ನಿಮ್ಮ ನೆನಪಿನ ಶಕ್ತಿ ಕುಂದಿಸುವ 5 ಕಾರಣಗಳು

Update: 2016-07-27 18:51 GMT

ನೆನಪು ಶಕ್ತಿ ಎನ್ನುವುದು ಯಾವುದೇ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯವಾಗಿದೆ. ಆದರೆ ವಯಸ್ಸಾದಂತೆ ನೆನಪು ಶಕ್ತಿ ಕುಸಿಯುತ್ತದೆ. ಅದನ್ನು ಡೆಮೆನ್ಷಿಯ ಎನ್ನುತ್ತೇವೆ. ನಿಮ್ಮ ನೆನಪಿನ ಶಕ್ತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಐದು ಅಂಶಗಳಿವು.
1. ಋತುಸ್ರಾವ
ಇದು ಮಹಿಳೆಯರನ್ನು ಬಾಧಿಸುವ ಸಮಸ್ಯೆ. ಋತುಸ್ರಾವದ ಸಮಸ್ಯೆಯಲ್ಲಿ ತಾತ್ಕಾಲಿಕವಾಗಿ ಮರೆವು ಇರುತ್ತದೆ. ಇದು ಮಹಿಳೆಯರಿಗೆ ಅಹಿತಕರ ಸ್ಥಿತಿ ತರುತ್ತದೆ. ಋತುಸ್ರಾವ ವ್ಯಕ್ತಿಯ ನಿದ್ದೆಯ ಮೇಲೆ ಪರಿಣಾಮ ಬೀರಿ, ಅದರಿಂದ ಮೆದುಳಿನ ಕೆಲಸಗಳು ಅಸ್ತವ್ಯಸ್ಥವಾಗಿ ನೆನಪಿನ ಮೇಲೆ ಏಟು ಬೀಳುತ್ತದೆ.
2. ನಿದ್ದೆಯ ಕೊರತೆ
ನಿದ್ದೆಯ ಕೊರತೆ ನೆನಪಿನ ಶಕ್ತಿಯ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅಧ್ಯಯನಗಳ ಪ್ರಕಾರ ನರವ್ಯೆಹ ಉತ್ತಮವಾಗಿ ಕೆಲಸ ಮಾಡಲು ನಿದ್ದೆ ಅತ್ಯಗತ್ಯ. ನಿದ್ದೆ ಕೊರತೆ ಇದ್ದಾಗ ಜನರು ಸಣ್ಣ ವಿವರವನ್ನೂ ನೆನಪಿಸಿಕೊಳ್ಳಲು ಕಷ್ಟಪಡುತ್ತಾರೆ.
3. ಥೈರಾಯ್ಡ ಸಮಸ್ಯೆಗಳು
ಹೈಪೊಥೈರಾಯ್ಡಿಸಂ ನಿರ್ದಿಷ್ಟವಾಗಿ ಸಮಸ್ಯೆ ತರುತ್ತದೆ. ಈ ಸಮಸ್ಯೆ ಇದ್ದವರ ನಿದ್ದೆಗೆ ತೊಂದರೆಯಾಗಿ ಖಿನ್ನತೆ ಬರುತ್ತದೆ. ಹೀಗಾಗಿ ನಿದ್ದೆ ಕೊರತೆ ಮತ್ತು ಖಿನ್ನತೆಯಿಂದ ನೆನಪಿನ ಶಕ್ತಿ ಮೇಲೆ ಬರೆ ಬೀಳುತ್ತದೆ.
4. ಉದ್ರೇಕ ಮತ್ತು ಹತಾಶೆ
ನಾವು ಉದ್ರೇಕಗೊಂಡಾಗ ದೇಹ ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸಾಲ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಮೆದುಳಿನ ಕೋಶಗಳು ಸಿನಾಪ್ಸಿಸ್ ಕಳೆದುಕೊಳ್ಳುತ್ತವೆ. ಇದು ನೆನಪು ಮರುಕಳಿಸುವಲ್ಲಿ ಸಮಸ್ಯೆ ತರುತ್ತದೆ.
5. ಧೂಮಪಾನ

ಧೂಮಪಾನ ಮಾಡುವವರ ನೆನಪಿನ ಶಕ್ತಿ ಧೂಮಪಾನ ಮಾಡದವರಿಗೆ ಹೋಲಿಸಿದರೆ ಕಡಿಮೆಯಾಗಿರುತ್ತದೆ. ಧೂಮಪಾನ ಮಾಡುವಾಗ ರಕ್ತ ಮೆದುಳಿಗೆ ಸಂಚಾರಗೊಳ್ಳುವುದರ ಮೇಲೆ ಈ ಬದಲಾವಣೆ ಬರುತ್ತದೆ. ಮೆದುಳಿನಲ್ಲಿ ರೂಪುಗೊಳ್ಳುವ ಅಸಹಜ ಪ್ರೊಟೀನುಗಳು ಮಾಹಿತಿ ಹಂಚಿಕೆಯ ಮೇಲೆ ಪರಿಣಾಮ ಬೀರುತ್ತದೆ. ಋತುಸ್ರಾವ ಹೊರತಾಗಿ ಉಳಿದ ಸಮಸ್ಯೆಗಳನ್ನು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ನಿವಾರಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News