ಸ್ಮಾರ್ಟ್ ಫೋನ್‌ನಿಂದ ಮಕ್ಕಳಿಗೆ ಸಮೀಪ ದೃಷ್ಟಿ ದೋಷ

Update: 2016-03-14 06:46 GMT

ಹೊಸದಿಲ್ಲಿ, ಮಾ.14: ಭಾರತದ ಎಐಐಎಂಎಸ್ ನಡೆಸಿರುವ ಅಧ್ಯಯನದ ಪ್ರಕಾರ ಸುಮಾರು ಶೇ.13 ಶಾಲಾ ಮಕ್ಕಳಲ್ಲಿ ಸಮೀಪ ದೃಷ್ಟಿ ದೋಷವಿದೆ.

ಕಳೆದ ಒಂದು ದಶಕದಲ್ಲಿ ಹೀಗೆ ಸಮೀಪ ದೃಷ್ಟಿ ದೋಷವಿರುವ ಮಕ್ಕಳ ಸಂಖ್ಯೆ ದ್ವಿಗುಣಗೊಂಡಿದೆ. ಇದಕ್ಕೆ ಕಾರಣ ಸ್ಮಾರ್ಟ್‌ಫೋನ್‌ನಂತಹ ತಾಂತ್ರಿಕ ಉತ್ಪನ್ನಗಳನ್ನು ಅತಿಯಾಗಿ ಬಳಸುವುದೇ ಆಗಿದೆ ಎಂದು ಅಧ್ಯಯನ ಎಚ್ಚರಿಸಿದೆ.
ಎಐಐಎಂಎಸ್ ವಿಜ್ಞಾನಿಗಳ ಪ್ರಕಾರ ದಶಕಗಳ ಹಿಂದೆ ಶೇ.7ರಷ್ಟು ಮಕ್ಕಳಿಗೆ ಮಾತ್ರ ಸಮೀಪದೃಷ್ಟಿ ದೋಷವಿತ್ತು. ಚೀನಾ, ಸಿಂಗಾಪುರ ಮತ್ತು ಥಾಯ್ಲಂಡ್ ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚಾಗಿದೆ.

ಸಮೀಪ ದೃಷ್ಟಿ ದೋಷವಿರುವ ಮಕ್ಕಳಲ್ಲಿ ಕಣ್ಣಿನೊಳಗೆ ಬರುವ ಬೆಳಕು ನೇರವಾಗಿ ರೆಟಿನಾದ ಮೇಲೆ ಗುರಿಯಾಗದೆ ಅದರ ಎದುರು ಬೀಳುತ್ತದೆ. ಇದರಿಂದ ರೋಗಿಗಳಿಗೆ ದೂರದ ವಸ್ತುಗಳು ಸರಿಯಾಗಿ ಕಾಣುವುದಿಲ್ಲ. ಸಮೀಪದ ವಸ್ತುಗಳನ್ನು ನೋಡುವಾಗ ಅವರಿಗೆ ಸಮಸ್ಯೆ ಇರುವುದಿಲ್ಲ.

ಭಾರತದಲ್ಲಿ ಕಣ್ಣಿನ ಸಮಸ್ಯೆಗಳ ಬಗ್ಗೆ ಹೆಚ್ಚು ಅಧ್ಯಯನವಾಗಿಲ್ಲ. ಸಮೀಪ ದೃಷ್ಟಿದೋಷವು ಅದರಲ್ಲಿ ಒಂದಾಗಿದೆ. ನಾವು ಇತರ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದುಕೊಳ್ಳಲು ರಾಷ್ಟ್ರೀಯ ಸಮೀಕ್ಷೆ ನಡೆಸಲಿದ್ದೇವೆ ಎಂದು ಆರ್‌ಪಿ ಸೆಂಟರ್ ಮುಖ್ಯಸ್ಥ ಅತುಲ್ ಕುಮಾರ್ ಹೇಳಿದ್ದಾರೆ.

ಆರ್‌ಪಿ ಸೆಂಟರ್ 1967ರಿಂದ ಕಣ್ಣಿನ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದೆ. ಈವರೆಗೆ 1400 ಕಾರ್ನಿಯಗಳನ್ನು ಸ್ವಯಂ ಕಣ್ಣು ದಾನಿಗಳಿಂದ ಮರುಪಡೆದುಕೊಳ್ಳಲಾಗಿದೆ. ಆರ್‌ಪಿ ಸೆಂಟರ್‌ನಲ್ಲಿ 950 ಕಾರ್ನಿಯಲ್ ಟ್ರಾನ್ಸಪ್ಲಾಂಟ್ ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂದು ಎಐಐಎಂಎಸ್ ನೇತ್ರ ತಜ್ಞ ಜೀವನ್ ಸಿಂಗ್ ಟತಿಯಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News