×
Ad

ಮಹಿಳೆಯ ವಿರುದ್ಧ ಅನುಚಿತ ವರ್ತನೆ ಆರೋಪ: ಗ್ರಾಮಪ್ರಧಾನನಿಗೂ ಜೈಲೇ ಗತಿ

Update: 2016-03-14 14:35 IST

ಭಾಗ್‌ಪತ್, ಮಾಚ್.14: ಉತ್ತರ ಪ್ರದೇಶ ಬಾಗ್‌ಪತ್ ಗ್ರಾಮದ ಪ್ರಧಾನ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರಲಾಗಿದ್ದು ಅವನೀಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ. ರಾತ್ರಿವೇಳೆ ಮನೆಯೊಂದರಲ್ಲಿ ಗಲಾಟೆ ಕೇಳಿ ಓಡಿ ಬಂದ ನೆರೆಯವರು ಆರೋಪಿ ಪ್ರಧಾನನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಆರೋಪಿ ಪಂಚಾಯತ್ ಪ್ರಧಾನ ಛಿಪ್ರೌಲಿಯ ಬ್ಲಾಕ್ ಪ್ರಮುಖನ ಸ್ಥಾನವನ್ನು ತಪ್ಪಿಸಲಿಕ್ಕಾಗಿ ಸುಳ್ಳು ಕೇಸಿನಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾನೆ. ಈ ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನೆಲೆಸಿತ್ತು. ರೋಶನ್‌ಗಡ ಗ್ರಾಮದ ವ್ಯಕ್ತಿಯೊಬ್ಬ ಪೊಲೀಸರಿಗೆ ಗ್ರಾಮ ಪ್ರಧಾನನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಶುಕ್ರವಾರ ರಾತ್ರೆ ಮನೆಯಲ್ಲಿ ನಾವೆಲ್ಲಾ ಮಲಗಿದ್ದಾಗ  ಹನ್ನೊಂದು ಗಂಟೆಯ ವೇಳೆಗೆ ಗ್ರಾಮ ಪ್ರಧಾನ ನಾಝಿಮ್ ಎಂಬಾತ ಮನೆಗೆ ಬಂದು ತನ್ನ ಸೊಸೆಯನ್ನು ಕೆಟ್ಟ ದೃಷ್ಟಿಯಲ್ಲಿ ಸ್ಪರ್ಶಿಸಿದ್ದಲ್ಲದೆ ಕೆಟ್ಟದಾಗಿ ವರ್ತಿಸಿದ್ದಾನೆ. ಗದ್ದಲ ಕೇಳಿ ಮನೆಯವರು ನಿದ್ದೆಯಿಂದ ಎಚ್ಚರಗೊಂಡಿದ್ದೆವು. ಗದ್ದಲ ಕೇಳಿ ಬಂದಿದ್ದ ಜನರು ಗ್ರಾಮ ಪ್ರಧಾನನ್ನುಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ದೂರು ನೀಡಿದ್ದಾನೆ. ಘಟನೆಯ ನಂತರ ಅಲ್ಲಿಗೆ ಬಂದಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿ ಪ್ರಧಾನನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಖೆಕಡಾದ ಎಸ್ಸೈ ಶ್ವೇತಾಭ್ ಪಾಂಡೆ ಹೇಳುವ ಪ್ರಕಾರ ಆರೋಪಿಯ ವಿರುದ್ಧ ಕೇಸು ದಾಖಲಿಸಿ ಕೋರ್ಟಿಗೆ ಹಾಜರು ಪಡಿಸಲಾಗಿದ್ದು ಅಲ್ಲಿಂದ ಜೈಲಿಗೆ ಅಟ್ಟಲಾಗಿದೆ. ಅತ್ತ ಆರೋಪಿ ಹಾಜಿ ನಾಝಿಮ್ ತನಗೆ ಛಿಪ್ರೌಲಿ ಬ್ಲಾಕ್ ಪ್ರಮುಖನ ಸ್ಥಾನ ತಪ್ಪಿಲಿಸಲಿಕ್ಕಾಗಿ ತನ್ನ ವಿರುದ್ಧ ಯೋಜಿತ ಷಂಡ್ಯಂತ್ರ ಮಾಡಲಾಗಿದೆ. ದೂರು ನೀಡಿದವರೇ ತನ್ನನ್ನು ಅಲ್ಲಿಗೆ ರಾತ್ರೆ ವೇಳೆ ಅಲ್ಲಿಗೆ ಕರೆದುಕೊಂಡುಹೋಗಿದ್ದರು ಮತ್ತು ಅವರೇ ತನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದು ಅಲವತ್ತುಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News