×
Ad

Redmi Note 3 :ಕೈಗೆಟಕುವ ದರದಲ್ಲಿ ಅತ್ಯುತ್ತಮ ಫ್ಯಾಬ್ಲೆಟ್ ಇದು

Update: 2016-03-16 15:43 IST

2014ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಅಡಿಯಿಟ್ಟ ಮೇಲೆ ಕ್ಸಿಯೋಮಿ ಮೊಬೈಲ್ ಮಾರಾಟ ಸಂಸ್ಥೆ ಹಿಂತಿರುಗಿ ನೋಡಿದ್ದೇ ಇಲ್ಲ. ಗಟ್ಟಿಮುಟ್ಟಾದ ಹಾರ್ಡ್‌ವೇರ್ ಮತ್ತು ಅತೀ ಅಗ್ಗದ ಬೆಲೆಗೆ ಸಿಗುವ ಸ್ಮಾರ್ಟ್ ಫೋನ್‌ಗಳನ್ನು ತಯಾರಿಸುವ ಈ ಚೀನೀ ಕಂಪನಿ ಭಾರತೀಯ ಗ್ರಾಹಕರ ಜೊತೆಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದೆ. ಹ್ಯೂಗೋ ಬರಾ ನೇತೃತ್ವದ ಕ್ಸಿಯೋಮಿ ಸ್ಮಾರ್ಟ್‌ಫೋನ್ ಬೆಲೆ ಸಮೀಕರಣವನ್ನೇ ಬದಲಿಸಿದೆ.

ಗ್ರಾಹಕರು ಬೇಡವೆಂದು ತಳ್ಳಲು ಸಾಧ್ಯವಾಗದ ಬೆಲೆಯಲ್ಲಿ ಮೊಬೈಲ್ ಕೊಡುವುದು ಅವರ ತಂತ್ರ. ಅತೀ ಕಾಯುವಿಕೆಯ ನಂತರ ಬಂದಿರುವ ಹೊಸ ರೆಡಿಮಿ ನೋಟ್ 3 ನಿಮ್ಮ ಪಾಕೆಟಿಗೆ ಹೆಚ್ಚು ಭಾರವಾಗದೆಯೇ ಉತ್ತಮ ಲಕ್ಷಣಗಳಲ್ಲಿ ಬಂದಿದೆ. ಬೆಲೆ ಹೊರತುಪಡಿಸಿ ಇನ್ನೆಲ್ಲ ವಿಧದಲ್ಲೂ ಉತ್ತಮ ವಿನ್ಯಾಸ ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೊದಲ ಮಾರಾಟದಲ್ಲಿ ಪೂರ್ಣವಾಗಿ ಖರೀದಿಯಾಗಿದೆ. ಎರಡನೇ ಮಾರಾಟ ಅಮೆಜಾನ್ ಇಂಡಿಯಾ ವೆಬ್ ತಾಣದಲ್ಲಿ 2 ಗಂಟೆಗೆ ನಡೆಯಲಿದೆ. 2ಜಿಬಿ ರಾಮ್ ಇರುವ ಸ್ಮಾರ್ಟ್‌ಫೋನ್ ರು. 9999 ಬೆಲೆ ಹೊಂದಿದೆ. ಅದರ 3ಜಿಬಿ ರಾಮ್ ಪ್ರತಿಸ್ಪರ್ಧಿ ರೂ. 11,999ಕ್ಕೆ ಸಿಗುತ್ತದೆ.

ರೆಡಿಮಿ ನೋಟ್ 3ಯ ವಿನ್ಯಾಸ ಅತ್ಯುತ್ತಮವಾಗಿದೆ. 5.5 ಇಂಚ್ ಡಿಸ್ಪಲೇ ಇದೆ. 4,050 ಎಂಎಎಚ್ ಬ್ಯಾಟರಿ ಇದೆ. ಸಿಂಗಲ್ ಟಚ್ ಮೂಲಕ ಫಾಬ್ಲೆಟ್ ಅನ್ಲಾಕ್ ಮಾಡಬಹುದು. 0.3 ಸೆಕೆಂಡುಗಳಲ್ಲಿ ಫಿಂಗರ್ ಪ್ರಿಂಟನ್ನು ಗುರುತಿಸಬಲ್ಲದು. ಗಾತ್ರ ಮತ್ತು ಸ್ಟಾಂಡ್‌ಬೈ/ಪವರ್ ಕೀ ಫೋನಿನ ಸರಿಯಾದ ತುದಿಯಲ್ಲಿದೆ. ಹೀಗಾಗಿ ಪಡೆದುಕೊಳ್ಳುವುದು ಸರಳವಾಗಿದೆ. ಕಟೌಟ್‌ಗಳನ್ನು ಕರಾರುವಕ್ಕಾಗಿ ಮಾಡಲಾಗಿದೆ. ಫೋನಿನ ಹಿಂಬದಿ ಮೃದುವಾದ ಫಿನಿಶಿಂಗ್ ಹೊಂದಿದೆ. 3.5 ಎಂಎಂ ಜಾಕ್ ಮತ್ತು ಐಆರ್ ಬ್ಲಾಸ್ಟರ್ ಇದೆ.

ಇತ್ತೀಚೆಗಿನ ಸ್ನಾಪ್ಡ್ರಾಗನ್ 650 ಪ್ರೊಸೆಸರ್ ಹೊಂದಿದೆ. ಅದರ ಜೊತೆಗೆ 3ಜಿಬಿ ರಾಮ್ ಮೈಲಿಗಲ್ಲು. 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್ಪಲೇ ಉತ್ತಮ ಕೋನಗಳ ದೃಶ್ಯ ಕೊಡುತ್ತದೆ. ರೆಡಿಮಿಯ ಬ್ಯಾಟರಿ ಕೂಡ ಉತ್ತಮವಾಗಿದೆ. ಪೂರ್ಣ ಬಳಸುವವರಿಗೂ ಎರಡು ದಿನ ಬರಲಿದೆ. ಪವರ್ ಬಳಸುವವರಿಗೂ 14 ಗಂಟೆಗಳ ಕಾಲ ಪೂರ್ಣವಾಗಿ ಮುಗಿಯದೆ ಬಾಳಿಕೆ ಬರಲಿದೆ.

ಕ್ಯಾಮರಾ ವಿಷಯದಲ್ಲಿ ರೆಡಿಮಿ ನೋಟ್ 3 ಹೆಚ್ಚೇನು ಉತ್ತಮವಾಗಿಲ್ಲ. ಹಿಂದಿನ ಎಂಐ 4ಐಗೆ ಹೋಲಿಸಿದರೆ ಚಿತ್ರಗಳು ಚೆನ್ನಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News