ಶ್ರೀಮಂತ ದಲಿತರು ಮೀಸಲಾತಿ ಪಡೆಯಬಾರದು: ಚಿರಾಗ್ ಪಾಸ್ವಾನ್

Update: 2016-04-12 04:52 GMT

ನವದೆಹಲಿ: ಶ್ರೀಮಂತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಪಹಲ್ ಯೋಜನೆಯಡಿಯಲ್ಲಿ ತ್ಯಾಗ ಮಾಡಿದಂತೆ ಶ್ರೀಮಂತ ದಲಿತರು ಹಾಗೂ ಆರ್ಥಿಕವಾಗಿ ಸಬಲರಾಗಿರುವ ಇತರ ಸಮುದಾಯದವರುಮೀಸಲಾತಿ ಸೌಭ್ಯವನ್ನು ಪಡೆಯುವುದನ್ನು ಸ್ವ ಇಚ್ಛೆಯಿಂದ ನಿಲ್ಲಿಸಬೇಕೆಂದು ಲೋಕ್ ಜನಶಕ್ತಿ ಪಕ್ಷದ (ಎಲ್‌ಜೆಪಿ) ಸದಸ್ಯ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ‘‘ಶ್ರೀಮಂತರು ಮೇಲೆ ಹೇಳಿದಂತೆ ಮಾಡಿದಾಗ ಅವರು ಇತರ ಸಮುದಾಯಗಳ ಅಭಿವೃದ್ಧಿಗೆ ಸಹಕರಿಸಿದಂತಾಗುತ್ತದೆ. ವಾಸ್ತವವಾಗಿ ಮೀಸಲಾತಿಯ ತೀರಾ ಅಗತ್ಯವಿರುವವರಿಗೆ ಇಂತಹ ಕ್ರಮದಿಂದ ಹೆಚ್ಚಿನ ಪ್ರಯೋಜನವಾಗುತ್ತದೆ,’’ಎಂದು ಪಾಸ್ವಾನ್ ಹೇಳಿದರು.
ಬಿಹಾರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಪಾಸ್ವಾನ್ ಇಂತಹ ಒಂದು ಕ್ರಮ ಯಾವುದೇ ಕಾನೂನಿನ ಮುಖಾಂತರವಲ್ಲದೆ ಸ್ವಇಚ್ಛೆಯಿಂದ ಜಾರಿಯಾಗಬೇಕು, ಎಂದರು. ‘ಜಾತಿರಹಿತ’ ಸಮಾಜದ ಸ್ಥಾಪನೆಯಾಗುವುದೆಂಬ ಆತ್ಮವಿಶ್ವಾಸ ತನಗಿದೆಯೆಂದು ಹೇಳಿದ ಅವರು ಇದು ತಮ್ಮ ಅಂತಿಮಗುರಿಯೆಂದು ಹೇಳಿದರು.
ಹಲವಾರು ಪ್ರಬಲ ದಲಿತ ನಾಯಕರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಮಾಯಾವತಿಯವರನ್ನು ಕಟುವಾಗಿ ಟೀಕಿಸಿದ ಜೂನಿಯರ್ ಪಾಸ್ವಾನ್ ‘ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಅಧಿಕಾರಗಳೂ ಅವರಲ್ಲಿ ಕೇಂದ್ರೀಕೃತವಾಗಿದ್ದವು. ಆಕೆಗೆ ಬೇಕಿದ್ದಲ್ಲಿ ತನ್ನ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಆದರೆ ಆಕೆ ಪ್ರತಿಮೆಗಳನ್ನುನಿರ್ಮಿಸುವಲ್ಲಿಯೇ ೆಚ್ಚು ಆಸಕ್ತಿ ವಹಿಸಿದ್ದರು’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News