ಹುಲಿ, ಚಿರತೆ ಚರ್ಮಕ್ಕೆ ದೈವಿಕತೆ ಆರೋಪಿಸಿ ವಿದೇಶಿಗಳಿಂದ ಲಕ್ಷಾಂತರ ರೂ. ಸುಲಿಗೆ ನಡೆಸುವ ತಂಡದ ಬಂಧನ!
ತಿರುವನಂತಪುರಂ, ಮಾರ್ಚ್,16: ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಪ್ರಾಣಿ ಚರ್ಮಮಾರಾಟ ಸಕ್ರಿಯವಾಗಿದೆ ಎಂದು ಅರಣ್ಯ ಇಲಾಖೆ ಇಂಟಲಿಜೆನ್ಸ್ ವರದಿಮಾಡಿದೆ. ಹುಲಿಯ ಚಿರತೆ, ಜಿಂಕೆಗಳ ಚರ್ಮಕ್ಕೆ ಭಾರೀ ಬೇಡಿಕೆ ಹೆಚ್ಚಿವೆ. ಇವುಗಳ ಮೇಲೆ ಕೂತು ಧ್ಯಾನಿಸಿದರೆ ಮೋಕ್ಷ ಲಭಿಸುವುದೆಂದು ಪ್ರಚಾರ ಮಾಡಿ ವಿದೇಶಿಗಳನ್ನು ವಂಚಿಸುವ ತಂಡ ಅಲ್ಲಿ ಸಕ್ರಿಯವಾಗಿದೆ ಎಂದು ವರದಿಯಾಗಿದೆ.
ಕಳೆದ ದಿವಸ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಂಲ್ಲಿ ಅರ್ಧಕೋಟಿ ಬೆಲೆ ಬಾಳುವ ಚಿರತೆ ಚರ್ಮವನ್ನು ರೈಲ್ವೆ ಸ್ಟೇಶನ್‌ನಿಂದ ವಶ ಪಡಿಸಿಕೊಂಡಿದ್ದಾರೆ. ವರ್ಕಲ ಮತ್ತು ಕೋವಳಕ್ಕೆ ಬರುವ ವಿದೇಶಿಗಳಿಗೆ ಪ್ರವಾಸಿಗರಿಗೆ ಚಿರತೆ ಚರ್ಮವನ್ನು ತಂದಿರುವುದಾಗಿ ಅರಣ್ಯ ಇಲಾಖೆಯ ಅದಿಕಾರಿಗಳಿಗೆ ಆರೋಪಿಗಳು ತಿಳಿಸಿದ್ದಾರೆ.
ಮೃಗಗಳ ಚರ್ಮದಲ್ಲಿ ಕೂತು ಧ್ಯಾನ, ಯೋಗ ಮುಂತಾದುವು ಮಾಡುವುದು ಆರೋಗ್ಯ ಮತ್ತು ಆತ್ಮಮೋಕ್ಷಕ್ಕೆ ಅತ್ಯುತ್ತಮ ಎಂದು ಹೇಳಿ ಇವರು ವಂಚಿಸುತ್ತಿದ್ದರು. ಅದರಂತೆ ಚಿರತೆ,ಜಿಂಕೆ, ದನ, ಎಮ್ಮೆಯ ಚರ್ಮಗಳನ್ನು ನಾವು ತಲುಪಿಸಿಕೊಡುತ್ತೇವೆ ಎಂದು ಆರೋಪಿಗಳು ತಿಳಿಸಿದ್ದಾರೆ. ಚಿರತೆ ಚರ್ಮಕ್ಕೆ ಐದು ಲಕ್ಷ ರೂಪಾಯಿ, ಹುಲಿ ಚರ್ಮಕ್ಕೆ ಹತ್ತು ಲಕ್ಷ ರೂಪಾಯಿ ಹೀಗೆ ವಿವಿಧ ಬೆಲೆಗಳಿಗೆ ಈ ಚರ್ಮಗಳನ್ನು ಮಾರಲಾಗುತ್ತದೆ. ಸೋಮವಾರ ಚೆನ್ನೈ ಮೈಲ್ ಎಕ್ಸ್‌ಪ್ರೆಸ್‌ನಲ್ಲಿ ವರ್ಕಲಕ್ಕೆ ಬಂದಿಳಿದ ತಂಡವನ್ನು ಅರಣ್ಯ ಇಲಾಖೆಮತ್ತು ಇಂಟಲಿಜೆನ್ಸ್ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವರ್ಕಲ ರಿಸಾರ್ಟ್ ಕೇಂದ್ರೀಕರಿಸಿ ವ್ಯಾಪಕ ರೀತಿಯಲ್ಲಿ ಪ್ರಾಣಿಗಳ ಚರ್ಮಗಳ ವ್ಯಾಪಾರ ನಡೆಯುತ್ತಿದೆ ಎಂದು ಇಂಲಿಜೆನ್ಸಿ ಅಧಿಕಾರಿಗಳು ಹೇಳಿದ್ದಾರೆ. ತಿರುವನಂತಪುರಂ ಡಿಎಫ್‌ಒ ಮತ್ತು ಪಾಲಾಡ್ ರೇಂಜ್ ನೇತೃತ್ವದಲ್ಲಿ ದಾಳಿ ನಡೆದಿದೆ.
ವಯನಾಡ್‌ನ ಕಾಡಿನಲ್ಲಿ ಹಿಡಿದ ಚಿರತೆಯ ಚರ್ಮವಿದೆಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಭಾರೀ ದೊಡ್ಡ ಜಾಲವೇ ಇದರ ಹಿಂದಿದೆ ಎಂದು ಶಂಕಿಸಲಾಗುತ್ತಿದೆ. ತನಿಖೆ ಮುಂದುವರಿಯುತ್ತಿದೆ ಎಂದು ಪಾಲಾಡ್ ರೇಂಜರ್ ಎಸ್.ವಿ. ವಿನೋದ್ ತಿಳಿಸಿದ್ದಾರೆಂದು ವರದಿಯಾಗಿದೆ.