ನಿಮಗೆ ಕಿಡ್ನಿ ಸಮಸ್ಯೆಯೇ? ತಿಳಿದುಕೊಳ್ಳಲು ಇಲ್ಲಿವೆ ಎರಡು ಸರಳ ಪರೀಕ್ಷೆಗಳು

Update: 2016-03-13 04:19 GMT

ಕಿಡ್ನಿರೋಗದಲ್ಲಿ ಆರಂಭಿಕ ಹಂತದಲ್ಲಿ ಯಾವ ರೋಗಲಕ್ಷಣವೂ ಕಾಣುವುದಿಲ್ಲ. ಆದ್ದರಿಂದ ಪತ್ತೆ ಮಾಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಿಮಗೆ ಕಿಡ್ನಿಸಮಸ್ಯೆಯ ಅಪಾಯವಿದೆಯೇ ಎಂದು ಸುಲಭ ಪರೀಕ್ಷೆಯಿಂದ ಖಚಿತಪಡಿಸಿಕೊಳ್ಳುವುದು ಸೂಕ್ತ.
ಕಿಡ್ನಿಸಮಸ್ಯೆ ಪತ್ತೆಗೆ ರಾಷ್ಟ್ರೀಯ ಕಿಡ್ನಿ ಫೌಂಡೇಷನ್ ಶಿಫಾರಸ್ಸು ಮಾಡಿರುವ ಎರಡು ಸರಳ ಪರೀಕ್ಷೆಗಳು ಇಲ್ಲಿವೆ.
 1. ಎಸಿಆರ್ ಎಂಬ ಮೂತ್ರ ಪರೀಕ್ಷ
ಎಸಿಆರ್ ಎಂದರೆ ಅಲ್ಬುಮಿನ್ ಟೂ ಕ್ರಿಯೇಟಿನೈನ್ ರೇಷಿಯೊ' ನಿಮ್ಮ ಮೂತ್ರದಲ್ಲಿ ಅಬ್ದುಮಿನ್ ಎಂಬ ಪ್ರೊಟೀನ್ ಎಷ್ಟು ಪ್ರಮಾಣದಲ್ಲಿದೆ ಎನ್ನುವುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ನಿಮ್ಮ ದೇಹಕ್ಕೆ ಪ್ರೊಟೀನ್ ಅಗತ್ಯವಾಗಿದ್ದು, ಅದು ರಕ್ತದಲ್ಲಿ ಇರಬೇಕು. ಮೂತ್ರದಲ್ಲಲ್ಲ. ಮೂತ್ರದಲ್ಲಿ ಪ್ರೊಟೀನ್ ಇದೆ ಎಂದರೆ, ನಿಮ್ಮ ರಕ್ತವನ್ನು ಮೂತ್ರಪಿಂಡ ಸಮರ್ಪಕವಾಗಿ ಶೋಧಿಸುತ್ತಿಲ್ಲ ಎಂಬ ಅರ್ಥ. ಮೂತ್ರಪರೀಕ್ಷೆಯಲ್ಲಿ ಪ್ರೊಟೀನ್ ಧನಾತ್ಮಕವಾಗಿ ಕಂಡುಬಂದರೆ, ಫಲಿತಾಂಶವನ್ನು ಮರು ಪರೀಕ್ಷೆಗೆ ಒಳಪಡಿಸಬೇಕು. ಮೂರು ತಿಂಗಳಲ್ಲಿ ಮೂರು ಧನಾತ್ಮಕ ಪ್ರೊಟೀನ್ ಕಂಡುಬಂದರೆ, ಮೂತ್ರಪಿಂಡದ ರೋಗದ ಲಕ್ಷಣ ಎಂದು ಎನ್‌ಎಫ್‌ಆರ್ ಹೇಳುತ್ತದೆ.
2. ಜಿಎಫ್‌ಆರ್‌ಗೆ ರಕ್ತಪರೀಕ್ಷೆ
ನಿಮ್ಮ ಮೂತ್ರಪಿಂಡಕ್ಕೆ ಹಾನಿಯಾಗಿದೆ ಎಂದಾದರೆ, ನಿಮ್ಮ ರಕ್ತದಿಂದ ಕ್ರಿಯೆಟಿನೈನ್ ಎಂಬ ಕಲ್ಮಶವನ್ನು ತೆಗೆಯುವಲ್ಲಿ ಸಮಸ್ಯೆ ಆಗುತ್ತಿದೆ ಎಂಬ ಅರ್ಥ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ರಕ್ತದ ಕ್ರಿಕೆಟಿನೈನ್ ಅಂಶವನ್ನು ಪತ್ತೆ ಮಾಡಲು ಪರೀಕ್ಷೆ ಕೈಗೊಳ್ಳಬೇಕು. ಈ ಅಂಶ ನಿಮ್ಮ ಗ್ಲೊಮೆರುಲರ್ ಫಿಲ್ಟ್ರೇಷನ್ ರೇಟ್ (ಜಿಎಫ್‌ಆರ್) ಪ್ರಮಾಣವನ್ನು ಪತ್ತೆ ಮಾಡಲು ಕ್ರಿಯೆಟಿನೈನ್ ಬಳಸಲಾಗುತ್ತದೆ. ಆ ಸಂಖ್ಯೆಯಿಂದ ನಿಮ್ಮ ವೈದ್ಯರಿಗೆ ನಿಮ್ಮ ಮೂತ್ರಪಿಂಡ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಮಧುಮೇಹ, ಅಧಿಕ ರಕ್ತದ ಒತ್ತಡ, ಮೂತ್ರಪಿಂಡ ವೈಫಲ್ಯದ ಕುಟುಂಬ ಇತಿಹಾಸ ಅಥವಾ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಈ ರೋಗಸಾಧ್ಯತೆ ಅಧಿಕ ಎಂದು ಕಿಡ್ನಿ ಪ್ರತಿಷ್ಠಾನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News