ಇಕ್ವೆಡಾರ್: ಇನ್ನೊಂದು ಭೂಕಂಪ
Update: 2016-04-22 23:54 IST
ಕ್ವಿಟೊ, ಎ. 22: ಕಳೆದ ಶನಿವಾರ ಸಂಭವಿಸಿದ ಭೀಕರ ಭೂಕಂಪದ ವಿನಾಶಕಾರಿ ಪರಿಣಾಮದಿಂದ ಚೇತರಿಸಿಕೊಳ್ಳಲು ಇಕ್ವೆಡಾರ್ ಪರದಾಡುತ್ತಿರುವಂತೆಯೇ, ರಿಕ್ಟರ್ ಮಾಪಕದಲ್ಲಿ 6 ರಷ್ಟಿದ್ದ ತೀವ್ರತೆಯ ಪಶ್ಚಾತ್ ಕಂಪನವೊಂದು ಇಕ್ವೆಡಾರ್ ಕರಾವಳಿಯ ಸಮೀಪ ಗುರುವಾರ ಸಂಭವಿಸಿದೆ ಎಂದು ಅಮೆರಿಕದ ಭೂಕಂಪ ಶಾಸ್ತ್ರ ಇಲಾಖೆಯ ಪರಿಣತರು ಹೇಳಿದ್ದಾರೆ. ಶನಿವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 600ನ್ನು ದಾಟಿದೆ.
ಬಹಿಯ ಡಿ ಕರಗ್ವೆಝ್‌ನ ವಾಯುವ್ಯಕ್ಕೆ 33 ಕಿ.ಮೀ. ದೂರದಲ್ಲಿ ಸ್ಥಳೀಯ ಸಮಯ ರಾತ್ರಿ 10.03ಕ್ಕೆ ಭೂಮಿ ಕಂಪಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿತು.ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿದ ಬಗ್ಗೆ ವರದಿಗಳು ಬಂದಿಲ್ಲ.