×
Ad

ಶಾಂತಿಪಾಲಕರಿಗೆ ಕೋರ್ಟ್ ಮಾರ್ಶಲ್

Update: 2016-04-02 23:59 IST

ಬಂಗುಯಿ (ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್), ಎ. 2: ವಿಶ್ವಸಂಸ್ಥೆಯ ಶಾಂತಿ ಪಾಲಕರು ತಮ್ಮ ನಿಯೋಜನೆಯ ಸ್ಥಳಗಳಲ್ಲಿ ನಡೆಸುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ಪ್ರತಿಜ್ಞೆಯನ್ನು ಮಾಡಿರುವ ವಿಶ್ವಸಂಸ್ಥೆ, ಇದಕ್ಕಾಗಿ ಡಿಎನ್‌ಎ ಪರೀಕ್ಷೆ ಮತ್ತು ಕೋರ್ಟ್ ಮಾರ್ಶಲ್ (ಸೈನಿಕ ನ್ಯಾಯಾಲಯದ ವಿಚಾರಣೆ)ಗಳ ಇಂಗಿತವನ್ನು ವ್ಯಕ್ತಪಡಿಸಿದೆ.

‘‘ಅಸಹ್ಯ ಕೃತ್ಯಗಳು ನಡೆದ ದೇಶಗಳಲ್ಲಿ ಸ್ಥಳದಲ್ಲೇ ಕೋರ್ಟ್ ಮಾರ್ಶಲ್‌ಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಸದಸ್ಯ ದೇಶಗಳೊಂದಿಗೆ ನಾವು ಚರ್ಚಿಸುತ್ತೇವೆ’’ ಎಂದು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳ ಅಧೀನ ಕಾರ್ಯದರ್ಶಿ ಹರ್ವ್ ಲ್ಯಾಡ್ಸೋಸ್ ಶುಕ್ರವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News