ಹಿಂದೂ ಮಹಿಳೆಯರ ಸುರಕ್ಷತೆಗಾಗಿ ಮುಸ್ಲಿಮರಿಗೆ ಎರಡಕ್ಕಿಂತ ಹೆಚ್ಚು ಗಂಡು ಮಕ್ಕಳಿರಲು ಬಿಡಬಾರದು !
ನವದೆಹಲಿ : ವಿವಾದಿತ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈಗ ಹೊಸ ಫಾರ್ಮುಲಾ ಹೊರತಂದಿದ್ದಾರೆ. ಹಿಂದೂ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಮುಸ್ಲಿಮರು ಎರಡು ಗಂಡು ಮಕ್ಕಳನ್ನು ಮಾತ್ರ ಹೊಂದುವಂತೆ ಮಾಡುವನೀತಿಯನ್ನು ಜಾರಿಗೆ ತರಬೇಕೆಂಬ ಸಲಹೆಯನ್ನು ಈ ಸಂಸದ ನೀಡಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಭಾರತ ತನ್ನ ಜನಸಂಖ್ಯಾ ನೀತಿಯನ್ನು ಬದಲಿಸದೇ ಹೋದಲ್ಲಿ ‘‘ನಮ್ಮ ಹೆಣ್ಣು ಮಕ್ಕಳ ಸುರಕ್ಷತೆ ಅಪಾಯದಲ್ಲಿರುತ್ತದೆ ಹಾಗೂ ಅವರನ್ನು ಪಾಕಿಸ್ತಾನದಲ್ಲಿ ಮಾಡಿದಂತೆಬುರ್ಖಾದ ಹಿಂದೆ ಇರುವಂತೆ ಮಾಡಬೇಕಾಗುತ್ತದೆ,’’ಎಂದವರು ಹೇಳಿದರು.
‘‘ಹಿಂದೂ ಕಾ ಬೇಟಾ ಹೋ ಔರ್ ಮುಸಲ್ಮಾನ್ ಕೊ ಭಿ ದೋ ಹೀ ಬೇಟಾ ಹೋನಾ ಚಾಹಿಯೇ. ಹಮಾರಿ ಆಬಾದಿ ಘಟ್ ರಹಿ ಹೈ. ಬಿಹಾರ್ ಮೇ ಸಾತ್ ಜಿಲಾ ಐಸಾ ಹೈ ಜಹಾನ್ ಹಮಾರಿ ಜನಸಂಖ್ಯಾ ಘಟ್ ರಹೀ ಹೈ, ಜನಸಂಖ್ಯಾ ನಿಯಂತ್ರಣ್ ಕೆ ನಿಯಮ್ ಕೊ ಬದಲ್ನಾ ಹೋಗಾ, ತಭಿ ಹಮಾರಿ ಬೇಟಿಯಾನ್ ಸುರಕ್ಷಿತ್ ರಹೇಗಿ. ನಹೀ ತೋ ಹಮೇ ಭೀ ಪಾಖಿಸ್ತಾಣ್ ಕಿ ತರಹ್ ಅಪ್ನಿ ಬೇಟಿಯೋಂಕೆ ಪರ್ದೆ ಮೇ ಬಂದ್ ಕರ್ನಾ ಹೋಗಾ,’’ಎಂದು ಹಿಂದಿಯಲ್ಲಿ ಹೇಳಿದ್ದಾರೆಂದು ವರದಿ ತಿಳಿಸಿದೆ.
ಪಶ್ಚಿಮ ಚಂಪಾರನ್ ಪ್ರದೇಶದ ಬಗಹದಲ್ಲಿ ಸಾಂಸ್ಕೃತಿಕ ಯಾತ್ರೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರುಜನಸಂಖ್ಯಾ ನೀತಿಯಲ್ಲಿ ಬದಲಾವಣೆ ತರದೇ ಹೋದಲ್ಲಿ ಎಲ್ಲರೂ ‘ಭರತವರ್ಷ’ವನ್ನು ಕಳೆದುಕೊಳ್ಳಲಿದ್ದಾರೆಂದುಹಲವಾರು ಸಾಧುಗಳು ಹಾಗೂ ಆರೆಸ್ಸೆಸ್ ಕಾರ್ಯಕರ್ತರಿದ್ದ ಸಮಾರಂಭದಲ್ಲಿ ಅವರು ಹೇಳಿದರು.
ನರೇಂದ್ರ ಮೋದಿಯವರಿಗೆ ಮತ ನೀಡಲು ಇಚ್ಛಿಸದವರು ಪಾಕಿಸ್ತಾನಕ್ಕೆ ಹೋಗಬೇಕೆಂದು ಲೋಕಸಭಾ ಚುನಾವಣೆಯ ಮುನ್ನ ಗಿರಿರಾಜ್ ಸಿಂಗ್ ಹೇಳಿ ವಿವಾದ ಸೃಷ್ಟಿಸಿದ್ದರೆ,ನಂತರ ರಾಜೀವ್ ಗಾಂಧಿಯವರು ಬಿಳಿ ಚರ್ಮದ ಸೋನಿಯಾ ಬದಲು ನೈಜೀರಿಯಾದ ಮಹಿಳೆಯನ್ನು ವಿವಾಹವಾಗಿದ್ದರೆ, ಕಾಂಗ್ರೆಸ್ ಆಕೆಯನ್ನು ಪಕ್ಷದ ಅಧ್ಯಕ್ಷೆಯಾಗಿ ಒಪ್ಪುತ್ತಿರಲಿಲ್ಲವೆಂದು ಹೇಳಿ ವಿವಾದಕ್ಕೀಡಾಗಿದ್ದರು.