×
Ad

ಹಾಸ್ಟೆಲ್ ನಲ್ಲಿ ಬೀಫ್‌ ತಿಂದ ಆರೋಪ ರಾಜಸ್ತಾನದಲ್ಲಿ ಕಾಶ್ಮೀರದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ

Update: 2016-03-16 13:23 IST

ಹೊಸದಿಲ್ಲಿ, ಮಾ.16: ಹಾಸ್ಟೆಲ್‌ನಲ್ಲಿ ಬೀಫ್‌ ಅಡುಗೆ ಮಾಡಿದ ಆರೋಪದಲ್ಲಿ ರಾಜಸ್ಥಾನದ ಖಾಸಗಿ ಖಾಸಗಿ ವಿವಿಯ  ನಾಲ್ವರು ಕಾಶ್ಮೀರದ ವಿದ್ಯಾರ್ಥಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿದೆ.
ಚಿತ್ತಾರ್‌ಗರ್‌ ಮೆವಾರ್‌ ವಿವಿಯಲ್ಲಿ  ಸುಮಾರು ಎಂಟುನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.  ಹಾಸ್ಟೆಲ್ ನಲ್ಲಿ ಕೇವಲ ಸಸ್ಯಹಾರಿ ಅಡುಗೆಗೆ ಮಾತ್ರ ಅವಕಾಶ. ಮಾಂಸಹಾರಕ್ಕೆ ಅವಕಾಶ ಇಲ್ಲ. ಈ ಕಾರಣದಿಂದಾಗಿ ಇಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ ಕೋಣೆಯಲ್ಲಿ ಯಾರಿಗೂ ಗೊತ್ತಾಗದಂತೆ ಬೀಫ್ ಅಡುಗೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆದರೆ ವಿವಿ ಮೂಲಗಳು ಇದನ್ನು ನಿರಾಕರಿಸಿದೆ.
ಹಾಸ್ಟೆಲ್‌ನಲ್ಲಿ ಬೀಫ್‌ ಅಡುಗೆ ತಯಾರಿಸಿರುವ ಬಗ್ಗೆ ಯಾರೂ ಸಂಘ ಪರಿವಾರದ ಸಂಘಟನೆಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಸಂಘ ಪರಿವಾರದ ಸಂಘಟನೆಗೆ ಸೇರಿದ ಗುಂಪು ವಿವಿಯ ಆವರಣದಲ್ಲಿ ದಾಂದಲೆ ನಡೆಸಿ, ಸಂಸ್ಥೆಯ ವಿರುದ್ಧ ಘೋಷಣೆ ಕೂಗಿತು ಎನ್ನಲಾಗಿದೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News