ಜೋಪಡಾ ಪಟ್ಟಿಯಲ್ಲಿ ಕೋಟಿ ಕೋಟಿ ಹಣ!

Update: 2016-03-14 04:36 GMT

ಸಾಂಗ್ಲಿ, ಮಾರ್ಚ್.14: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪೊಲೀಸರು ಜೋಪಡಾ ಪಟ್ಟಿಯೊಂದಕ್ಕೆ ದಾಳಿ ನಡೆಸಿದಾಗ ವ್ಯಕ್ತಿಯೊಬ್ಬ ಕೋಟ್ಯಂತರ ರೂಪಾಯಿಂ ಬಹುದೊಡ್ಡ ಮೊತ್ತವನ್ನು ವಶದಲ್ಲಿರಿಸಿಕೊಂಡಿದ್ದು ಪತ್ತೆಯಾಗಿದೆ. ಪೊಲೀಸರು ಆತನಲ್ಲಿರುವ ಅಷ್ಟೊಂದು ಹಣ ನೋಡಿ ಸ್ವಲ್ಪ ಸಮಯ ಗರಬಡಿದವರಂತೆ ನಿಂತು ಬಿಟ್ಟರು! ಜೋಪಡಾ ಪಟ್ಟಿಯಲ್ಲಿ ಇಷ್ಟೊಂದು ಹಣ ನೋಡಿದರೆ ಎಂತಹವರೂ ಮೂಗಿನ ಮೇಲೆ ಬೆರಳೇರಿಸದಿರಲಾರರು. ಆದಾಯ ತೆರಿಗೆ ಅಧಿಕಾರಿಗಳು ಮತ್ತು ಪೊಲೀಸರು ಸಾಂಗ್ಲಿಯ ಜೋಪಡಾ ಪಟ್ಟಿಗೆ ರವಿವಾರ ದಾಳಿ ಮಾಡಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ಸುಮಾರು ಮೂರು ಕೋಟಿ ರೂಪಾಯಿ ಪತ್ತೆಯಾಯಿತು. ಪೊಲೀಸರಿಗೆ ಸ್ವಲ್ಪದಿವಸ ಮೊದಲು ಈ ಕುರಿತು ಗುಪ್ತ ಮಾಹಿತಿಯೊಂದು ದೊರೆತಿತ್ತು. ಈ ಆಧಾರದಲ್ಲಿ ಅವರು ಜೋಪಡಾ ಪಟ್ಟಿಗೆ ದಾಳಿ ನಡೆಸಿದ್ದರು. ಮೊಯಿನುದ್ದೀನ್ ಮುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಯ ಕೈಗೆ ಇಷ್ಟೊಂದು ಮೊತ್ತ ಹೇಗೆ ಬಂತು ಎಂದು ಅವರು ತನಿಖೆ ಮುಂದುವರಿಸಿದ್ದಾರೆ. ಜೋಪಡಾ ಪಟ್ಟಿಯಲ್ಲಿಯೂ ಇಷ್ಟೊಂದು ಶ್ರೀಮಂತರಿರುತ್ತಾರಾ ಎಂದು ಯಾರಿಗೂ ಆಶ್ಚರ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News