×
Ad

ಹಸಿದಿದ್ದು, ಹಣವಿಲ್ಲದವರಿಗೆ ಪ್ರಕಾಶ್‌ರ ಹೊಟೇಲಲ್ಲಿ ಉಚಿತ ಊಟ!

Update: 2016-04-23 10:51 IST

ನಾವೆಲ್ಲೂ ಹೊಟೇಲಿಗೆ ಹೋಗುವುದು ಹಸಿದ ಹೊಟ್ಟೆಯನ್ನು ತಣ್ಣಗಾಗಿಸಲು. ಆದರೆ ಹೊಟೇಲ್ ಹೊರಗೆ ಹಸಿವಿನಿಂದ ಆಹಾರಕ್ಕಾಗಿ ಬೇಡುತ್ತಾ ಕುಳಿತಿರುವವರನ್ನು ಬಹುತೇಕ ಅಲಕ್ಷಿಸುತ್ತೇವೆ. ಇಂಡಿಯನ್ ಫ್ಯೂಷನ್ ಹೊಟೇಲಿನ ಮಾಲೀಕ ಪ್ರಕಾಶ್ ಛಿಬ್ಬರ್ ಅಂತಹವರ ಸಾಲಿಗೆ ಸೇರಿದ ವ್ಯಕ್ತಿ ಖಂಡಿತಾ ಅಲ್ಲ.

ಅರ್ಲೆರ್ಟಾದ ಎಡ್ಮಂಟನ್‌ನಲ್ಲಿರುವ ಕೆನಡಿಯನ್ ರೆಸ್ಟೊರೆಂಟ್ ಇಂಡಿಯನ್ ಫ್ಯೂಷನ್ ತಮ್ಮ ಹಿಂಬದಿ ಬಾಗಿಲಿನಲ್ಲಿ ಬೋರ್ಡನ್ನು ಹಾಕಿ ಆಹಾರ ಬೇಕಾದವರು ಯಾರು ಬೇಕಾದರೂ ಬರಬಹುದು ಎಂದು ಬರೆದಿದ್ದಾರೆ. ರೆಸ್ಟೊರೆಂಟ್ ಒಳಗೆ ಬಂದು ಅವರು ಉಚಿತ ಊಟವನ್ನು ಪಡೆಯಬಹುದು. ಇವರು ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಪ್ರತ್ಯೇಕವಾಗಿ ಇಡುವ ಜೊತೆಗೆ ಆಹಾರ ಅಲರ್ಜಿಗಳ ಬಗ್ಗೆಯೂ ಗಮನಹರಿಸಿ ತಿನಿಸು ಸಿದ್ಧಪಡಿಸುತ್ತಾರೆ. ನಾನು ಹಿಂದೆ ಸಾಕಷ್ಟು ಹಸಿವೆಯನ್ನು ಕಂಡಿದ್ದೇನೆ. ಹೀಗಾಗಿ ಆಹಾರ ಇಲ್ಲದಿರುವ ನೋವು ಬಲ್ಲೆ ಎನ್ನುತ್ತಾರೆ ಪ್ರಕಾಶ್.

 2009ರಿಂದ ಪ್ರಕಾಶ್ ಈ ರೆಸ್ಟೊರಂಟನ್ನು ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಉಚಿತ ಊಟ ಕೊಡುತ್ತಿದ್ದಾರೆ. ಆದರೆ ಬೋರ್ಡನ್ನು ಕೇವಲ ಆರು ತಿಂಗಳ ಹಿಂದೆಯಷ್ಟೇ ಹಾಕಲಾಗಿದೆ. ನಾನು ಎಷ್ಟು ಮಂದಿಗೆ ಹೋಗಿ ನಿನಗೆ ಹಸಿವಿದೆಯಾ ಎಂದು ಕೇಳಲು ಸಾಧ್ಯ? ಅದು ಸಾಧ್ಯವಿಲ್ಲ. ಹೀಗಾಗಿ ಒಂದು ಬೋರ್ಡನ್ನು ಏಕೆ ಹಾಕಬಾರದು ಎಂದುಕೊಂಡೆ. ಹಸಿವಿದ್ದವರು ಆಗ ಬರಬಹುದು ಎನ್ನುತ್ತಾರೆ.

ಈ ಬೋರ್ಡಿಗೆ ಬರುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅವರು 3-10 ಮಂದಿಗೆ ಉಚಿತ ಊಟ ಕೊಡುತ್ತಾರೆ. ಕೆಲವೊಮ್ಮೆ ಯಾರೂ ಬರುವುದೇ ಇಲ್ಲ. ಆದರೆ ಎಡ್ಮಂಟನ್ ಲೋಕಲ್ ಡಾನಿಯೆಲ್ಲ ಟಿಂಟಿನಗ್ಲಿಯ ಈ ಬೋರ್ಡನ್ನು ಕಂಡು ಅದನ್ನು ಅಂತರ್ಜಾಲ ತಾಣ ಇಮ್ಗರ್‌ನಲ್ಲಿ ಪೋಸ್ಟ್ ಮಾಡಿದ ಕಾರಣ ಲಕ್ಷಾಂತರ ಮಂದಿಗೆ ವಿಷಯ ಗೊತ್ತಾಗಿದೆ. ನಾನು ಎಲ್ಲಿ ಮೊದಲೆಂದೂ ಆಹಾರ ಸೇವಿಸಿಲ್ಲ. ಆದರೆ ಈ ಬೋರ್ಡನ್ನು ಕಂಡ ಮೇಲೆ ಆದಷ್ಟು ಅಲ್ಲೇ ತಿನ್ನಬೇಕು ಮತ್ತು ಅವರಿಗೆ ಬೆಂಬಲ ಕೊಡಲು ಬಯಸಿದ್ದೇನೆ. ಇದು ಅದ್ಭುತ ಕಲ್ಪನೆ ಎಂದು ಅವರು ಪೋಸ್ಟಲ್ಲಿ ಬರೆದಿದ್ದರು.

1992ರಲ್ಲಿ ದೊಡ್ಡ ಅಪಘಾತವೊಂದರಿಂದ ಎರಡೂವರೆ ವರ್ಷ ಮಲಗಿದ್ದಲ್ಲೇ ಇದ್ದ ಪ್ರಕಾಶ್ ಹಣದ ಕೊರತೆಯಿಂದ ಸ್ನೇಹಿತರಿಂದ ಸಾಲ ಪಡೆಯಬೇಕಾಗಿ ಬಂದಿತ್ತು. ನನಗೆ ಒಂಭತ್ತು ಮಲ್ಟಿಪಲ್ ಫ್ಯಾಕ್ಚರ್ ಆಗಿತ್ತು. ಐದು ಸ್ಟೀಲ್ ರಾಡ್‌ಗಳನ್ನು ನನ್ನ ದೇಹದಲ್ಲಿ ಇಟ್ಟು ಮೂಳೆಗಳಿಗೆ ಬಲ ನೀಡಲಾಗಿದೆ. ಒಂದು ದಿನ ನನ್ನ ಬಳಿ ಮತ್ತು ಪತ್ನಿಯ ಬಳಿ ತಿನ್ನಲು ಏನೂ ಇರಲಿಲ್ಲ. ಹಣವೂ ಇರಲಿಲ್ಲ. ಹಣದ ಸಹಾಯ ಕೇಳಲು ನಾಚಿಕೆಯಾಗಿತ್ತು. ಹೀಗಾಗಿ ನಾನು ಮತ್ತು ಪತ್ನಿ ಊಟದ ಸಮಯದಲ್ಲಿ ಸ್ನೇಹಿತರ ಮನೆಗೆ ಭೇಟಿ ಕೊಡಲು ತೀರ್ಮಾನಿಸಿದೆವು ಎಂದು ನೆನಪಿಸಿಕೊಳ್ಳುತ್ತಾರೆ ಪ್ರಕಾಶ್. ಹೀಗೆ ದಂಪತಿ ಎರಡು ಭಿನ್ನ ಸ್ನೇಹಿತರ ಮನೆಗೆ ಹೋಗಿ ರಾತ್ರಿಯೂಟ ಮಾಡಿದ್ದರು. ಹೊಸ ಜೀವನವನ್ನು ಅರಸಿ 2005ರಲ್ಲಿ ಕೆನಡಾಗೆ ವಲಸೆ ಹೋದರು. ನಾಲ್ಕು ವರ್ಷದ ನಂತರ ಅವರು ಇಂಡಿಯನ್ ಫ್ಯೂಷನ್ ತೆರೆಯಲು ಸಾಧ್ಯವಾಯಿತು. ಹಸಿವೆಯಲ್ಲಿದ್ದವರಿಗೆ ಆಹಾರ ಒದಗಿಸುವಾಗ ಅವರಿಗೆ ಎಂದೂ ಹಣದ ಚಿಂತೆ ಬದಲಿಲ್ಲ. ಮುಂದಿನ ಬಾಗಿಲು ನನ್ನ ಬಿಲ್ಲುಗಳನ್ನು ಪಾವತಿಸಲು. ಹಿಂದಿನ ಬಾಗಿಲು ನನ್ನ ಖಾಸಗಿ ವಿಷಯ ಎಂದು ನಾನು ಯಾವಾಗಲೂ ತಮಾಷೆಯಾಡುತ್ತೇನೆ. ಎನ್ನುತ್ತಾರೆ ಪ್ರಕಾಶ್.

ಕೃಪೆ: www.scoopwhoop.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News