’ಅಝರ್’ ಚಿತ್ರದ ಟ್ರೈಲರ್‌ನ್ನು ಒಂದೇ ದಿನದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ
ಮುಂಬೈ, ಮಾರ್ಚ್.3: ಭಾರತದ ಕ್ರಿಕೆಟ್ ಟೀಮ್‌ನ ಮಾಜಿ ನಾಯಕ ಮೊಹಮ್ಮದ್ ಅಝರುದ್ದೀನ್‌ರ ಜೀವನಾಧಾರಿತ ಸಿನೆಮಾ ಅಝ್ಹರ್‌ನ ಟ್ರೈಲರ್ ಎಪ್ರಿಲ್ ಒಂದರಂದು ಬಿಡುಗಡೆಯಾಗಿದೆ.
ಕೇವಲ ಒಂದು ದಿನದಲ್ಲಿ 4ಲಕ್ಷ 65ಸಾವಿರ ಮಂದಿ ಟ್ರೈಲರ್‌ನ್ನ ವೀಕ್ಷಿಸಿದ್ದಾರೆಂದು ವರದಿಯಾಗಿದೆ. ಸಿನೆಮಾದಲ್ಲಿ ಅಝರುದ್ದೀನ್‌ರ ಪಾತ್ರವನ್ನು ಇಮ್ರಾನ್ ಹಾಶ್ಮಿ ನಿರ್ವಹಿಸುತ್ತಿದ್ದಾರೆ. ಅಝ್ಹರ್‌ರ ಮೊದಲ ಪತ್ನಿ ನೌರಿನ್‌ರ ಪಾತ್ರವನ್ನು ಪ್ರಾಚಿ ದೇಸಾಯಿ ಮತ್ತು ಸಂಗೀತಾ ಬಿಜಲಾನಿಯ ಪಾತ್ರವನ್ನು ನರ್ಗೀಸ್ ಫಕ್ರಿ ವಹಿಸುತ್ತಿದ್ದಾರೆ.
ಟ್ರೈಲರ್‌ನಲ್ಲಿ ಸಿನೆಮಾದಲ್ಲಿ ಮನರಂಜನೆಯ ಎಲ್ಲ ಮಸಾಲೆಯನ್ನು ಮಿಶ್ರಣ ಮಾಡಿರುವುದು ವ್ಯಕ್ತವಾಗುತ್ತಿದೆ. ಸಿನೆಮಾ ಅಝರ್‌ರ ಜೀವನದ ಕ್ಷಣಗಳನ್ನು ತೋರಿಸಲಾಗಿದೆ. ಹೇಗೆ ಅವರು ಭಾರತ ತಂಡದ ನಾಯಕರಾದರು. ಪಾಕಿಸ್ತಾನ ತಂಡದ ಆಟಗಾರ ಹೇಗೆ ಅವರನ್ನು ತನ್ನ ಜೊತೆ ಸೇರಲು ಆಹ್ವಾನ ನೀಡುತ್ತಿದ್ದರು. ಮತ್ತು ಕೆರಿಯರ್‌ನ ಕೊನೆಯಲ್ಲಿ ಹೇಗೆ ಅವರ ಹೆಸರು ಮ್ಯಾಚ್‌ಫಿಕ್ಸಿಂಗ್‌ನಲ್ಲಿ ತಳಕು ಹಾಕಿಕೊಂಡಿತು ಎಂಬುದನ್ನು ಸಿನೆಮಾದಲ್ಲಿ ತೋರಿಸಲಾಗುತ್ತಿದೆ.
ಸಿನೆಮಾದಲ್ಲಿ ಅಝರ್‌ರ ಕ್ರಿಕೆಟ್ ಮತ್ತು ಲವ್‌ಲೈಫ್ ಒಳಗೊಂಡಿದೆ ಎನ್ನಲಾಗಿದ್ದು ಇದಕ್ಕಿಂತ ಮೊದಲು ಅಝರುದ್ದೀನ್ ಮತ್ತು ಇಮ್ರಾನ್ ಹಾಶ್ಮಿಯ ಒಂದು ವೀಡಿಯೋವನ್ನು ಸಿನೆಮಾ ನಿರ್ಮಾಪಕರು ಹೊರಗೆ ಬಿಟ್ಟಿದ್ದು ಅದು ಭಾರೀ ಜನಪ್ರಿಯತೆ ಗಳಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.