×
Ad

ಮೂರು ಬಾರಿ ಭಾರತ್ ಮಾತಾಕಿ ಜೈ ಎಂದು ಘೋಷಿಸಿದ ಜಾವೇದ್ ಅಕ್ತರ್‌

Update: 2016-03-16 12:13 IST

ಹೊಸದಿಲ್ಲಿ, ಮಾರ್ಚ್. 16: ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಜಾವೇದ್ ಅಕ್ತರ್ ದೇಶದಲ್ಲಿರುವ ಪರಿಸ್ಥಿತಿಯ ಕುರಿತು ತೀವ್ರವಾದ ಚಿಂತನೆಯನ್ನು ಪ್ರಕಟಿಸುತ್ತಾ ಸಂಸದ ಅಸಾದುದ್ದೀನ್ ಉವೈಸಿಯವರ ಮೇಲೆ ಕಟು ಟೀಕಾಪ್ರಹಾರವನ್ನು ನಡೆಸಿದ್ದಾರೆ. ಜೊತೆಗೆ ಆಳುವ ಬಿಜೆಪಿ ತನ್ನ ಶಾಸಕರು, ಸಂಸದರು ಮತ್ತು ಮಂತ್ರಿಗಳು ಕೋಮು ಪ್ರಚೋದಕ ಹೇಳಿಕೆಯನ್ನು ನೀಡದಂತೆ ತಡೆಯಬೇಕೆಂದು ಸಹಾ ವಿನಂತಿಸಿದ್ದಾರೆ.

 ಭಾರತ್ ಮಾತಾ ಕಿ ಜೈ ಹೇಳಲು ನಿರಾಕರಿಸುವ ಉವೈಸಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತ ಮೂರು ಭಾರಿ ಸಂಸತ್ತಿನಲ್ಲಿ ಭಾರತ್ ಮಾತಾಕಿ ಜೈ ಎಂದು ಘೋಷಿಸಿ ಸಂಸತ್‌ನಲ್ಲಿ ಚಪ್ಪಾಳೆ ಗಿಟ್ಟಿಸಿದರು. ಜಾವೇದ್ ಅಕ್ತರ್ ತನ್ನ ವಿದಾಯ ಭಾಷಣದಲ್ಲಿ ಉವೈಸಿಯನ್ನು ನೇರವಾಗಿ ಉಲ್ಲೇಖಿಸದೆಯೇ ಪರೋಕ್ಷ ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶದ ಒಬ್ಬ ವ್ಯಕ್ತಿ ಇದ್ದಾರೆ. ಅವರು ಅಲ್ಲಿನ ಒಬ್ಬ ಸಂಸದರಾಗಿದ್ದಾರೆ. ಒಂದು ನಗರ ಮತ್ತು ಒಂದು ಮೊಹಲ್ಲಾದಿಂದ ವಿಸ್ತಾರವಾಗಿ ಅವರು ಬೆಳೆದಿಲ್ಲ. ಯಾವ ಬೆಲೆ ತೆರಬೇಕಾಗಿ ಬಂದರೂ ಭಾರತ್ ಮಾತಾಕಿ ಜೈ ಹೇಳಲಾರೆ. ಹಾಗೆ ಹೇಳಬೇಕೆಂದು ಸಂವಿಧಾನದಲ್ಲಿಲ್ಲ ಎಂದು ನಾಟಕವಾಡುತ್ತಿದ್ದಾರೆಂದು ಅಕ್ತರ್ ಸಂಸದ ಉವೈಸಿಯನ್ನು ಪರೋಕ್ಷವಾಗಿ ಕುಟುಕಿದ್ದಾರೆ.

ಶೇರ್‌ವಾನಿ ಮತ್ತು ಟೋಪಿ ಧರಿಸುವ ಉವೈಸಿಯ ಉಡುಪನ್ನು ಉಲ್ಲೇಖಿಸುತ್ತಾ ಜಾವೇದ್ ಅಕ್ತರ್ ಈ ಬಟ್ಟೆ ಧರಿಸಬೇಕೆಂದು ಸಂವಿಧಾನಲ್ಲಿ ಬರೆದಿದೆಯೇ ಎಂದು ಪ್ರಶ್ನಿಸಿದ್ದಾರೆ. ಭಾರತ್‌ಮಾತಾಕಿಜೈ ಎನ್ನುವುದು ತನ್ನ ಹಕ್ಕು ನಾನು ಹೇಳುತ್ತೇನೆ- ಭಾರತ್ ಮಾತಾಕಿ ಜೈ, ಭಾರತ್‌ಮಾತಾಕಿ ಜೈ,ಭಾರತ್‌ಮಾತಾಕಿ ಜೈ ಎಂದು ಅವರು ಜೋರಾಗಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದಾಗ ಸಂಸತ್‌ನಲ್ಲಿ ಚಪ್ಪಾಳೆಯ ಸದ್ದು ತುಂಬಿಕೊಂಡಿತು.

ಇದರೊಂದಿಗೆ ಆಡಳಿತ ಪಕ್ಷದ ಮೇಲೆಯೂ ಟೀಕಾ ಪ್ರಹಾರ ಮಾಡಿದ ಜಾವೇದ್ ಅಕ್ತರ್ ದೇಶದಲ್ಲಿ ಧ್ರವೀಕರಣ ಮತ್ತು ಧಾರ್ಮಿಕ ಕಠೋರತೆಯನ್ನು ಹರಡುವ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ತನ್ನ ಶಾಸಕರು ಸಂಸದರು ಮತ್ತು ಮಂತ್ರಿಗಳು ಪ್ರಚೋದಕ ಹೇಳಿಕೆ ನೀಡುವುದನ್ನು ತಡೆಯಬೇಕೆಂದು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News