×
Ad

ಸೇನೆಗೆ ಏಕೆ ಜೀವರಕ್ಷಕ ಜಾಕೆಟ್ ಕೊರತೆ?

Update: 2016-03-14 23:44 IST

ಭಾರತೀಯ ಸೇನೆ 50 ಸಾವಿರ ಜೀವರಕ್ಷಕ ಗುಂಡುನಿರೋಧಕ ಜಾಕೆಟ್ ಖರೀದಿಗೆ 120 ಕೋಟಿ ರೂ. ಗುತ್ತಿಗೆ ಅಂತಿಮಪಡಿಸಲು ಅಸಮರ್ಥವಾಗಿದೆ. ನಮ್ಮ ದೇಶದ ರಕ್ಷಣೆಯ ಹೊಣೆ ಹೊತ್ತ ಯೋಧರಿಗೆ ಅಗತ್ಯವಾದ 3.5 ಲಕ್ಷ ಜೀವರಕ್ಷಕ ಜಾಕೆಟ್‌ಗಳ ಪೈಕಿ ಅರ್ಧದಷ್ಟರಲ್ಲೇ ಕಾರ್ಯ ನಿರ್ವಹಿಸಬೇಕಾದ ದುಃಸ್ಥಿತಿ. 2009ರಿಂದಲೂ ಈ ಕೊರತೆ ಹಾಗೆಯೇ ಉಳಿದುಕೊಂಡಿದೆ.

ಇದೀಗ ಅಂತಿಮವಾಗಿ ರಕ್ಷಣಾ ಸಚಿವಾಲಯ ಎರಡು ಭಾರತೀಯ ಕಂಪೆನಿಗಳ ಜತೆ ಈ ವಹಿವಾಟಿಗೆ ಸಂಬಂ ಸಿದಂತೆ ಮಧ್ಯಾಂತರ ಒಪ್ಪಂದ ಅಂತಿಮಪಡಿಸಿ, ತುರ್ತಾಗಿ ಅಗತ್ಯವಿರುವ 50 ಸಾವಿರ ಗುಂಡುನಿರೋಧಕ ಜಾಕೆಟ್‌ಗಳ ಖರೀದಿಗೆ ಮುಂದಾಗಿದೆ. ಆದರೆ ಇದು ಅಂತಿಮವಾಗಿ 5 ತಿಂಗಳು ಕಳೆದರೂ ಒಪ್ಪಂದಕ್ಕೆ ಸಹಿ ಇನ್ನೂ ಆಗಿಲ್ಲ..
ಕಾನ್ಪುರ ಮೂಲದ ಎಂಕೆಯು ಮತ್ತು ಟಾಟಾ ಅಡ್ವಾನ್ಸ್ ಡ್ ಮೆಟೀರಿಯಲ್ಸ್ ಸಂಸ್ಥೆಗಳು ತಲಾ 25 ಸಾವಿರ ಗುಂಡು ನಿರೋಧಕ ಜಾಕೆಟ್‌ಗಳನ್ನು ಪೂರೈಸಬೇಕು. ಮಾತುಕತೆ ಅಂತಿಮವಾದ ಬಳಿಕ ಔಪಚಾರಿಕ ಪತ್ರವನ್ನು ಈ ಕಂಪೆನಿಗಳು ಸಚಿವಾಲಯಕ್ಕೆ ಸಲ್ಲಿಸಿವೆ. ಆದರೆ ಅದಕ್ಕೆ ಯಾವುದೇ ಕಾರಣವನ್ನೂ ನೀಡದೆ, ಒಪ್ಪಂದಕ್ಕೆ ಸಹಿ ವಿಳಂಬ ಮಾಡಲಾಗುತ್ತಿದೆ. ಪ್ರತಿ ಗುಂಡುನಿರೋಧಕ ಜಾಕೆಟ್‌ಗಳ ಬೆಲೆ 24 ಸಾವಿರ ರೂ..
ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಕಳೆದ ಡಿಸೆಂಬರ್‌ನಲ್ಲೇ ಈ ಸಂಬಂಧ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರೂ, ಸೇನಾ ಕೇಂದ್ರ ಕಚೇರಿಯಲ್ಲಿ ಅನಗತ್ಯ ವಿಳಂಬ ವಾಗಿದೆ. ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಿಗೆ ಒಂದು ಬಾರಿ ಹಣಕಾಸು ಅಕಾರದ ನಿಯಮಾವಳಿ ಸಡಿಲಿಸಿ, ಆದಾಯಪಥದಲ್ಲಿ 50 ಸಾವಿರ ಗುಂಡುನಿರೋಧಕ ಜಾಕೆಟ್‌ಗಳನ್ನು ಖರೀದಿಸಿಲು ಅನುಮತಿ ನೀಡಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿಕೆ ನೀಡಿದ್ದರು. ಅಂದರೆ ಸೇನೆ, ಸರಕಾರದ ಬಳಿ ಲಭ್ಯವಿರುವ ಆಂತರಿಕ ನಿಯನ್ನು ಬಳಸಿಕೊಂಡು ಕಾರ್ಯಾದೇಶ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದಾಗಿ ಮೂರು ತಿಂಗಳು ಕಳೆದರೂ ಗುಂಡುನಿರೋಧಕ ಜಾಕೆಟ್‌ಗೆ ಸಂಬಂಸಿದ ಕಡತ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುತ್ತಲೇ ಇದೆ. ಸೇನೆ ಇದಕ್ಕೆ ನೀಡುವ ಕಾರಣವೆಂದರೆ, ಗುತ್ತಿಗೆ ಸಮರ್ಪಕ ಹಾಗೂ ಕಟ್ಟುನಿಟ್ಟಿನ ನಿಯಮಾವಳಿ ಒಳಗೊಂಡಿರಬೇಕು ಎನ್ನುವುದು.

ಈ ನಂಬಲಸಾಧ್ಯವಾದ ವಿಳಂಬ, ತುರ್ತು ಖರೀದಿಯ ಅಗತ್ಯ ಎಂದರೇನು ಎಂಬ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಿಳಂಬ ಕಮಾಂಡರ್‌ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಏಕೆಂದರೆ ಯುದ್ಧಸಂದರ್ಭದಲ್ಲಿ ಇಂತಹ ಜೀವರಕ್ಷಕ ಗುಂಡುನಿರೋಧಕ ಜಾಕೆಟ್‌ಗಳು ಮೂಲಭೂತ ಅಗತ್ಯದ ಕಿಟ್‌ನ ಭಾಗವಾಗಿದ್ದು, ಯುದ್ಧಕ್ಕೆ ನಿಯೋಜಿಸುವ ಪ್ರತಿಯೊಬ್ಬ ಸೈನಿಕನಿಗೂ ಅನಿವಾರ್ಯ. ಈ ಅನಗತ್ಯ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಸೇನೆಯ ಜನರಲ್ ಇನ್‌ಯ್ಾಂಟ್ರಿಯ ಮಹಾನಿರ್ದೇಶಕರಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಶಂಕರ್ ಪ್ರಸಾದ್, ನಿಮ್ಮಂಥ ಒಬ್ಬ ಪತ್ರಕರ್ತರು 2001ರಲ್ಲಿ ನಾನು ಸೇವೆಯಲ್ಲಿದ್ದಾಗ ಈ ಪ್ರಶ್ನೆಯನ್ನು ನನಗೆ ಕೇಳಿದ್ದರು. ನಾನು ಸೇವೆಯಿಂದ ನಿವೃತ್ತನಾದ 14 ವರ್ಷಗಳ ಬಳಿಕವೂ ಈ ಪ್ರಶ್ನೆಗೆ ಉತ್ತರಿಸಬೇಕಾದ ದಯನೀಯ ಸ್ಥಿತಿ ನಮ್ಮ ಸೇನೆಯದ್ದು. ಅಂದರೆ ಭಾರತೀಯ ಸೇನೆಗೆ ಮೂಲಭೂತವಾದ ಗುಂಡುನಿರೋಧಕ ಜಾಕೆಟ್‌ಗಳು ಇನ್ನೂ ಇಲ್ಲ ಎಂದು ಹೇಳಿದ್ದಾರೆ.


ಒಟ್ಟಾರೆ ಸೇನೆಗೆ ಅಗತ್ಯವಾದ 1.86 ಲಕ್ಷ ಗುಂಡುನಿರೋಧಕ ಜಾಕೆಟ್‌ಗಳ ಖರೀದಿ ಪ್ರಸ್ತಾವ ಬಿದ್ದುಹೋದ ಬಳಿಕ, ಈ ತುರ್ತು ಅಗತ್ಯವಾದ 50 ಸಾವಿರ ಜಾಕೆಟ್‌ಗಳ ಖರೀದಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸೇನೆ ಖರೀದಿ ಒಪ್ಪಂದದ ಪೂರ್ವಭಾವಿಯಾಗಿ ನಡೆಸಿದ ವಿಚಾರಣೆಯಲ್ಲಿ ಯಾವುದೇ ಕಂಪೆನಿಗಳು ಅರ್ಹತೆ ಪಡೆದಿಲ್ಲ. ಸೇನೆಯ ಮೂಲಗಳ ಪ್ರಕಾರ ಪೂರ್ವಭಾವಿ ಮಾತುಕತೆಯಲ್ಲಿ ಭಾಗವಹಿಸಿದ್ದ ನಾಲ್ಕು ಕಂಪೆನಿಗಳ ಪೈಕಿ ಒಂದು ಮಾತ್ರ ಮೊದಲ ಸುತ್ತಿನಲ್ಲಿ ಅರ್ಹವಾಗಿದೆ. ಅಂದರೆ 0.30 ಕ್ಯಾಲಿಬರ್ ಅರ್ಮೋರ್ ಪೀರ್ಸಿಂಗ್ ಗುಂಡುಗಳನ್ನು ತಡೆಯುವ ಸಾಮರ್ಥ್ಯವನ್ನು ವಿಭಿನ್ನ ಪರಿಸ್ಥಿತಿಯಲ್ಲಿ ಇಂತಹ ಸರಣಿ ಪರೀಕ್ಷೆಗಳಲ್ಲಿ ಸಾಬೀತುಪಡಿಸಬೇಕು. ಮೊದಲ ಸುತ್ತಿನಲ್ಲಿ ತೇರ್ಗಡೆಯಾದ ಉತ್ಪಾದಕ ಸಂಸ್ಥೆ ಮುಂದಿನ ಹಂತದಲ್ಲಿ ಅರ್ಹತೆ ಪಡೆಯಲಿಲ್ಲ. ಏಕೆಂದರೆ ಗುಂಡುನಿರೋಧಕ ಜಾಕೆಟ್‌ಗಳನ್ನು ವಾಸ್ತವ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಇದ್ದ ಲೋಪಗಳಿಂದ ಕೂಡಿರುವಂತೆ ಉದ್ದೇಶಪೂರ್ವಕವಾಗಿ ಕಳಪೆ ಮಾಡಲಾಯಿತು. ಈ ಕಾರ್ಯಾದೇಶಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದ ಕೆಲವು ಕಂಪೆನಿಗಳು ಈ ವಿಚಾರಣಾ ಪದ್ಧತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ವಿಚಾರಣೆ ವೇಳೆಯಲ್ಲಿ ಸೇನೆಯ ಅಗತ್ಯತೆಗಳನ್ನು ಸ್ಪಷ್ಟವಾಗಿ ಹೇಳಿದರೆ, ಹಾಲಿ ಇರುವ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಸೇನೆಯ ಅಗತ್ಯತೆಗಳನ್ನು ಸುಲಭವಾಗಿ ಪೂರೈಸಲು ಅವಕಾಶವಿದೆ. ಈ ವಿಚಾರಣೆಯಲ್ಲಿ ಅರ್ಹತೆ ಪಡೆಯಲು ವಿಲವಾದ ಒಂದು ಉತ್ಪಾದಕ ಸಂಸ್ಥೆಯ ಪ್ರಕಾರ, ಸೇನೆ ಆರಂಭದಲ್ಲಿ ಅಮೆರಿಕದ ರಾಷ್ಟ್ರೀಯ ನ್ಯಾಯ ಸಂಸ್ಥೆಯ ನಾಲ್ಕನೇ ಹಂತದ ನಿರ್ದಿಷ್ಟತೆಗಳನ್ನು ಬಯಸಿತ್ತು. ಆದರೆ ವಿಚಾರಣಾ ಪ್ರಕ್ರಿಯೆಯಲ್ಲಿ ವಿಭಿನ್ನ ಕಾರ್ಯವಿಧಾನವನ್ನು ಅನುಸರಿಸಿತು. ಸೇನೆಯಲ್ಲಿ ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ ಎಂದು ಸಂಸ್ಥೆಯ ಪ್ರತಿನಿ ಪ್ರತಿಕ್ರಿಯಿಸಿದರು. ರಕ್ಷಾಕವಚಗಳ ಉತ್ಪಾದಕರು ಸುಲಭವಾಗಿ ಸೇನೆ ಅಗತ್ಯತೆಯ ಗುಂಡುನಿರೋಧಕ ಜಾಕೆಟ್‌ಗಳನ್ನು ಉತ್ಪಾದಿಸಬಹುದು ಅಥವಾ ಅದಕ್ಕೂ ಮೀರಿದ ಗುಣಮಟ್ಟವನ್ನೂ ಪೂರೈಸಬಹುದು ಎಂದು ಅವರು ಹೇಳುತ್ತಾರೆ.
ಎನ್‌ಐಜೆ ನಾಲ್ಕನೆ ಹಂತದ ನಿರ್ದಿಷ್ಟತೆಗಳಿಗೆ ಅನುಗುಣವಾದ ಜಾಕೆಟ್‌ಗಳನ್ನು ಖರೀದಿ ಮಾಡಲು ವಿಲವಾದ ಬಳಿಕ ತುರ್ತು ಅಗತ್ಯ ಪೂರೈಸಲು, ಹಾಲಿ ಇರುವ ಕಡಿಮೆ ಗುಣಮಟ್ಟದ 50 ಸಾವಿರ ಜಾಕೆಟ್‌ಗಳ ಖರೀದಿಗೇ ಇದೀಗ ಸೇನೆ ಮುಂದಾಗಿದೆ. ಕಳೆದ ವರ್ಷದ ವಿಚಾರಣೆಯಲ್ಲಿ ವಿಲವಾಗಿರುವುದು ಎಂದರೆ, ಸೇನೆ ತನ್ನ ಉಳಿದ 1.3 ಲಕ್ಷ ಜಾಕೆಟ್‌ಗಳ ಗುಣಾತ್ಮಕ ಅಗತ್ಯತೆಗಳ ಪಟ್ಟಿಯನ್ನೂ ಪರಿಷ್ಕರಿಸಬೇಕಿದೆ ಎಂಬ ಅರ್ಥ. ಹೀಗೆ ಹೊಸ ಅಗತ್ಯತೆಗಳ ಮಾನದಂಡಕ್ಕೆ ಅನುಗುಣವಾಗಿ ವಿಚಾರಣೆ ನಡೆಸಿ, ಕಂಪೆನಿಗಳ ಪಟ್ಟಿ ಸಿದ್ಧಪಡಿಸಿ, ಮಾತುಕತೆ ನಡೆಸಿ, ಸಾಧ್ಯವಾದರೆ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಈ ಪ್ರಕ್ರಿಯೆ ಇದುವರೆಗೂ ಅನಗತ್ಯ ವಿಳಂಬವಾಗಿದೆ.
ನಮ್ಮ ಹುಡುಗರು ಇಂದಿಗೂ ಮೂಲಭೂತವಾದ ಜೀವರಕ್ಷಕ ಪರಿಕರಗಳಿಲ್ಲದೇ ಸಾಯುತ್ತಿರುವುದು ಆಕ್ರೋಶ ಹುಟ್ಟಿಸುತ್ತದೆ. ಗುಂಡುನಿರೋಧಕ ಜಾಕೆಟ್‌ಗಳ ಖರೀದಿ ಅಷ್ಟೊಂದು ಕಷ್ಟದ ಕೆಲಸವೇ? ಎಂದು ಲೆಫ್ಟಿನೆಂಟ್ ಜನರಲ್ ಪ್ರಸಾದ್ ಪ್ರಶ್ನಿಸುತ್ತಾರೆ.
(ಕೃಪೆ: ಎನ್‌ಡಿಟಿವಿ)

Writer - ವಿಷ್ಣು ಸೋಮ್

contributor

Editor - ವಿಷ್ಣು ಸೋಮ್

contributor

Similar News