ಆದರ್ಶ

Update: 2016-04-20 19:00 GMT

ಸ್ವಾತಂತ್ರ್ಯೋತ್ತರ ಕಂಪನ ಇತಿಹಾಸ

ಭಾರತದಲ್ಲಿ ಜನಸಾಮಾನ್ಯರು ನೆನಪಲ್ಲಿಟ್ಟುಕೊಂಡ ಏಕೈಕ ಭೀಕರ ಭೂಕಂಪವೆಂದರೆ 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ. ಇದು 20 ಸಾವಿರ ಮಂದಿಯನ್ನು ಬಲಿ ಪಡೆದಿತ್ತು. 2004ರ ಸುನಾಮಿಗೆ ಕಾರಣವಾದದ್ದು ಮೂರನೆ ಅತ್ಯಂತ ಭೀಕರ ಭೂಕಂಪ. ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆ 9.3ರಷ್ಟು ದಾಖಲಾಗಿತ್ತು. ಅಂಡಮಾನ್ ನಿಕೋಬಾರ್ ದ್ವೀಪ ಇರುವ ನೆರೆಯ ಬರ್ಮಾ ಪದರದ ಬಳಿ ಮಾಮೂಲಿ ಪ್ರಕ್ರಿಯೆಗೆ ಭಿನ್ನವಾಗಿ ಭೀಕರ ಪ್ರಮಾಣದ ಚಂಚಲತೆಯಿಂದ ಭಾರತೀಯ ಪದರ ಜಾರಿದ್ದು ಇದಕ್ಕೆ ಕಾರಣ. ಇದು ಭೂಮಿಯ ಚಿಪ್ಪಿನಲ್ಲಿ ಸುಮಾರು 100 ಕಿಲೋಮೀಟರ್ ಉದ್ದದ ಬಿರುಕಿಗೆ ಕಾರಣವಾಯಿತು. ಇದರಿಂದ ಸಮುದ್ರದ ಮೇಲ್ಮೈ ಅಲೆಗಳು ಎತ್ತರಕ್ಕೆ ಬೆಳೆದು, ಜಲರಾಶಿ ಮೇಲಕ್ಕೆ ಚಿಮ್ಮಿತು. ಇದು ದೈತ್ಯ ಅಲೆಗಳಾಗಿ ಅಪ್ಪಳಿಸಿ 14 ದೇಶಗಳ 2.30 ಲಕ್ಷ ಮಂದಿಯನ್ನು ಬಲಿ ಪಡೆಯಿತು.
ಭಾರತದ ಮೆಟ್ರೊಪಾಲಿಟನ್ ನಗರಗಳು ಎಂದೂ ಭೀಕರ ಭೂಕಂಪವನ್ನು ಕಂಡಿಲ್ಲ. ದಿಲ್ಲಿ ಭೂಕಂಪದ ನಾಲ್ಕನೆ ವಲಯದಲ್ಲಿ, ಮುಂಬೈ, ಚೆನ್ನೈ ಹಗೂ ಕೊಲ್ಕತಾ 3ನೆ ವಲಯದಲ್ಲಿದ್ದರೂ ಇದುವರೆಗೆ ಅಂಥ ಭೀಕರ ಹಾನಿ ಈ ನಗರಗಳಲ್ಲಿ ಸಂಭವಿಸಿಲ್ಲ.
-ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !