×
Ad

ಕೇಜ್ರಿವಾಲ್‌ರನ್ನು ಫಾಲೋ ಮಾಡಿದ ಮೋದಿ!: ಕೃತಜ್ಞತೆ ಸಲ್ಲಿಸಿದ ಕೇಜ್ರಿ

Update: 2016-03-25 12:10 IST

ಹೊಸದಿಲ್ಲಿ, ಮಾರ್ಚ್25: ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ದಿಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಫಾಲೋ(ಅನುಸರಿಸಲು) ಪ್ರಾರಂಭಿಸಿದ್ದಾರೆಂದು ವರದಿಗಳು ತಿಳಿಸಿವೆ. ಪ್ರಧಾನಿಗೆ ಇದಕ್ಕಾಗಿ ಕೃತಜ್ಞತೆಗಳನ್ನು ಕೇಜ್ರಿವಾಲ್ ಸಲ್ಲಿಸಿದ್ದಾರೆ.

ಈ ನಡುವೆ ಕೇಜ್ರಿವಾಲ್ ಸರಕಾರ ಮತ್ತು ಕೇಂದ್ರ ಸರಕಾರಗಳೊಳಗೆ ಅತ್ಯುತ್ತಮ ಬಾಂಧವ್ಯವನ್ನು ನಿರೀಕ್ಷಿಸಲಾಗುತ್ತಿದೆ. ಗುರುವಾರ ಮೊದಲು ಕೇಜ್ರಿವಾಲ್ ಆನಂತರ ಉಪಮುಖ್ಯಮಂತ್ರಿ ಟ್ವಿಟರ್ ಮೂಲಕ ಪ್ರಧಾನಿಗೆ ಹೋಳಿ ಶುಭಾಕಾಂಕ್ಷೆಗಳನ್ನು ಕೋರಿದ್ದರು.

ಆನಂತರ ಮೋದಿಕೂಡ ಈ ವಿಧಾನವನ್ನು ಅನುಸರಿಸಿದ್ದಾರೆ. ಆದ್ದರಿಂದ ಕೇಜ್ರಿವಾಲ್ ಟ್ವೀಟ್ ಮಾಡಿ ನನ್ನನ್ನು ಫಾಲೋ ಮಾಡಿದ್ದಕ್ಕಾಗಿ ನರೇಂದ್ರ ಮೋದಿಜಿ ನಿಮಗೆ ಧನ್ಯವಾದ ಮತ್ತು ಹೋಳಿ ಶುಭಾಕಾಂಕ್ಷೆಗಳು. ಇಂದು ಕುಂದುಕೊರತೆಗಳನ್ನು ಮರೆಯುವ ದಿನವಾಗಿದೆ. ಕೇಂದ್ರ ಮತ್ತು ದಿಲ್ಲಿಸರಕಾರದ ನಡುವೆ ಭವಿಷ್ಯದಲ್ಲಿ ಉತ್ತಮ ಸಮನ್ವಯ ಸಾಧ್ಯವಾಗಲಿಯೆಂದು ನಿರೀಕ್ಷಿಸುತ್ತೇನೆಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News