×
Ad

ಜಾನುವಾರು ಕಳವು ಆರೋಪ: ಗ್ರಾಮಸ್ಥರಿಂದ ಮೂವರ ಕಗ್ಗೊಲೆ

Update: 2016-03-27 21:40 IST

ಜಮ್ಶೇದ್‌ಪುರ್, ಮಾ. 27: ಜಾನುವಾರು ಕಳವು ಆರೋಪದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗ್ರಾಮಸ್ಥರು ಬರ್ಬರವಾಗಿ ಥಳಿಸಿ ಕೊಂದು ಹಾಕಿದ ಘಟನೆ, ಶನಿವಾರ ಜಾರ್ಖಂಡ್‌ನ, ಸಿಂಘ್‌ಭುಮ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸುಕ್ರಾ ಕೋಡಾ(30), ಆತನ ಸಂಬಂಧಿ ಸನಾತನ್ ಲಾಗುರಿ(32) ಮತ್ತು ಸುರ್ಜಾ ಲಾಗುರಿ(25) ಎಂದು ಗುರುತಿಸಲಾಗಿದೆ. ಗುರುವಾರ ಘಟನೆ ನಡೆದಿದ್ದು ಮೂವರನ್ನು ಬರ್ಬರವಾಗಿ ಥಳಿಸಿ ಕೊಂದು ಬಳಿಕ ಮೃತದೇಹಗಳನ್ನು ಸ್ಥಳೀಯ ನಕ್ಸಲ್ ಪೀಡಿತ ಪ್ರದೇಶದ ಕಾಡಿನಲ್ಲಿ ಎಸೆದಿದ್ದಾರೆ ಎಂದು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮೃತದೇಹ ಈವರೆಗೂ ಪತ್ತೆಯಾಗಿಲ್ಲ. ಪೊಲೀಸರು ಕಾಡಿನಲ್ಲಿ ಮೃತದೇಹಗಳಿಗಾಗಿ ಹುಡುಕಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News