×
Ad

ರಾಜಕೀಯ ತಿರುವು ಪಡೆಯುತ್ತಿರುವ ದಲಿತ ವಿದ್ಯಾರ್ಥಿ ಗೌರವ ಹತ್ಯೆ ಪ್ರಕರಣ

Update: 2016-03-16 12:57 IST

ಚೆನ್ನೈ, ಮಾರ್ಚ್.16: ಉದುಮಲ್ ಪೇಟ್ ಗೌರವ ಹತ್ಯೆಗೆ ಮೊದಲು ವಿವಾಹದಿಂದ ಹಿಂದೆ ಸರಿದರೆ ದಲಿತ ಯುವಕ ಶಂಕರ್‌ನಿಗೆ ಭಾರೀ ಒತ್ತಡ ಹಾಕಲಾಗಿತ್ತೆಂದು ಪತ್ನಿ ಕೌಸಲ್ಯ ಹೇಳಿದ್ದಾರೆ. ಕೌಸಲ್ಯಳನ್ನು ಮರೆಯಲು ತನ್ನ ಮನೆಯವರು ಹತ್ತು ಲಕ್ಷ ರೂಪಾಯಿ ಕೊಡಲು ಮುಂದೆ ಬಂದರೂ ಶಂಕರ್ ಸಿದ್ಧನಾಗಲಿಲ್ಲ.

ಜಾತಿ ಗೌರವದ ಪ್ರಶ್ನೆಯಾಗಿ ಮಾಡಿಕೊಂಡು ಒಂದು ತಿಂಗಳು ಮುಂಚೆ ಕೌಸಲ್ಯರ ತಂದೆ ತಾಯಿ ಮತ್ತು ಸಂಬಂಧಿಕರು ಶಂಕರ್‌ನ ಮನೆಗೆ ಬಂದು ಮಾತಾಡಿದ್ದರು. ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಕೌಸಲ್ಯರನ್ನು ತಮ್ಮೊಂದಿಗೆ ಕಳುಹಿಸುವುದಿದ್ದರೆ ಶಂಕರ್‌ಗೆ ಹತ್ತುಲಕ್ಷ ರೂಪಾಯಿ ನೀಡುವುದಾಗಿ ಕೌಸಲ್ಯರ ಮನೆಯವರು ಹೇಳಿದರು. ಅವರೊಂದಿಗೆ ಹೋಗಲು ಕೌಸಲ್ಯ ಒಪ್ಪದಿದ್ದಾಗ ಇನ್ನು ಏನೇ ಸಂಭವಿಸಿದರೂ ನಾವು ಜವಾಬ್ದಾರರಲ್ಲ ಎಂದು ಬೆದರಿಕೆ ಹಾಕಿ ಮನೆಯವರು ಅಂದು ಹೊರಟು ಹೋಗಿದ್ದರು ಎಂದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೌಸಲ್ಯ ಹೇಳಿದ್ದಾರೆ. ಆರೋಪಿಗಳನ್ನು ಕಂಡರೆ ಪತ್ತೆ ಹಚ್ಚುವುದಾಗಿ ಕೌಸಲ್ಯ ಹೇಳಿದ್ದಾರೆ.

ಹಗಲಲ್ಲೇ ನಡು ರಸ್ತೆಯಲ್ಲಿ ಶಂಕರ್‌ನನ್ನು ಥಳಿಸಿ ಕೊಂದು ಹಾಕಿದ ಪ್ರಕರಣದಲ್ಲಿ ಕೌಸಲ್ಯಳ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಶಂಕರ್ ಮತ್ತು ಕೌಸಲ್ಯ ದಂಪತಿ ರಸ್ತೆಯನ್ನು ದಾಟುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರಿಬ್ಬರನ್ನೂ ಥಳಿಸಿದ್ದರು.ಶಂಕರ್ ಸಾವನ್ನಪ್ಪಿದ್ದರೆ, ಕೌಸಲ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯ ನಂತರ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಉದುಮ ಪೇಟ್ ಬಸ್‌ಸ್ಟಾ್ಯಂಡ್ ಸಮೀಪ ಈ ಘಟನೆ ನಡೆದಿತ್ತು.

ಕೊಲೆಗೀಡಾದ ಶಂಕರ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಪಳನಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಶಂಕರ್ ಮತ್ತು ಕೌಸಲ್ಯ ಪ್ರೇಮಿಸಿ ಎಂಟು ತಿಂಗಳ ಹಿಂದೆ ವಿವಾಹಿತರಾಗಿದ್ದರು. ವಿವಾಹವವನ್ನು ವಿರೋಧಿಸಿರುವ ಮನೆಯವರೆ ಶಂಕರ್‌ನನ್ನು ಕೊಲ್ಲಿಸಿದ್ದಾರೆಂದು ಪೊಲೀಸರು ಸಂದೇಹಿಸಿದ್ದಾರೆ. ಹಲ್ಲೆಗೈಯ್ಯುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿದ್ದು ಸಾಮಾಜಿ ಮಾಧ್ಯಮಗಳಲ್ಲಿ ಅದು ಪ್ರಚಾರವಾದಾಗ ಘನೆ ತಮಿಳ್ನಾಡಿನಲ್ಲಿ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿತ್ತು. ಪ್ರಕರಣದಲ್ಲಿ ಪೊಲೀಸರು ನಿಷ್ಕ್ರಿಯೆ ತೋರಿಸುತ್ತಿದ್ದಾರೆಂದು ಆರೋಪಿಸಿ ಡಿಎಂಕೆ ರಂಗ ಪ್ರವೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News