ದಕ್ಷಿಣ ಆಫ್ರಿಕ ತಂಡಕ್ಕೆ ಅಫಘಾನಿಸ್ತಾನ ವಿರುದ್ಧ 37 ರನ್‌ಗಳ ಜಯ
Update: 2016-03-20 17:03 IST
ಮುಂಬೈ, ಮಾ.20: ಅಫ್ಘಾನಿಸ್ತಾನ ವಿರುದ್ಧ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ 37 ರನ್‌ಗಳ ಜಯ ಗಳಿಸಿದೆ.
ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಗೆಲುವಿಗೆ 210 ರನ್ ಮಾಡಬೇಕಿದ್ದ ಅಫ್ಘಾನಿಸ್ತಾನ ತಂಡ172ರನ್‌ಗಳಿಗೆ ಆಲೌಟಾಯಿತು.
ಟ್ವೆಂಟಿ -20 ವಿಶ್ವಕಪ್‌ನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಟ ದಕ್ಷಿಣ ಆಫ್ರಿಕ ವಿರುದ್ಧ ಗೆಲುವಿಗೆ 210 ರನ್‌ಗಳ ಸವಾಲು ಪಡೆದಿತ್ತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸಿತು.
ಎಬಿಡಿವಿಯರ್ಸ್ 34 ನಿಮಿಷಗಳ ಬ್ಯಾಟಿಂಗ್‌ನಲ್ಲಿ 29 ಎಸೆತಗಳನ್ನು ಎದುರಿಸಿದರು. 4 ಬೌಂಡರಿ ಮತ್ತು ಐದು ಸಿಕ್ಸರ್ ಸಹಾಯದಿಂದ 64 ರನ್ ಗಳಿಸಿದರು. ಆರಂಭಿಕ ದಾಂಡಿಗ ಕ್ಲಿಂಟನ್ ಡಿ ಕಾಕ್ 45 ರನ್, ನಾಯಕ ಎಫ್ ಡು ಪ್ಲೆಸಿಸ್ 41ರನ್, ಜೆಪಿ ಡುಮಿನಿ ಔಟಾಗದೆ 29ರನ್, ಡೇವಿಡ್ ಮಿಲ್ಲರ್ ಔಟಾಗದೆ 19 ರನ್ ಗಳಿಸಿದರು.