ಸಮಾಜಕ್ಕೆ ಗೊತ್ತಿಲ್ಲದ ಸಂಗತಿಗಳನ್ನು ಪುಸ್ತಕದಲ್ಲಿ ಉಲ್ಲೇಖಿಸುವುದು ಕಷ್ಟಕರ: ಪ್ರೊ.ಜಿ. ವೆಂಕಟಸುಬ್ಬಯ್ಯ

Update: 2016-03-27 18:02 GMT

ಬೆಂಗಳೂರು, ಮಾ. 27: ಸಾಧಕರ ಬಗ್ಗೆ ಪುಸ್ತಕ ಬರೆಯುವುದು ಸುಲಭದ ಕೆಲಸವಾಗಿದ್ದರೂ, ಬಾಲ್ಯಜೀವನ ಮತ್ತು ಸಮಾಜಕ್ಕೆ ಗೊತ್ತಿಲ್ಲದ ಸಂಗತಿಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಿ ಬರೆಯುವುದು ಕಷ್ಟಕರ ಎಂದು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ವಿಕಾಸ ಪ್ರಕಾಶನ ಏರ್ಪಡಿಸಿದ್ದ ಲೇಖಕ ಡಾ.ಎನ್.ಜಗದೀಶ್ ಕೊಪ್ಪ ಅವರ ‘ಭುವನದ ಭಾಗ್ಯ ಎಂ.ಎಸ್.ಸುಬ್ಬಲಕ್ಷ್ಮೀ’ ಹಾಗೂ ‘ಗಟ್ಟಿ ದನಿಯ ದಿಟ್ಟ ಕಲಾವಿದೆ ಬೆಂಗಳೂರು ನಾಗರತ್ನಮ್ಮ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯರ, ಕೀರ್ತಿ ಸಂಪಾದನೆ ಮಾಡಿದವರ ಬಗ್ಗೆ ಬರೆಯುವುದು ಬಹಳ ಸುಲಭವಾಗಿದೆ. ಏಕೆಂದರೆ, ಸಾಧಕರ ಬಗ್ಗೆ ಎಲ್ಲೆಡೆ ವಿಚಾರ ಲಭ್ಯವಾಗುತ್ತದೆ. ಆದರೆ, ಅದೇ ಸಾಧಕರ ಬಾಲ್ಯದ ಬಗೆಗಿನ ವಿಚಾರ, ವಿದ್ಯಾಭ್ಯಾಸ ಜೀವನ ಮತ್ತು ಸಾಧನೆಗೆ ಬೆಂಬಲ ನೀಡಿದವರ ಬಗ್ಗೆ ಬರೆಯಲು ಕಷ್ಟವಾಗುತ್ತದೆ ಎಂದು ಪ್ರೊ.ಜಿ.ವಿ. ಹೇಳಿದರು.
ಲೇಖಕರು ಓದುಗರ ವಿಶ್ವಾಸ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೊಸ ವಿಚಾರವುಳ್ಳ ವಿಷಯಗಳ ಬಗ್ಗೆ ಪುಸ್ತಕ ರಚಿಸಲು ಮುಂದಾಗಬೇಕು ಎಂದ ಅವರು, ಲೇಖಕ ಡಾ.ಎನ್.ಜಗದೀಶ್ ಕೊಪ್ಪ ಅವರ ಪುಸ್ತಕಗಳಲ್ಲಿ ನೈತಿಕತೆಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಂ.ಎಸ್. ಸುಬ್ಬುಲಕ್ಷ್ಮೀ ಅವರು ವಿಶ್ವ ಸಂಗೀತ ವೇದಿಕೆಯಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಅದೇ ರೀತಿ, ಬೆಂಗಳೂರು ನಾಗರತ್ನಮ್ಮ ಅವರು ದೇವಸ್ಥಾನ ನಿರ್ಮಿಸಿ ಸಂಗೀತ ಶಿಕ್ಷಣವನ್ನು ಪ್ರಾರಂಭಿಸಿದವರು. ಇಂತಹ ಸಾಧಕರ ಬಗ್ಗೆ ಯುವಕರು ತಿಳಿದುಕೊಳ್ಳಲು ಮುಂದಾಗಬೇಕೆಂದು ಸಲಹೆ ಮಾಡಿದರು.
   ಹಿರಿಯ ಗಾಯಕಿ ಡಾ.ಟಿ.ಎಸ್.ಸತ್ಯವತಿ ಮಾತನಾಡಿ, ಸಂಗೀತ ಕಲಾವಿದೆ ಬೆಂಗಳೂರು ನಾಗರತ್ನಮ್ಮ ಅವರು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿ ದೇವಸ್ಥಾನ ಕಟ್ಟಿಸಿ ಸಂಗೀತ ಕಾರ್ಯಕ್ರಮಗಳನ್ನು ಪ್ರೊತ್ಸಾಹಿಸಿದ್ದರು. ಆದರೆ, ಇದೀಗ ಅಲ್ಲಿ ನಾಗರತ್ನಮ್ಮ ಅವರ ಪ್ರತಿಮೆ ಇದ್ದರೂ, ದೇವಸ್ಥಾನದ ಉತ್ಸವದ ವೇಳೆ ಅವರ ಪ್ರತಿಮೆಗೆ ತೆರೆ ಹಾಕಲಾಗುತ್ತಿರುವುದು ಬಹುದೊಡ್ಡ ದುರಂತ. ಹೀಗಾಗಿ, ಮುಂದಿನ ಜನವರಿ ತಿಂಗಳಿನಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ ನಾಗರತ್ನಮ್ಮ ಅವರಿಗೆ ಗೌರವ ಸಲ್ಲಿಸಲಾಗುವುದೆಂದು ನುಡಿದರು.ಾರ್ಯಕ್ರಮದಲ್ಲಿ ಲೇಖಕ ಡಾ.ಎನ್.ಜಗದೀಶ್ ಕೊಪ್ಪ, ಗಾಯಕಿ ಡಾ.ಸುಮಾ ಸುೀಂದ್ರ, ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್.ಸುರೇಶ್, ಲೇಖಕಿ ಪೂರ್ಣಿಮಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News