×
Ad

ಹವಾಮಾನ ಬದಲಾವಣೆ: ಎಚ್ಚರಿಕೆ ಘಂಟೆ ಕೇಳಿಸಿಕೊಳ್ಳುವವರಾರು?

Update: 2016-03-16 23:39 IST

ತ್ತೊಂದು ದಾಖಲೆ ಮಣ್ಣುಮುಕ್ಕಿದೆ. 2014 ಮನು ಕುಲದ ಇತಿಹಾಸದಲ್ಲೇ ಅತ್ಯಂತ ಉಷ್ಣವರ್ಷ ಎಂದು ದಾಖಲಾಗಿತ್ತು. ಅದಾದ ಬಳಿಕ 2015 ಮತ್ತೂ ಬಿಸಿಹೆಚ್ಚಿಸಿತು. 2016ರ ಜನವರಿ ಈ ಹಿಂದಿನ ಎಲ್ಲ ದಾಖಲೆ ಗಳನ್ನೂ ಮುರಿದು ಅತ್ಯಂತ ಶಾಖ ದಾಖಲಾದ ತಿಂಗಳು ಎಂಬ ಹೊಸ ದಾಖಲೆ ಸ್ಥಾಪಿಸಿತು. ಅದಾದ ಬಳಿಕ ಫೆಬ್ರವರಿ ಸರದಿ.

ಫೆಬ್ರವರಿ ಹವಾಮಾನ ಬದಲಾವಣೆ ದಾಖಲೆಯನ್ನು ಮುರಿದಿಲ್ಲ. ಅಳಿಸಿ ಹಾಕಿದೆ. ಆರ್ಕ್ಟಿಕ್ ಪ್ರದೇಶದಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ 16 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖ ಲಾಗಿದೆ. ಆದರೆ ಹವಾಮಾನ ಮಾಮೂಲಿ ಸ್ಥಿತಿಗೆ ಬಂದಿದೆ. ಆದರೆ ಜನರ ಆತಂಕಕ್ಕೆ ಕಾರಣವಾಗಿರುವ ಅಂಶವೆಂದರೆ, ಭೂಮಿಯ ಸಮಭಾಜಕ ವೃತ್ತದ ಉತ್ತರ ಭಾಗದ ಮೇಲ್ಮೆ ಉಷ್ಣಾಂಶ, ಕೈಗಾರಿಕೀಕರಣಕ್ಕಿಂತ ಪೂರ್ವದ ಉಷ್ಣಾಂಶಕ್ಕೆ ಹೋಲಿಸಿದರೆ, 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿರುವುದು. ಈ ಮಟ್ಟವನ್ನು ಯಾವುದೇ ಕಾರಣಕ್ಕೂ ಮೀರಬಾರದು ಎನ್ನುವುದು ಗಮನಿಸಬೇಕಾದ ಅಂಶ.

ಎರಡು ಡಿಗ್ರಿ ಉಷ್ಣಾಂಶ ಹೆಚ್ಚಳ ಎಂದರೆ ವಿಸತ್ತೃತವಾಗಿ ಅದು ಮತ್ತಷ್ಟು ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದು ಮುಖ್ಯವಾಗಿ, ಚಲನಶೀಲ ಉಷ್ಣತೆ. ಇದು ನಮ್ಮ ಹವಾಮಾನದ ಮೇಲಿನ ಪರಿಣಾಮಕ್ಕೆ ಬಿದ್ದ ವೇಗದ ಮಿತಿ ಎಂದು ನೀವು ಭಾವಿಸಬಹುದು. ಆದರೆ ಅದು ನಿಗದಿತ ಗುರಿಯ ವೇಗವಲ್ಲ. ಉದಾಹರಣೆಗೆ ನೀವು ತೀರಾ ಭಾರದ ವಸ್ತುವನ್ನು ಸಾಗಿಸುತ್ತಿರುವ ಕಾರನ್ನು ತೀರಾ ಕಡಿದಾದ ಇಳಿಜಾರಿನಲ್ಲಿ ಇಳಿಸುವಾಗ, ಟಾಪ್ ಗೇರ್‌ನಿಂದ ಕೆಳಗಿಳಿಸಿ ವೇಗವನ್ನು ಕಡಿಮೆ ಮಾಡಲು ಸಲಹೆ ಮಾಡಲಾಗುತ್ತದೆ. ನೀವು ತೀರಾ ವೇಗವಾಗಿ ಚಲಾಯಿಸುತ್ತಿದ್ದರೆ, ಬ್ರೇಕ್ ವಿಲವಾಗಿ, ಅದನ್ನು ನಿಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅಂದರೆ ಕಡಿಮೆ ಬ್ರೇಕ್ ಹಾಕುವುದು ಎಂದರೆ ಹೆಚ್ಚು ವೇಗ ಎಂಬ ಅರ್ಥ. ಇದು ಅತ್ಯಂತ ಅಪಾಯಕಾರಿ ರನ್‌ವೇ ಫೀಡ್‌ಬ್ಯಾಕ್ ಕುಣಿಕೆ. ಆ ಬೆಟ್ಟ ಸಮತಟ್ಟಾದಷ್ಟೂ, ಮುಂದೆ ವೇಗ ಹೆಚ್ಚಿಸಿಕೊಳ್ಳಲು ಅವಕಾಶವಾಗುತ್ತದೆ. ಅದು ಸಾಧ್ಯವಾಗದಿದ್ದರೆ, ನೀವು ಹಠಾತ್ತನೆ ನಿಲ್ಲಬೇಕಾಗುತ್ತದೆ.

ನಾವೀಗ ಪ್ರಸ್ತುತ ಭೂಮಿ ಹಸಿರುಮನೆ ಅನಿಲವನ್ನು ಹೀರಿಕೊಳ್ಳಲಾಗದಷ್ಟು ಪ್ರಮಾಣದಲ್ಲಿ ಭೂಮಿಯನ್ನು ಜೌಗು ಪ್ರದೇಶವಾಗಿಸಿದ್ದೇವೆ. ದಾಖಲಾತಿ ಆರಂಭವಾದಾಗಿನಿಂದ ಇಷ್ಟು ವರ್ಷಗಳಿಗಿಂತ ಅಕ ಪ್ರಮಾಣದಲ್ಲಿ 2015ರಲ್ಲಿ ವಾರ್ಷಿಕ ಕಾರ್ಬನ್ ಡೈ ಆಕ್ಸೆಡ್ ವಾತಾವರಣಕ್ಕೆ ಬಿಡುಗಡೆ ಯಾಗಿದೆ. ಇದು ಭೂಮಿಯ ನೂರಾರು, ಸಾವಿರಾರು ವರ್ಷಗಳ ಅನುಭವದಲ್ಲೇ ಅತ್ಯಕ ಪ್ರಮಾಣದ್ದಾಗಿದೆ.

ವಾತಾವರಣದಲ್ಲಿ ಇಂಗಾಲದ ಡೈಆಕ್ಸೆಡ್ ಅಕವಾ ಗಿದ್ದಷ್ಟೂ ಉಷ್ಣಾಂಶ ಹೆಚ್ಚು ಎಂಬ ಅರ್ಥ. ಪ್ರಸ್ತುತ ಈಗಾಗಲೇ ಒಂದು ಧನಾತ್ಮಕ ಹವಾಮಾನ ಬದಲಾವಣೆ ಪರಿಣಾಮದ ಕುಣಿಕೆ ಕಾರ್ಯಾಚರಣೆಯಲ್ಲಿದೆ. ನಮ್ಮ ಅಕ ಹೊಗೆಯುಗು ಳುವಿಕೆಯ ಪರಿಣಾಮವಾಗಿ ವಾತಾವರಣದಲ್ಲಿ ನೀರು ಆವಿಯಾಗುವ ಪ್ರಮಾಣ ಹೆಚ್ಚುತ್ತದೆ. ಇದು ಮತ್ತಷ್ಟು ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದೃಷ್ಟವಶಾತ್ ಇದು ಅಂಥ ಪ್ರಬಲ ಪರಿಣಾಮದ ಕುಣಿಕೆ ಅಲ್ಲ.

ದುರದೃಷ್ಣವಶಾತ್ ಅಂಥ ಇನ್ನೊಂದು ಹವಾಮಾನ ಬದಲಾವಣೆ ಕುಣಿಕೆ ಸಾಧ್ಯತೆ ಇದೆ. ಇದು ಮತ್ತಷ್ಟು ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಲಿದೆ. ಮಂಜಿನ ಲೇಪ (ಪರ್ಮಾ್ರೆಸ್ಟ್ ) ಸೂಚನೆ ಹಾಗೂ ಹಸಿರುಮನೆ ಅನಿಲವಾದ ಮಿಥೇನ್ ಅಕ ಪ್ರಮಾಣದಲ್ಲಿ ಬಿಡುಗಡೆಯಾ ಗುತ್ತಿರುವುದು ಈ ಸಾಧ್ಯತೆಯನ್ನು ನಿಚ್ಚಳವಾಗಿಸಿದ್ದು, ಎರಡು ಡಿಗ್ರಿ ಸೆಲ್ಸಿಯಸ್ ಪ್ರಮಾಣಕ್ಕಿಂತ ಅಕ ಉಷ್ಣಾಂಶ ಹೆಚ್ಚುವ ಅಪಾಯ ಎದುರಾಗಿದೆ.

ನಾವು ನಮ್ಮ ವಿವೇಚನೆಯನ್ನು ಕ್ರೋಡೀಕರಿಸಿಕೊಂಡು, ಆ ಹಂತದಲ್ಲಿ ಇಂಗಾಲದ ಉಗುಳುವಿಕೆಯನ್ನು ಕ್ಷಿಪ್ರವಾಗಿ ಕಡಿಮೆ ಮಾಡಿದರೂ ಕೂಡಾ, ನಾವು ಮತ್ತಷ್ಟು ತೀವ್ರ ಉಷ್ಣಾಂಶ ಹೆಚ್ಚುವ ಭೌಗೋಳಿಕ ವ್ಯವಸ್ಥೆಗೆ ಸಿದ್ಧತೆ ಮಾಡಿ ಕೊಳ್ಳಬೇಕಾಗುತ್ತದೆ. ಏಕೆಂದರೆ ಅಂಥ ಹವಾಮಾನ ಬದಲಾ ವಣೆ ತಡೆ ಅಂಶಗಳು ಪರಿಣಾಮಕಾರಿಯಾಗುತ್ತವೆ ಎಂಬ ಯಾವ ಖಾತ್ರಿಯೂ ಇಲ್ಲ. ಅದು ವಿಲವಾದರೆ, ನಮ್ಮ ನಾಗರಿಕತೆ ಕಾದ ನೆಲದ ಕಾರಣದಿಂದ ಸಂಘರ್ಷದ ಸ್ಥಿತಿ ಎದುರಿಸಬೇಕಾಗುತ್ತದೆ.

ಸುರಕ್ಷಿತ- ಅಸುರಕ್ಷಿತ ಅಪಾಯದ ಮಟ್ಟವಾದ 2 ಡಿಗ್ರಿ ಸೆಲ್ಸಿಯಸ್ ಪ್ರಮಾಣ ಕೂಡಾ, ಅಪಾಯಕಾರಿ ಉಷ್ಣಾಂಶ ಹೆಚ್ಚಳ ವಾಸ್ತವವಾಗಿ ಆರಂಭವಾಗಿರುವುದರಿಂದ ಅನಿಶ್ಚಿತ ಅಂಶಗಳಿಂದಲೇ ಕೂಡಿದೆ. ಅದು 2 ಡಿಗ್ರಿ ಸೆಲ್ಸಿಯಸ್ ಮಟ್ಟ ವನ್ನೂ ಮೀರಬಹುದು. ಬಹುಶಃ ಅದು ಖಚಿತವಾಗಿದ್ದು, ಕಡಿಮೆಯಾಗುವ ಸಾಧ್ಯತೆಯಂತೂ ಇಲ್ಲ. ಆದರೆ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ಸಮಭಾಜಕ ವೃತ್ತದ ಉತ್ತರ ಭಾಗದ ಉಷ್ಣಾಂಶವಷ್ಟೇ 2 ಡಿಗ್ರಿ ಗೆರೆಯನ್ನು ತಲುಪಿದೆ. ಜತೆಗೆ ಜಾಗತಿಕವಾಗಿ ಎಲ್‌ನಿನೊ ಪ್ರಭಾವ ಇರುವುದು ಕೂಡಾ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. 2015ರಲ್ಲಿ ಉಷ್ಣಾಂಶ ಅಕವಾಗುತ್ತದೆ ಎಂದು 2014ರಲ್ಲೇ ನಾನು ಅಂದಾಜಿಸಿದ್ದೆ. ಅದು ಸಿನಿಕತನದ ಕಾರಣದಿಂದ ಅಲ್ಲ; ಎಲ್‌ನಿನೊ ಸಂಕೇತ ಗಳು ಅಷ್ಟು ಸ್ಪಷ್ಟವಾಗಿ ಗೋಚರಿಸಿದ ಕಾರಣದಿಂದ.

2016ರಲ್ಲೂ ಉಷ್ಣಾಂಶದ ಹೊಸ ದಾಖಲೆಗಳು ನಿರ್ಮಾಣವಾಗಲಿದ್ದು, ವರ್ಷಾಂತ್ಯಕ್ಕೆ ಈ ಪ್ರಮಾಣ ಸ್ವಲ್ಪ ನಿಯಂತ್ರಣಕ್ಕೆ ಬಂದು ವಾಸ್ತವವಾಗಿ ಉಷ್ಣಾಂಶ ಕಡಿಮೆಯಾಗ ಬಹುದು. ಖಂಡಿತವಾಗಿಯೂ? ಹಠಾತ್ತನೆ ಅಥವಾ ಸುಸ್ಥಿರ ಹವಾಮಾನ ಬದಲಾವಣೆ ಪ್ರಕ್ರಿಯೆ ಆರಂಭವಾಗದಿದ್ದರೆ ಬಹುಶಃ ಇದನ್ನು ನಿರೀಕ್ಷಿಸಬಹುದು. ಅದಕ್ಕಿಂತಲೂ ಆತಂಕ ಕಾರಿ ಅಂಶವೆಂದರೆ, ಹವಾಮಾನ ಬದಲಾವಣೆಯ ಇಂಥ ಮಹತ್ವದ ಘಟ್ಟಗಳಿಗೆ ಸಿಕ್ಕಿರುವ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಪ್ರತಿಕ್ರಿಯೆ.

ಇತ್ತೀಚಿನ ಹವಾಮಾನ ಬದಲಾವಣೆ ಅಥವಾ ಉಷ್ಣಾಂಶ ಹೆಚ್ಚಳದ ದಾಖಲೆಗಳ ಬಗ್ಗೆ ಯಾವುದಾದರೂ ರಾಜಕೀಯ ಭಾಷಣದಲ್ಲಿ ಉಲ್ಲೇಖವಾದುದು ನಿಮ್ಮ ಗಮನಕ್ಕೆ ಬಂದಿದೆಯೇ? ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಒಬ್ಬರು ಕೂಡಾ ಮಾನವ ಉತ್ಪಾದಿತ ಹವಾಮಾನ ಬದಲಾವಣೆಯ ಪರಿಕಲ್ಪನೆಯಲ್ಲಿ ನಂಬಿಕೆ ಹೊಂದಿಲ್ಲ. ಅಂಥ ಮನೋಭಾವವೇ ಹೆಚ್ಚಿನ ಆತಂಕಕ್ಕೆ ಕಾರಣವಾಗಿರುವುದು.

ಷೇರು ಪೇಟೆ ಇಂದು ಬೆಳಗ್ಗೆ ಹೇಗಿತ್ತು? ಜ್ವರಲಕ್ಷಣದಿಂದ ತತ್ತರವಾದುದು ಷೇರುಪೇಟೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೇಂದ್ರೀಯ ಬ್ಯಾಂಕ್‌ಗಳ ಸಪ್ಪೆ ಹೇಳಿಕೆಗಳ ಕಾರಣದಿಂದ ಭ್ರಮಾಧೀನ ಬೂಮ್‌ನಿಂದ ಹಿಡಿದು ಆಘಾತಕಾರಿ ಕುಸಿತದವರೆಗೂ ವಿಚಿತ್ರ ಲಕ್ಷಣಗಳು ಗೋಚರಿಸಿದವು. ಆದರೆ ಎಲ್ಲವೂ ಕೈಗಾರಿಕಾ ಹಾಗೂ ಆರ್ಥಿಕ ವ್ಯವಸ್ಥೆಯು ವಿಕೋಪದತ್ತ ಹೋಗುತ್ತಿರುವ ಬಗ್ಗೆ ಕಿವುಡಾಗಿದ್ದುದು ಸ್ಪಷ್ಟವಾಗಿ ಕಂಡುಬಂತು,

ಈ ವರ್ಷ ಹವಾಮಾನ ಬದಲಾವಣೆಯ ಹಲವು ದಾಖಲೆಗಳು ಮತ್ತೆ ಮುರಿಯುವುದು ಖಚಿತ. ಆದರೆ ನಾವು ಅದನ್ನು ಹೊಸ ಫ್ಯಾಶನ್, ಫೋನ್ ಅಥವಾ ಸಿನೆಮಾದಂತೆ ಪರಿಗಣಿಸುತ್ತೇವೆ. ಹೆಚ್ಚು ವಿನೂತನವಾಗಿ, ಹೊಸ ಫೀಚರ್, ಹೊಸ ನಾಟಕವಾಗಿ ಪರಿಗಣಿಸುತ್ತೇವೆ. ಅಂಥ ಬದಲಾವಣೆಗೆ ನಾವೇ ಕಾರಣವಾಗುತ್ತಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನಾವು ವಿಲರಾಗುತ್ತಿದ್ದೇವೆ.

ಉಷ್ಣಾಂಶದ ದಾಖಲೆಗಳು ಮುರಿಯುವುದು ಎಂದರೆ ನಮ್ಮ ನಾಗರಿಕತೆ ಕೂಡಾ ವಿಘಟನೆ ಮಾಡುತ್ತದೆ. ಅದು ಎಷ್ಟರ ಮಟ್ಟಿಗೆ ಛಿದ್ರಗೊಳಿಸುತ್ತದೆ ಎಂದರೆ, ನಾವು ಎಲ್ಲರೂ ಆ ಬಗ್ಗೆ ಕಾಳಜಿ ಮಾಡುವಷ್ಟರ ಮಟ್ಟಿಗೆ; ಅದರಲ್ಲೇ ಮುಳುಗಿ ಹೋಗುವಷ್ಟರಮಟ್ಟಿಗೆ.

(ಜೇಮ್ಸ್ ಡೈಕ್ ಅವರು ಸೌತಂಪ್ಟಾನ್ ವಿವಿಯ ಸಂಕೀರ್ಣ ಸಿಮ್ಯುಲೇಶನ್ ವ್ಯವಸ್ಥೆಯ ಪ್ರಾಧ್ಯಾಪಕ)

(ಕೃಪೆ: ದ ಕನ್ವರ್ಸೇಷನ್)

Writer - ಜೇಮ್ಸ್ ಡೈಕ್

contributor

Editor - ಜೇಮ್ಸ್ ಡೈಕ್

contributor

Similar News