಚಿತ್ರಿಸಿದ್ದ ಫೇಸ್‌ಬುಕ್ ಪೋಸ್ಟ್‌ನ್ನು ಮುದ್ರಿಸಿದ್ದ ಘಟನೆಯಲ್ಲಿ ಮೂವರು ಉದ್ಯೋಗಿಗಳನ್ನು ಮಾತೃಭೂಮಿ ದೈನಿಕ ಸಸ್ಪೆಂಡ್ ಮಾಡಿದೆ. ಪತ್ರಿಕೆ ಕಚೇರಿಗೆ ಪ್ರತಿಭಟನೆ ಮೆರವಣಿಗೆ ಮತ್ತು ಪತ್ರಿಕೆಯನ್ನು ಸುಟ್ಟು ಹಾಕಿದ ಘಟನೆ ನಡೆದುದರಿಂದ ಮಾತೃಭೂಮಿ ತನ್ನ ತಪ್ಪಿತಸ್ಥ ಮೂವರು ಉದ್ಯೋಗಿಗಳನ್ನು ಅಮಾನತುಗೊಳಿಸಿತು.

ಫೇಸ್‌ಬುಕ್‌ನಲ್ಲಿ ಬಂದ ಪೋಸ್ಟ್‌ನ್ನು ಪ್ರಕಟಿಸುವಾಗ ನಿರ್ಲಕ್ಷ್ಯವಹಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ತೃಶೂರು, ಕೋಝಿಕ್ಕೋಡ್ ಪ್ರಕಟಣೆಯ ನಗರ ಸಾಪ್ತಾಹಿಕದಲ್ಲಿ ವಿವಾದಿತ ಬರಹ ಪ್ರಕಟವಾಗಿತ್ತು. ಇದಕ್ಕಾಗಿ ಪತ್ರಿಕೆ ವಿಷಾದ ವ್ಯಕ್ತಪಡಿಸಿತ್ತು.

ಪತ್ರಿಕೆಯ ವಿರುದ್ಧ ಸೋಶಿಯಲ್ ಸೈಟ್‌ಗಳು ಸಹಿತ ದೊಡ್ಡ ಪ್ರತಿಭಟನೆ ಪತ್ರಿಕೆಯ ವರ್ತನೆಯ ವಿರುದ್ಧ ಎದ್ದಿತ್ತು. ವಿವಿಧ ಗ್ರೂಪ್‌ಗಳು ಈ ಕೃತ್ಯದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದ್ದವು. ಗಲ್ಫ್ ರಾಷ್ಟ್ರಗಳಲ್ಲಿಯೂ ಪತ್ರಿಕೆಯನ್ನು ನಿಷೇಧಿಸಬೇಕೆಂದು ದೂರು ನೀಡಲಾಗಿದೆ ಎಂಬ ಸೂಚನೆ ಲಭಿಸಿದೆ.
ಪ್ರವಾದಿಯವರನ್ನು ಅಪಮಾನಿಸಿದ ಮಾತೃಭೂಮಿ ಪತ್ರಿಕೆ ಕ್ಷಮೆ ಕೇಳಬೇಕೆಂದು ಪ್ರತಿಭಟನಾ ಹೇಳಿಕೆಗಳು ಮತ್ತು ಪತ್ರಿಕೆಯನ್ನು ಬಹಿಷ್ಕರಿಸಬೇಕೆಂದು ಕರೆ ನೀಡಲಾಗಿದೆ. ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಮಹಿಳೆಯರಿಗೆ ತಾರತಮ್ಯ ಎಸಗಲಾಗಿದೆ ಎಂದು ಕಮಾಲ್ ಪಾಶರ ಅಭಿಪ್ರಾಯ ಪ್ರಕಟಿಸಿದ್ದಕ್ಕೆ ಯಾರೋ ಫೇಸ್‌ಬುಕ್‌ನಲ್ಲಿ ಬರೆದಿದ್ದ ಅವಹೇಳನಕಾರಿ ಬರಹವನ್ನು ಅದೇ ರೀತಿ ಮಾತೃಭೂಮಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News