×
Ad

ಪೊಲೀಸ್‌ ಕುದುರೆಯ ಕಾಲು ಮುರಿದ ಶಾಸಕನ ವಿರುದ್ಧ ಸಚಿವೆ ಮೇನಕ ಗಾಂಧಿ ಗರಂ

Update: 2016-03-16 11:09 IST

ಹೊಸದಿಲ್ಲಿ, ಮಾ.16: ಪೊಲೀಸ್ ಕುದುರೆಯ ಕಾಲು ಮುರಿದ ಬಿಜೆಪಿ ಶಾಸಕ ಗಣೇಶ್‌ ಜೋಶಿ ವಿರುದ್ಧ ಗರಂ ಆಗಿರುವ ಕೇಂದ್ರ ಸಚಿವೆ ಮೇನಕ ಗಾಂಧಿ ಆತನನ್ನು ಪಕ್ಷದಿಂದ ಹೊರ ಹಾಕುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
"ಜೋಶಿ ವಿರುದ್ಧ ಕ್ರಮಕೈಗೊಳ್ಳಬೇಕು. ಅವರನ್ನು ಪಕ್ಷದಿಂದ ಹೊರಹಾಕಬೇಕು. ಏಕೆಂದರೆ ಅವರು ಪಕ್ಷಕ್ಕೆ ಕೆಟ್ಟ ಹೆಸರು ತಂದಿದ್ದಾರೆ'' ಎಂದು ಮನೇಕ ಗಾಂಧಿ ಹೇಳಿದ್ದಾರೆ.

ಜೋಶಿ  ತಾನು ಕುದುರೆಯ ಕಾಲು ಮುರಿದಿರುವುದನ್ನು ನಿರಾಕರಿಸಿದ್ದಾರೆ. ತಾನು ಕುದುರೆಯ ಕಾಲು ಮುರಿದಿಲ್ಲ. ಪಕ್ಷದ ಕಾರ್ಯಕರ್ತನೋರ್ವ ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ” ಆದರೆ ಪಕ್ಷದ ಕಾರ್ಯಕರ್ತರು ಜೋಶಿ ವಿರುದ್ಧ ಆರೋಪ ಹೊರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳು ಲಭ್ಯವಾಗಿದೆ. ಜೋಶಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News