ಕನ್ಹಯ್ಯಾ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡ ":ಶೆಹ್ಲಾ ರಶೀದ್ ಆರೋಪ
ಬೆಂಗಳೂರು, ಮಾ.11: ಕನ್ನಯ್ಯ ಕುಮಾರ್ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡ ಇದೆ ಎಂದು ಜೆ ಎನ್ ಯು ವಿವಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ : ಪತ್ರಕರ್ತರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದಾರೆ.. ಅವರ ಮಾತಿನ ಮುಖ್ಯಾಂಶಗಳು
*ಕನ್ನಯ್ಯ ಕುಮಾರ್ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡ ಇದೆ.
*ಜವಾಹರ್ ವಿವಿ ಕ್ಯಾಂಪಸ್ ನೊಳಗೆ ಆರ್ ಎಸ್ ಎಸ್ ಮಧ್ಯಪ್ರವೇಶ. ಮಾಡಿ ವಿದ್ಯಾರ್ಥಿಗಳ ನಡುವೆ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ..ಇದು ಸರಿಯಲ್ಲ..
* ಬಿಜೆಪಿ ಸರ್ಕಾರ ವಿವಿ ಆವರಣದೊಳಗೆ ರಾಜಕೀಯ ಮಾಡುವುದು ಸರಿಯಲ್ಲ..
*ವಿವಿಗಳು ಸ್ವಾಯತ್ತ ಸಂಸ್ಥೆಗಳು..
* ಸಂವಿಧಾನದ ಇತಿಮಿತಿಯೊಳಗೆ ನಾವು ಹೋರಾಡುತ್ತಿದ್ದೇವೆ..
* ಅಫ್ಜಲ್ ಗುರು ಬಗ್ಗೆ ನಾವು ಮೃದುಧೋರಣೆ ತಳೆದಿಲ್ಲ..ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ..
*ದೇಶದ ಹಲವು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ನಾವು ಬೆಳಕು ಚೆಲ್ಲುವುದು ತಪ್ಪಾ..
*ಕನ್ನಯ್ಯ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲವನ್ನ ಮೂಡಿಸಿದೆ.
*ಸಮಾಜವಾದಿ ಚಿಂತನೆಯ ಬಗ್ಗೆ ಮಾತನಾಡಿದ್ರೆ ಸಂಘಪರಿವಾರಕ್ಕೆ ಆಗುವುದಿಲ್ಲ..
*ದೇಶದ ಹಲವು ವಿವಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರಿಗೆ ಬೆದರಿಕೆ ಕರೆಗಳು ಸಾಮಾನ್ಯ ವಾಗಿವೆ..
*ಆರ್ ಎಸ್ ಎಸ್ "ಘರ್ ವಾಪಸಿ,ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆಯಂತವುಗಳ ನಿಜ ಸ್ಥಿತಿ ಯ ಬಗ್ಗೆ ತಿಳಿಸಿದರೆ ಅದು ದೇಶದ್ರೋಹವೇ. ?.
*ಆರ್ ಎಸ್ ಎಸ್ ಎಲ್ಲಕ್ಕೂ ಮೂಗು ತೂರಿಸುತ್ತಿದೆ..ಹಿಂದೂ ರಾಷ್ಟ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಚಿಂತನೆ ಮೂಡಿಸುತ್ತಿದ್ದಾರೆ..ಕೇಂದ್ರ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದು ಹೆಚ್ಚಿದೆ..
*ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದು ಕಾನೂನಾಗಿ ಜಾರಿಯೂ ಆಗಿದೆ . ಆದರೆ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಇದನ್ನ ಬಲವಂತವಾಗಿ ಏರಲು ಕೇಂದ್ರ ಸರ್ಕಾರ ಮುಂದಾಗಿದೆ..
*ದೇಶದ ಆದಿವಾಸಿ,ಪರಿಶಿಷ್ಟರು,ಬಡವರ ಹಕ್ಕು ಕೇಳುವುದು ತಪ್ಪೇ. ? ಕನ್ನಯ್ಯ ಕುಮಾರ್ ಕೇಳಿದ್ದೂ ಇದನ್ನೇ.. ಇದಕ್ಕೆ ಇಷ್ಟೇಲ್ಲಾ ರದ್ಧಾಂತ ಮಾಡಲಾಗಿದೆ..
*ಕೇಂದ್ರ ಸರ್ಕಾರ ನಿರಂಕುಶಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ..
ಫೋಟೋ : ಯೂಸುಫ್ ಪಟೇಲ್