×
Ad

ಮಳೆಯಿಂದಾಗಿ ಮಹಡಿ ಮನೆ ಕುಸಿತ: ತಾಯಿ,ಮೂವರು ಮಕ್ಕಳ ಸಹಿತ ಐವರ ಮೃತ್ಯು

Update: 2016-03-14 13:33 IST

ಮೀರತ್, ಮಾರ್ಚ್.14: ಎರಡು ದಿವಸಗಳಿಂದ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಾಗುತ್ತಿದ್ದು ಶನಿವಾರ ಗಾಳಿ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ರವಿವಾರದಂದು  ಕೂಡಿ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ಕುಸಿದು ಬಿದ್ದಿದೆ. ಭೀಕರ ದುರ್ಘಟನೆಯಿಂದಾಗಿ ಗರ್ಭಿಣಿಮಹಿಳೆ ಮತ್ತು ಅವರ ಮೂವರು ಮಕ್ಕಳ ಸಹಿತ ಐದು ಮಂದಿ ಮೃತರಾಗಿದ್ದಾರೆ. ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದೆ. ಮನೆಗಳ ಅವಶೇಷಗಳೊಳಗೆ ಒಂಬತ್ತು ಜಾನುವಾರುಗಳು ಜೀವಂತ ಸಮಾಧಿಯಾಗಿವೆ. ಕೂಡಿ ಗ್ರಾಮದ ವಿಜಯಪಾಲ್ ಪ್ರಜಾಪತಿಗೆ ಐವರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಕಳೆದ ಎರಡು ದಿನಗಳಿಂದ ಇಲ್ಲಿ ಗಾಳಿ ಮಳೆಬಿರುಸಿನಿಂದಾಗಿತ್ತು. ರವಿವಾರ ಬೆಳಗ್ಗೆ 3:45ಕ್ಕೆ ವಿಜಂಪಾಲ್‌ರ ಎರಡುಅಂತಸ್ತಿನ ಮನೆ ಕುಸಿದು ಬಿದ್ದು ಧರಾಶಾಯಿಯಾಗಿದೆ. ಅವಶೇಷಗಳ ಅಡಿಯಿಂದ ವಿಜಯಪಾಲ್(55) ಅವರ ಮಗ ಪ್ರಿನ್ಸ್(16) ವಿಜಯಪಾಲರ ಬಾವ ದೇವಿಶರಣ್(45) ವಿಜಯಪಾಲ್‌ರ ಮೊಮ್ಮಗ ಆಶೂ, ಪುತ್ರ ಪ್ರಮೋದ್ ಅಲ್ಲದೆ ಎರಡನೆ ಮಹಡಿಯಲ್ಲಿ ಮಲಗಿದ್ದ ವಿಜಯಪಾಲ್‌ರ ಇನ್ನೊಬ್ಬ ಮಗ ನರೇಂದ್ರ(26) ಅವನ ಐದು ತಿಂಗಳ ಗರ್ಭಿಣಿ ಪತ್ನಿ ಸುಮನ್(24)ಮತ್ತು ಪುತ್ರ ದುರ್ಜನ್(4) ಮತ್ತು ಖುಶಿ(2) ಭೂಮಿಯೊಳಗೆ ಸಿಲುಕಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News