ವಾಯು ದಾಳಿಯಲ್ಲಿ 23 ಸಾವು
Update: 2016-04-01 23:55 IST
ಬೆರೂತ್, ಎ. 1: ಸಿರಿಯ ರಾಜಧಾನಿ ಡಮಾಸ್ಕಸ್‌ನ ಬಂಡುಕೋರ ನಿಯಂತ್ರಣದ ಉಪನಗರವೊಂದರ ಮೇಲೆ ಸಿರಿಯದ ಸರಕಾರಿ ಪಡೆಗಳು ಗುರುವಾರ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಡೇರ್ ಅಲ್ ಅಸಾಫಿರ್ ಎಂಬ ಪಟ್ಟಣದ ಮೇಲೆ ನಡೆದ ವಾಯು ದಾಳಿಯಲ್ಲಿ ನಾಲ್ವರು ಮಕ್ಕಳು ಹಾಗೂ ಕೆಲವು ನಾಗರಿಕ ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇಲ್ಲಿ ಸುಮಾರು 2,700 ಕುಟುಂಬಗಳು ವಾಸಿಸುತ್ತಿವೆ.
ಯುದ್ಧವಿರಾಮದ ಹೊರತಾಗಿಯೂ ಪೂರ್ವ ಘೌಟ ಪ್ರದೇಶದಲ್ಲಿ ಸಂಘರ್ಷ ಮುಂದುವರಿದಿದೆ.