×
Ad

ಸುಪ್ರೀಂಕೋರ್ಟ್ ವಿಮರ್ಶೆ: ನವಹರಿಜನ್ ಪರಾಮರ್ಶೆಯನ್ನು ಹಿಂದೆಗೆದ ವಕೀಲೆ ಕಾಮಿನಿ ಜೈಸ್ವಾಲ್

Update: 2016-04-14 13:25 IST

ಹೊಸದಿಲ್ಲಿ, ಎ. 14: ಶಬರಿಮಲೆ ಪ್ರಕರಣದಲ್ಲಿ ವಾದದ ನಡುವೆ ಪ್ರಮುಖ ವಕೀಲೆ ಕಾಮಿನಿ ಜೈಸ್ವಾಲ್‌ ಹೇಳಿದ್ದ ಮಾತೊಂದು ಸುಪ್ರೀಂಕೋರ್ಟ್‌ನ ಕೋಪಕ್ಕೆ ಕಾರಣವಾಗಿತ್ತು. ಆದ್ದರಿಂದ ಅವರು ತನ್ನ ಹೇಳಿಕೆಯನ್ನು ಹಿಂದೆಗೆದಿದ್ದಾರೆಂದು ವರದಿಗಳು ತಿಳಿಸಿವೆ.

ಸಮಾಜದಲ್ಲಿ ಸಮಾನತೆಯನ್ನು ನಿರಾಕರಿಸಲಾಗುತ್ತಿರುವ ಮಹಿಳೆ ನವ ಹರಿಜನ್ ಆಗಿ ಮಾರ್ಪಟಿದ್ದಾರೆಂದು ಕಾಮಿನಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುವಾಗ ಹೇಳಿದ್ದರು. ಶಬರಿ ಮಲೆ ವಿಷಯದಲ್ಲಿ ತನ್ನ ಮಹಿಳಾ ಪರ ನಿಲುವನ್ನು ಪ್ರತಿಪಾದಿಸುವ ನಡುವೆ ಅಡ್ವೊಕೇಟ್ ಕಾಮಿನಿ ಜೈಸ್ವಾಲ್‌ ಹೇಳಿದ ಮಾತು ದಲಿತ ವಿರೋಧಿಯೆಂದು ಅನಿಸುವ ರೀತಿಯಲ್ಲಿ ಪರಾಮರ್ಶೆ ನಡೆಯಿತು. ಕಾನೂನು ಅರಿತಿರುವ ಒಬ್ಬ ವ್ಯಕ್ತಿ ಹೇಳುವ ಮಾತಿದಲ್ಲ ಎಂದು ಜಸ್ಟಿಸ್ ಗೋಪಾಲ ಗೌಡರು ನೆನಪಿಸಿದ್ದರು. ಹರಿಜನರನ್ನು ಪ್ರತ್ಯೇಕಿಸಿ ನೋಡುವುದಿಲ್ಲ ಎಂದು ಸಂವಿಧಾನ ವ್ಯಕ್ತಪಡಿಸಿದೆ. ಇಷ್ಟು ಕಾನೂನು ತಿಳಿದಿರುವ ಒಬ್ಬರು ನವಹರಿಜನ ಎಂಬ ಮಾತು ಬಳಸಿದಾಗ ಅದು ತಪ್ಪು ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ ಎಂದು ಗೌಡ ಹೇಳಿದರು. ಆನಂತರ ಕೋರ್ಟು ಹೇಳುವುದನ್ನು ನಾನು ಸಂಪೂರ್ಣ ಒಪ್ಪುತ್ತೇನೆ ಎಂದು ಹೇಳಿದ ಕಾಮಿನಿ ತನ್ನ ಪದಪ್ರಯೋಗವನ್ನು ಹಿಂದೆಗೆದರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News