×
Ad

ಹಂಗೇರಿ: ವಲಸಿಗರ ಅಕ್ರಮ ಸಾಗಣೆ; ಭಾರತೀಯನ ಸೆರೆ

Update: 2016-04-24 23:48 IST

ಬುಡಾಪೆಸ್ಟ್, ಎ. 24: ಆಸ್ಟ್ರಿಯಕ್ಕೆ ಅಕ್ರಮವಾಗಿ ಡಝನ್‌ಗೂ ಅಧಿಕ ವಲಸಿಗರನ್ನು ಸಾಗಿಸಲು ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರು ಬ್ರಿಟಿಶರು ಮತ್ತು ಓರ್ವ ಭಾರತೀಯನನ್ನು ಹಂಗೇರಿಯಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಹಂಗೇರಿ ಪೊಲೀಸರು ತಿಳಿಸಿದರು.
ತನ್ನ ದಕ್ಷಿಣದ ಗಡಿಯನ್ನು ಕಳೆದ ವರ್ಷ ಬಂದ್ ಮಾಡುವವರೆಗೆ ಉತ್ತರ ಯುರೋಪ್‌ಗೆ ಹೋಗಲು ಹಂಗೇರಿ ಪ್ರಮುಖ ಮಾರ್ಗವಾಗಿತ್ತು. ಮಧ್ಯಪ್ರಾಚ್ಯ ಮತ್ತು ಆಫ್ರಿಕದಲ್ಲಿನ ಬಡತನ ಮತ್ತು ಹಿಂಸೆಯಿಂದ ಬೇಸತ್ತು ಲಕ್ಷಾಂತರ ವಲಸಿಗರು ಈ ಮಾರ್ಗದ ಮೂಲಕ ಮುಖ್ಯವಾಗಿ ಜರ್ಮನಿಗೆ ವಲಸೆ ಹೋಗಿದ್ದಾರೆ.
ಹಂಗೇರಿಯ ಗಡಿಯನ್ನು ಬಂದ್ ಮಾಡಿದ ಬಳಿಕ ವಲಸಿಗರು ಕ್ರೊಯೇಶಿಯ ಮತ್ತು ಸ್ಲೊವೇನಿಯಗಳ ಮೂಲಕ ಜರ್ಮನಿಗೆ ಹೋಗುತ್ತಿದ್ದರು. ಈ ಎರಡು ದೇಶಗಳೂ ಈ ವರ್ಷದ ಆದಿ ಭಾಗದಲ್ಲಿ ತಮ್ಮ ಗಡಿಗಳನ್ನು ಮುಚ್ಚಿವೆ.
ಆದರೆ, ವಲಸಿಗರು ಈಗಲೂ ಸಣ್ಣ ಸಣ್ಣ ಗುಂಪುಗಳಲ್ಲಿ ಗಡಿ ದಾಟುತ್ತಲೇ ಇದ್ದಾರೆ. ವಲಸಿಗರನ್ನು ಸಾಗಿಸುವ ವ್ಯಕ್ತಿಗಳನ್ನು ಪೊಲೀಸರು ನಿರಂತರವಾಗಿ ಬಂಧಿಸುತ್ತಲೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News